ಕಬ್ಬಿನ ಗದ್ದೆಗೆ ಆಕಸ್ಮಿಕ ಬೆಂಕಿ: ಅಪಾರ ನಷ್ಟ

 ರಾಯಬಾಗ: ತಾಲೂಕಿನ ಬಾವನಸೌಂದತ್ತಿ ಗ್ರಾಮದ ಹೊರವಲಯದಲ್ಲಿರುವ ಕಬ್ಬಿನ ಗದ್ದೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ನಷ್ಟವಾಗಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. 

ಗ್ರಾಮದ ಸುರೇಶ ಖೆಮಲಾಪೂರೆ, ತಮ್ಮಾನಿ ಮಹಾಜನ, ಬಾಳು ಜಾಧವ, ಬಾಳು ಪವಾರ, ವಸಂತ ಬುವಾ, ನಂದು ಅರಗೆ ಇವರಿಗೆ ಸೇರಿದ್ದ ಸುಮಾರು 25 ಎಕರೆ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿ ಕಟಾವಿಗೆ ಬಂದ ಕಬ್ಬಿನ ಬೆಳೆ ಸುಟ್ಟು ಕರಕಲಾಗಿದೆ. ಬೆಂಕಿ ಅನಾಹುತದಿಂದ ಸುಮಾರು 50 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. 

ವಿಷಯ ತಿಳದಿ ಸ್ಥಳೀಯ ಜನರು ಹಾಗೂ ಅಗ್ನಿ ಶಾಮಕದಳದವರು ಸೇರಿ ಬೆಂಕಿ ನಂದಿಸಲು ಪ್ರಯತ್ನಿಸಿ, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.