ಕಂಪ್ಲಿ 17:ತಾಲ್ಲೂಕು ಸಮೀಪದ ನಂ.10 ಮುದ್ದಾಪುರ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಯಿಂದ ಎರಡು ಮೇವಿನ ಬಣವೆಗಳು ಸುಟ್ಟ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ. ಗ್ರಾಮದ ಬಳ್ಳಾರಿ ತಿಪ್ಪಯ್ಯ ಹಾಗೂ ಬಳ್ಳಾರಿ ಶಿವರುದ್ರ ಎಂಬ ರೈತರಿಗೆ ಸೇರಿದ ಸುಮಾರು 40 ಎಕರೆಯಷ್ಟು ಮೇವಿನ ಬಣವೆಗಳಿಗೆ ಬೆಂಕಿ ತಗುಲಿದ ಪರಿಣಾಮ ಬಣವೆಗಳು ಬೆಂಕಿಗಾಹುತಿಯಾಗಿವೆ. ಬೆಂಕಿ ಅವಘಡದಿಂದ ಸುಮಾರು 1 ಲಕ್ಷ ನಷ್ಟ ಸಂಭವಿಸಿದೆ ಎನ್ನಲಾಗಿದೆ. ಗಂಗಾವತಿಯ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಶ್ರೀರಾಮರಂಗಾಪುರ: ಸಮೀಪದ ಸುಗ್ಗೇನಹಳ್ಳಿ ಗ್ರಾಪಂ ವ್ಯಾಪ್ತಿಯ ಶ್ರೀರಾಮರಂಗಾಪುರ ಗ್ರಾಮದಲ್ಲಿ ರೈತರೊಬ್ಬರು ಸಂಗ್ರಹಿಸಿಟ್ಟ ಲಕ್ಷಾಂತರ ಮೌಲ್ಯರ ಹುಲ್ಲಿನ ಬಣವೆ ಮಂಗಳವಾರ ಬೆಂಕಿಗೆ ಸುಟ್ಟು ಹೋಗಿದೆ. ಆಕಸ್ಮಿಕ ಬೆಂಕಿ ತಗುಲಿ 15 ಎಕರೆಯ ಒಂದು ಹುಲ್ಲಿನ ಬಣವೆ ಸುಟ್ಟು ಕರಕಲಾಗಿದೆ. ಹನುಮಂತಪ್ಪ ಎಂಬ ರೈತನ ಬಣವೆ ಸುಡಲಾಗಿದೆ. ಕುರುಗೋಡು ಅಗ್ನಿ ಶಾಮಕ ದಳದಿಂದ ಬೆಂಕಿ ನಂದಿಸಿದರೂ, ಬಣವೆ ಸುಟ್ಟು ಹೋಗಿದೆ.