ಸೋಗಿಯಲ್ಲಿ ಆಕಸ್ಮಿಕ ಬೆಂಕಿಗೆ 15 ಬಣವೆಗಳು ಭಸ್ಮ

Accidental fire destroyed 15 stacks in Sogi

ಸೋಗಿಯಲ್ಲಿ ಆಕಸ್ಮಿಕ ಬೆಂಕಿಗೆ 15 ಬಣವೆಗಳು ಭಸ್ಮ

ಹೂವಿನಹಡಗಲಿ 16: ಆಕಸ್ಮಿಕ ಬೆಂಕಿಗೆ 15 ಕ್ಕೂ ಹೆಚ್ಚು ಭತ್ತದ ಹುಲ್ಲು .ಮೆಕ್ಕೆಜೋಳ ಪರಾರಿ ಹಾಗೂ  ಕಟ್ಟಿಗೆಗಳು, ಸುಟ್ಟು ಭಸ್ಮವಾದ ಘಟನೆ ತಾಲ್ಲೂಕಿನ ಸೋಗಿ ಗ್ರಾಮದಲ್ಲಿ  ಭಾನುವಾರ ಜರುಗಿದೆ.ಸೋಗಿ ಗ್ರಾಮದ  ರೇಣುಕ  ಹೊರವಲಯದಲ್ಲಿ ಸಂಗ್ರಹಿಸಲ್ಪಟ್ಟ ತೊಗರಿ ಕಟ್ಟಿಗೆ, ಜೋಳದ ಕಣಕಿ, ಮೇವಿನ ಬಣವಿಗಳು ಕೂಡ ಸಂಪೂರ್ಣ ಸುಟ್ಟು ಹೋಗಿವೆ.’ಬೆಂಕಿ ಆವರಿಸುತ್ತಿರುವುದು ಕಂಡ ಕೂಡಲೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಲಾಯಿತು. ಹೂವಿನಹಡಗಲಿ. ಅಗ್ನಿಶಾಮಕ ವಾಹನ ಬರುವಷ್ಟರಲ್ಲಿ ಬೆಂಕಿಯ ವೇಗ ಹೆಚ್ಚಾಗಿ ಸುಟ್ಟು ಭಸ್ಮವಾಗಿವೆ. 20ಕ್ಕೂ ಅಧಿಕ ಯುವಕರು ಬೆಂಕಿ ನಂದಿಸಲು ಪ್ರಯತ್ನಪಟ್ಟರೂ ಪ್ರಯೋಜನವಾಗಲಿಲ್ಲ. ಪರಿಹಾರಕ್ಕೆ ಶಾಸಕರು ಸೂಚನೆ ;ರೈತರಾದ ನಾಗರಾಜ, ಆನಂದ, ಪೀಜರ ನಬೀಸಾಬ್, ಮಂಜಪ್ಪ, ಕೊಟ್ರೇಶ ಅವರಿಗೆ ಸೇರಿದ ಬಣವೆಗಳು ದನಕರುಗಳಿಗೆ ಸಂಗ್ರಹಿಸಿದ್ದ ಭತ್ತದ ಹುಲ್ಲು, ಬಣವಿಗಳು ಭಸ್ಮವಾದ ಹಿನ್ನೆಲೆಯಲ್ಲಿ ತಹಶೀಲ್ದಾರ ಸಂತೋಷ ಕುಮಾರ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ನೀಡಲು ಶಾಸಕ ಎಲ್‌.ಕೃಷ್ಣನಾಯಕ್ ಸೂಚಿಸಿದ್ದಾರೆ. ಸ್ಥಳಕ್ಕೆ ಬಿಜೆಪಿ ಅದ್ಯಕ್ಷ ಮಲ್ಲಿಕಾರ್ಜುನ. ಭೇಟಿ ನೀಡಿದರು.