ಶ್ಯಾಮೀದಸಾಬ ತಾಳಕೇರಿ
ಲೋಕದರ್ಶನ ವರದಿ
ಯಲಬುಗರ್ಾ 22: ಸಹಕಾರಿ ಕ್ಷೇತ್ರ ಎನ್ನುವದು ರೈತರ ಪಾಲಿಗೆ ವರದಾನವೆಂಬ ಗಾದೆ ಇದೆ ಆದರೆ ಯಲಬುಗರ್ಾ ನಗರದಲ್ಲಿ ಪಿಎಲ್ಡಿ ಬ್ಯಾಂಕ್ ಈ ಮಾತಿಗೆ ವಿರೋಧ ಎಂಬಂತೆ ವರದಾನವಾಗುವ ಬದಲು ಮಾರಕವಾಗಿದೆ,
ಪ್ರಕರಣದ ಹಿನ್ನೆಲೆ: ಕಳೆದ ಏಪ್ರೀಲ್ 30,2018ರ ವರೆಗೆ ಬ್ಯಾಂಕ್ ನ ನಗದು ಹಾಗೂ ಕೊನೆಯ ಶಿಲ್ಕು 14,50,359, ಬಾಕಿ ಇದೆ ನಿವೃತ್ತ ವ್ಯವಸ್ಥಾಪಕ ಪಿ ಕೆ ದುಮ್ಮಾಳ ಅವರು ಜಿಲ್ಲಾ ಪಿಕಾರ್ಡ ಬ್ಯಾಂಕ್ಗೆ ಪಾವತಿಸದೆ ಹಾಗೇ ಮುಂದುವರೆಸಿದ್ದಾರೆ ಮತ್ತು ಆಕ್ಟೋಬರ್ 9,2018 ರಿಂದ 12,10,2018ರ ವರೆಗೆ ನಡೆದ ಬ್ಯಾಂಕ್ನ ವಾಷರ್ಿಕ ಲೆಕ್ಕ ತಪಾಸಣಾ ವೇಳೆ ಜಮಾ-ಖಚರ್ು ನಗದು ವ್ಯವಹಾರ ಪರಿಶೀಲಿಸಿದಾಗ ಒಟ್ಟು 22,85,734 ರಷ್ಟು ಹಣ ದುರುಪಯೋಗವಾದ ಬಗ್ಗೆ ಕಂಡು ಬರುತ್ತದೆ, ಹಾಗೂ ನಗದು ರಶೀದಿ ಪಾಸ್ ಮಾಡಿ ನಗದು ಪುಸ್ತಕಕ್ಕೆ ಜಮಾ ಮಾಡದೆ ಹಾಗೆಯೇ ಬಿಟ್ಟಿರುವ ಮೊತ್ತ 3,13,929 ಇದೆ ಇದೇಲ್ಲಾ ಸೇರಿ ಒಟ್ಟು 25,99,663 ಹಣ ದುರುಪಯೋಗವಾಗಿದೆ ಎಂದು ಲೆಕ್ಕ ಪರಿಶೋಧಕ ಅಧಿಕಾರಿಗಳು ತಿಳಿಸಿದ್ದಾರೆ.
ತಾಲೂಕಿನ ಜನತೆ ಸತತ ಐದು ವರ್ಷಗಳಿಂದ ಕಾಡುತ್ತಿರುವ ಬರಗಾಲಕ್ಕೆ ತತ್ತರಿಸಿ ಹೊಗಿದ್ದಾರೆ ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ಬರಬೇಕಾದ ಬ್ಯಾಂಕ್ ತನ್ನಲ್ಲೆ ಅಕ್ರಮ ಎಸಗುವದರಲ್ಲಿಯೇ ತಲ್ಲಿನವಾಗಿದೆ.
ಯಲಬುಗರ್ಾ ಪಿಎಲ್ ಡಿ ಬ್ಯಾಂಕಗೆ ರಾಜ್ಯದಿಂದ ಎಸ್ಆರ್ಬಿ ಮಂಜೂರಾಗಿದ್ದರು ಕೂಡಾ ಜಮಾ ಆದಂತಹ ಹಣವನ್ನ ಇಲ್ಲಿಯವರೆಗೆ ರೈತರಿಗರಿಗೆ ನೀಡುವ ಕೆಲಸವಾಗಿಲ್ಲಾ ಹಾಗೂ ಎರಡನೇ ಕಂತಿನ ಹಣ ಬಿಡುಗಡೆಯಾದರು ಅದು ಸಹ ರೈತರನ್ನು ತಲುಪಿಲ್ಲಾ, ಇದರಿಂದ ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಸೇರಿಕೊಂಡು ರೈತರ ಹಣ ಗುಳುಂ ಮಾಡಿದ್ದಾರೆ ಎನ್ನುವ ಆರೋಪ ಬಲವಾಗಿ ಕೇಳಿ ಬರುತ್ತಿದೆ.
ರೈತರು ಕಟ್ಟಿದ ಸಾಲದ ಹಣಕ್ಕೆ ಋಣಮುಕ್ತ ಪತ್ರ ನಿಡಿಲ್ಲಾ, ಹಾಗೂ ಬೇರೆ ಬೇರೆ ಬ್ಯಾಂಕಿನಲ್ಲಿ ಸಾಲ ತೆಗೆದುಕೊಳ್ಳಲು ಅಗತ್ಯವಾಗಿ ಬೇಕಾದ ಬೇಬಾಕಿ ಪ್ರಮಾಣ ಪತ್ರ ಕೊಡಲು ಇಲ್ಲಿ ಯಾರು ಇಲ್ಲದಂತಾಗಿದೆ, ಬ್ಯಾಂಕಿನ ಡಿ ದಜರ್ೆ ನೌಕರರೇ ಇಲ್ಲಿ ಎಲ್ಲಾ ಕರ್ತವ್ಯ ಮಾಡುತ್ತಾರೆ, ಈ ಬ್ಯಾಂಕಿನ ಇಂದಿನ ನಿವೃತ್ತಿ ಹೊಂದಿದ ಅಧಿಕಾರಿಗಳು ಮಾಡಿದ ಅವ್ಯವಹಾರಕ್ಕೆ ಇಂದು ಬ್ಯಾಂಕ್ ಮುಚ್ಚುವ ಹಂತಕ್ಕೆ ತಲುಪಿದೆ.
ಮಾಜಿ ಸಚಿವ ಬಸವರಾಜ ರಾಯರಡ್ಡಿಯ ಬೆಂಬಲಿಗರ ಕೈಯಲ್ಲಿರುವ ಈ ಬ್ಯಾಂಕ್ನಲ್ಲಿ ಬಹುದೊಡ್ಡ ಮೊತ್ತದ ಹಣ ದುರುಪಯೋಗ ಪಡಿಸಿಕೊಂಡಿರುವುದು ಕಂಡು ಬರುತ್ತಿದೆ, ಆದ್ದರಿಂದ ಇದನ್ನು ಸೂಕ್ತ ತನಿಖೆಗೆ ಒಳಪಡಿಸಿ ರೈತರಿಗಾಗುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.