ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆಗಿದ್ದ ಅಭಿಮನ್ಯು ಮಿಥುನ್ ಕೆಪಿಎಲ್ನಿಂದ ಔಟ್


ಬೆಂಗಳೂರು 24: ಕನರ್ಾಟಕ ಪ್ರೀಮಿಯರ್ ಲೀಗ್(ಕೆಪಿಎಲ್)ನಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಸೇಲ್ ಆಗಿದ್ದ ಅಭಿಮನ್ಯು ಮಿಥುನ್ ಇದೀಗ ಟೂನರ್ಿಯಿಂದ ಔಟ್ ಆಗಿದ್ದಾರೆ.  

ಅಭಿಮನ್ಯು ಮಿಥುನ್ ಮಹತ್ವದ ದುಲೀಫ್ ಟ್ರೋಫಿಗೆ ಆಯ್ಕೆಯಾಗಿದ್ದು ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಕೆಪಿಎಲ್ ನಲ್ಲಿ ಅವರು ಕಣಕ್ಕಿಳಿಯುವುದಿಲ್ಲ ಎಂದು ಕೆಎಸ್ಸಿಎ ವಕ್ತಾರ ವಿನಯ್ ಮೃತ್ಯುಂಜಯ ಹೇಳಿದ್ದಾರೆ.  

ಕೆಪಿಎಲ್ ಹರಾಜಿನಲ್ಲಿ ಶಿವಮೊಗ್ಗ ತಂಡ ಅಭಿಮನ್ಯು ಮಿಥುನ್ ಅವರನ್ನು 8.30 ಲಕ್ಷ ರುಪಾಯಿಗೆ ಖರೀದಿಸಿತ್ತು. ಇದೀಗ ಶಿವಮೊಗ್ಗ ಫ್ರಾಂಚೈಸಿಗಳು ಮಿಥುನ್ ಜಾಗಕ್ಕೆ ಮತ್ತೋರ್ವ ಆಟಗಾರನನ್ನು ಖರೀದಿಸಬೇಕಿದೆ.  

ಮಿಥುನ್ ದುಲೀಪ್ ಟೂನರ್ಿಯಲ್ಲಿ ಇಂಡಿಯಾ ರೆಡ್ ತಂಡಕ್ಕೆ ಆಯ್ಕೆಯಾಗಿದ್ದು ಟೂನರ್ಿ ಆಗಸ್ಟ್ 17 ರಿಂದ 29ರವರೆಗೆ ನಡೆಯಲಿದೆ.