ನಾಳೆ ಅಭಯ ಆಂಜನೇಯಸ್ವಾಮಿ ಮೂರ್ತಿ ಪ್ರತಿಷ್ಠಾಪನೆ
ಕಂಪ್ಲಿ 14: ತಾಲೂಕಿನ ಸಣಾಪುರ ಗ್ರಾಪಂಯ ಬಸವೇಶ್ವರ ಕ್ಯಾಂಪಿನಲ್ಲಿ ಆರಾಧ್ಯ ದೇವ ಅಭಯ ಆಂಜನೇಯ್ಯಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಹೋಮ ಹವನ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಶನಿವಾರ ಜರುಗಿದವು. ಇಲ್ಲಿನ ದೇವಸ್ಥಾನದಲ್ಲಿ ಡಿ.15ರಂದು ಆಂಜನೇಯ್ಯಸ್ವಾಮಿ ಶಿಲಾ ಮೂರ್ತಿ ಪ್ರತಿಷ್ಠಾಪನೆ ಅದ್ಧೂರಿಯಾಗಿ ಜರುಗಲಿದೆ. ಈ ಹಿನ್ನಲೆ ಶನಿವಾರ ಬೆಳಿಗ್ಗೆ ದೇವಸ್ಥಾನದಲ್ಲಿ ಪುರೋಹಿತ ಪಿ.ಶಿವರಾಮ್ ಕೃಷ್ಣ ಅವರ ನೇತೃತ್ವದಲ್ಲಿ ಮಹಾಗಣಪ ಪೂಜೆ, ಮಹಾಭಿಷೇಕ, ನವಗ್ರಹ ಹೋಮ, ದೇವತೆ ಹೋಮ, ಧ್ಯಾನ ದಿವಸ, ಸಂಜೆ ಶಿಲಾ ಮೂರ್ತಿ ಮೆರವಣಿಗೆ ಹಾಗೂ ಮಹಾಮಂಗಳಾರತಿ ಭಕ್ತರ ಸಮ್ಮುಖದಲ್ಲಿ ನೆರವೇರಿದವು. ಮಹಿಳೆಯ ಕೋಲಾಟ ಜರುಗಿದವು. ಈ ಸಂದರ್ಭದಲ್ಲಿ ಬಸವೇಶ್ವರಕ್ಯಾಂಪಿನ ಸಕಲ ಸದ್ಭಕ್ತರು ಪಾಲ್ಗೊಂಡಿದ್ದರು. ಭಾನುವಾರ ಬೆಳಿಗ್ಗೆ ಆಂಜನೇಯಸ್ವಾಮಿ ಶಿಲಾ ಮೂರ್ತಿ ಲೋಕಾರೆ್ಣಗೊಳ್ಳಲಿದೆ. ಮಹಿಳೆಯರ ಕೋಲಾಟ ಜರುಗಿದವು.
ತಾಲೂಕಿನ ಸಣಾಪುರ ಗ್ರಾಪಂ ವ್ಯಾಪ್ತಿಯ ಬಸವೇಶ್ವರಕ್ಯಾಂಪಿನ ಆಂಜನೇಯ್ಯಸ್ವಾಮಿ ದೇವಸ್ಥಾನದಲ್ಲಿ ಹೋಮ ಹವನ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.