ಏಡ್ಸ ಪೀಡಿತರಿಗೂ ಹಕ್ಕುಗಳಿವೆ: ನ್ಯಾ. ಈರನಗೌಡ

ಮುಂಡಗೋಡ 05: ಏಡ್ಸ ರೋಗಕ್ಕೆ ತುತ್ತಾದ ಜನರಿಗು ಕೂಡಾ ಅವರದೇ ಆದ ಒಂದು ಸಾಮಾಜಿಕ ಮತ್ತು ವೇದಿಕೆಯ ಹಕ್ಕುಗಳಿವೆ. ನಾವು ಅವರ ಹಕ್ಕುಗಳಿಗೆ ಸ್ಪಂದಿಸಬೇಕು ಸಹಕರಿಸಬೇಕು  ಎಂದು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಈರನಗೌಡ ಹೇಳಿದರು.

ತಾಲೂಕಾ ಆರೊಗ್ಯ ಇಲಾಖೆ, ಲೊಯೋಲ ವಿಕಾಸ ಕೇಂದ್ರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಜ್ಯೋತಿ ಕಾನ್ವೆಂಟ್, ರೋಟರಿ ಕ್ಲಬ್, ಟ್ರಿನಿಟಿ ಸಂಸ್ಥೆ, ಮೃತ್ಯುಂಜಯ ಚರಿಟೆನಲ ಟ್ರಸ್ಟ, ಕಾರುಣ್ಯ ಟ್ರಸ್ಟ, ಲೋಟಸ್ ಮತ್ತು ಆದಿಜಾಂಭವ ಪ್ರೌಢಶಾಲೆ, ಐಟಿಐ ನ್ಯಾಸಗರ್ಿ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಜರುಗಿದ ತಾಲೂಕಾ ಮಟ್ಟದ ವಿಶ್ವ ಏಡ್ಸ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು, 

ಎಲ್.ವಿ.ಕೆ. ನಿದರ್ೇಶಕ ಜೆರಾಲ್ಡ ಡಿಸೋಜಾ ಪ್ರಾಸ್ತಾವಿಕ ಮಾತನಾಡಿದರು. ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಏಡ್ಸ ಕುರಿತು ಉಪನ್ಯಾಸ ನೀಡಿದರು. ತಹಸೀಲ್ದಾರ ಪ್ರೊಬೆಶನರಿ ಐಎಸ್ ಅಧಿಕಾರಿ ದಿಲೀಶ್ ಸಸಿ, ಆರೋಗ್ಯ ಅಧಿಕಾರಿ ಪದ್ಮಪ್ರಿಯ, ಪ್ರಕಾಶ ಹುದ್ಲಮನಿ, ಸಿಸ್ಟರ ಲುಯಿಸ್, ಶಾಜಿ ಥಾಮಸ್, ವಿ.ಎಸ್. ಕೊಣಸಾಲಿ, ಎಸ್.ಕೆ. ಬೋರಕರ ಇದ್ದರು. ಆಶಾ ಕಾರ್ಯಕತರ್ೆಯರು ಮತ್ತು ಎಲ್.ವಿ.ಕೆ. ಸಿಬ್ಬಂದಿ ಏಡ್ಸ ಜಾಗೃತಿ ಹಾಡು ಹೇಳಿದರು. ಎಸ್.ಡಿ. ಮುಡೆಣ್ಣವರ ಸ್ವಾಗತಿಸಿದರು. ಬರಮಣ್ಣ ಚಕ್ರಸಾಲಿ ನಿರೂಪಿಸಿದರು. ಇದಕ್ಕೂ ಮುನ್ನ ಶಾಲಾ ವಿದ್ಯಾಥರ್ಿಗಳು, ಆಶಾ ಕಾರ್ಯಕತರ್ೆಯರು ಮತ್ತು ಸಂಘ ಸಂಸ್ಥೆಗಳು ಸೇರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಏಡ್ಸ ಜಾಗೃತಿ ಜಾಥಾ ನಡೆಸಿದರು.