ಲೋಕದರ್ಶನ ವರದಿ
ತಾಳಿಕೋಟೆ 04:ಪಟ್ಟಣದ ಬಸ್ ನಿಲ್ದಾಣದಿಂದ ಎಸ್.ವ್ಹಿ.ಎಂ. ಪ್ಯಾರಾ ಮೇಡಿಕಲ್ ಕಾಲೇಜ್ಗೆ ಮೊದಲಿನಂತೆ ಬಸ್ ನಿಲುಗಡೆ ಮಾಡದೇ ತೆರಳುತ್ತಿದ್ದಾರೆ ಇದರಿಂದ ವಿಧ್ಯಾಥರ್ಿಗಳಿಗೆ ತುಂಬಾ ತೊಂದರೆಯುಂಟಾಗಲಿಕ್ಕೆ ಹತ್ತಿದ್ದು ಕೂಡಲೇ ಈ ಕುರಿತು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಅಖೀಲ ಭಾರತೀಯ ವಿದ್ಯಾಥರ್ಿ ಪರಿಷತ್ ಕಾರ್ಯಕರ್ತರು ಮನಗೂಳಿ-ದೇವಾಪೂರ ರಾಜ್ಯ ಹೆದ್ದಾರಿಯಲ್ಲಿ ಬಸ್ಗಳನ್ನು ತಡೆದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಈ ಮೊದಲು ಬಸ್ ನಿಲ್ದಾಣಿದಿಂದ ಮುದ್ದೇಬಿಹಾಳ ಮಾರ್ಗದ ಕಡೆಗೆ ತೆರಳುವ ಬಸ್ಗಳಲ್ಲಿ ಎಸ್.ವ್ಹಿ.ಎಂ.ಪ್ಯಾರಾ ಮೇಡಿಕಲ್ ಕಾಲೇಜ್ಗೆ ತೆರಳು ವಿದ್ಯಾಥರ್ಿಗಳನ್ನು ಹತ್ತಿಸಿಕೊಂಡು ಕಾಲೇಜಿನ ವಿದ್ಯಾಥರ್ಿಗಳ ವಿನಂತಿಯ ಮೇರೆಗೆ ನಿಲುಗಡೆಯ ವ್ಯವಸ್ಥೆಯನ್ನು ಮಾಡಲಾಗಿತ್ತು ಆದರೆ ಇತ್ತೀಚಗೆ ಬಸ್ಗಳನ್ನು ಕಾಲೇಜಿನ ಹತ್ತಿರ ನಿಲುಗಡೆ ಮಾಡುವದನ್ನೇ ನಿಲ್ಲಿಸಿದ್ದು ವ್ಯವಸ್ಥೆಯನ್ನು ಕೂಡಲೇ ಸರಿಪಡಿಸಿ ವಿದ್ಯಾಥರ್ಿಗಳಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕೆಂದು ಒತ್ತಾಯಿಸಿದರು.
ಘಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಿ.ಎಸ್.ಆಯ್.ಜಿ.ಎಸ್.ಬಿರಾದಾರ ಅವರು ಬಸ್ ಘಟಕದ ವ್ಯವಸ್ಥಾಪಕರೊಂದಿಗೆ ದೂರವಾಣಿಯ ಮೂಲಕ ಮಾತುಕತೆ ನಡೆಸಿದರಲ್ಲದೇ ಪ್ರತಿಭಟನಾ ನಿರತ ವಿಧ್ಯಾಥರ್ಿಗಳಿಗೆ ಬಸ್ ನಿಲುಗಡೆಗೆ ವ್ಯವಸ್ಥೆ ಮಾಡುವದಾಗಿ ಮತ್ತು ಬಸ್ ನಿಲುಗಡೆಗೆ ನಿರಾಕರಿಸಿದ ಚಾಲಕ ನಿವರ್ಾಹಕನ ಮೇಲೆ ಕ್ರಮದ ಬರವಸೆಯನ್ನು ಬಸ್ ಘಟಕದ ವ್ಯವಸ್ಥಾಪಕ ರವಿ ಅಂಚಿಗಾವಿ ಅವರು ನೀಡಿದ ಮೇಲೆ ವಿದ್ಯಾಥರ್ಿಗಳು ಪ್ರತಿಭಟನೆಯಿಂದ ಹಿಂದಕ್ಕೆ ಸರಿದರು.
ಪ್ರತಿಭಟನಾ ನೇತೃತ್ವವನ್ನು ಎಬಿವ್ಹಿಪಿ ರಾಜ್ಯ ಪರಿಷತ್ ಸದಸ್ಯ ರಾಜೇಶ ಮಸರಕಲ್ಲ, ಸಂಗನಗೌಡ ಬಿರಾದಾರ, ಉದಯಕುಮಾರ ಹಿರೇಮಠ, ಸಂಗು ಮದರಿಮಠ, ಗುರು ಕಳ್ಳಿಮಠ, ನೂರಾರು ವಿದ್ಯಾಥರ್ಿಗಳು ಇದ್ದರು