ಖಿಳೇಗಾಂವವರೆಗೆ ನೀರು ತಲುಪಲು ಬಸವೇಶ್ವರನಿಗೆ ಹರಕೆ
ಸಂಬರಗಿ 10: ಗಡಿ ಭಾಗ ಬರಗಾಲ ಮುಕ್ತವಾಗಲಿ. ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ ಹಸಿರು ಕ್ರಾಂತಿ ಆಗಲೆಂದು ಬೇಡಿಕೆಗಾಗಿ ಬಳ್ಳಿಗೇರಿ ಗ್ರಾಮದ ನಾಗೇಶ ಸತ್ತಿ ಇವರು ಮರಗಾಲ ಕಟ್ಟಿಕೊಂಡು ಖಿಳೇಗಾಂವ ಬಸವೇಶ್ವರ ದೇವರಿಗೆ ನಡೆದುಕೊಂಡು ಹೋಗಿ ದೇವರ ದರ್ಶನ ಪಡೆದು ಹರಕೆಯನ್ನು ಹೊತ್ತರು. ಬಳ್ಳಿಗೇರಿಯಿಂದ 20ಕೀ.ಮೀ ದೂರದಲ್ಲಿ ದೇವಸ್ಥಾನ ಇದ್ದು, ಬಳ್ಳಿಗೇರಿಯಿಂದ ಬೆಳಿಗ್ಗೆ ರವಿವಾರ ಬೆಳಿಗ್ಗೆ ಗ್ರಾಮದಿಂದ ಗೆಳೆಯರು ಸೇರಿ ಬಳ್ಳಿಗೇರಿ ಗ್ರಾಮದಿಂದ ಹೊರಟು ಅನಂತಪೂರ ಆಜೂರ ಮಾರ್ಗವಾಗಿ ದೇವಸ್ಥಾನಕ್ಕೆ ತಲುಪಿ ಹಲವಾರು ವರ್ಷಗಳಿಂದ ನೀರಾವರಿ ಯೋಜನೆ ಕುರಿತು ವಿವಿಧ ರಾಜಕೀಯ ಪಕ್ಷ ಚುನಾವಣೆಗಳಲ್ಲಿ ಆಶ್ವಾಸನೆ ನೀಡಿ ಆಯ್ಕೆಯಾಗುತ್ತಾರೆ. ಮರಳಿ ಯೋಜನೆ ಪೂರ್ಣಗೊಳ್ಳಲು ವಿಳಂಬವಾಗುತ್ತಿದ್ದವು. ಆದರೆ ಕಾಂಗ್ರೆಸ್ ಸರ್ಕಾರ ಕಳೆದ ಚುನಾವಣೆಯಲ್ಲಿ ನೀಡಿರುವ ಆಶ್ವಾಸನೆ ಪ್ರಕಾರ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ನೀರು ಮೊದಲ ಹಂತದಲ್ಲಿ ಅರಳಿಹಟ್ಟಿ ಗ್ರಾಮಕ್ಕೆ ತಲುಪಿದೆ. ಇನ್ನುಳಿದ ಖಿಳೇಗಾಂವ ಗ್ರಾಮದವರೆಗೆ ಶೀಘ್ರದಲ್ಲಿ ತಲುಪಿಸಬೇಕೆಂದು ಅವರು ದೇವರಲ್ಲಿ ಹರಕೆ ಹೊತ್ತುಕೊಂಡರು. ಈ ಭಾಗ ಸತತವಾಗಿ ಬರಗಾಲವಿದ್ದು, ಇನ್ನುಳಿದ ನೀರಾವರಿ ಯೋಜನೆ ಶೀಘ್ರದಲ್ಲಿ ಕಾರ್ಯರೂಪದಲ್ಲಿ ಬರಲಿ ಎಂದು ಅವರು ವಿನಂತಿಸಿದರು. ವಿಶಾಲ ಮಾಳಿ, ಬಸಪ್ಪ ತಾಂವಶಿ, ಕುಮಾರ ಅಸುದೆ ಇದ್ದರು ಇನ್ನು ಮುಂದೆ ಮರಗಾಲ ಕಟ್ಟಿಕೊಂಡು ಈ ಭಾಗದ ರೈತರು ಬರಗಾಲ ಮುಕ್ತಗಲಿ, ರೈತರಿಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕಾಗಿ ಶ್ರೀಶೈಲಕ್ಕೆ ಹೋಗುತ್ತೇನೆ ಎಂದು ಹೇಳಿದರು.