ಸರ್ವ ಜನಾಂಗ ಸಹಿತ ಜಾತಿ, ಮತ, ಪಂಥ ಮೀರಿದ ವಿಶಿಷ್ಟ ದೈವ : ಮೈಲಾರಲಿಂಗೇಶ್ವರ ದೇವಸ್ಥಾನ
ಶಿಗ್ಗಾವಿ 28 : ಮೈಲಾರಲಿಂಗೇಶ್ವರ ದೇವಸ್ಥಾನವು ತಾಲೂಕಿನ ಹಾಗೂ ಪಟ್ಟಣದ ಜನಪ್ರಿಯ ದೇವಸ್ಥಾನಗಳಲ್ಲಿ ಒಂದು ಅಲ್ಲದೇ ಅನೇಕ ಪವಾಡಗಳು ಮತ್ತು ಕುರುಹಗಳನ್ನು ಹೊಂದಿದೆ. ಕಲಿಯುಗದಲ್ಲಿ ಅತಿ ಹೆಚ್ಚು ಪ್ರಾಬಲ್ಯ ಹೊಂದಿರುವ ದೇವರಲ್ಲಿ ಗಣೇಶ, ಆಂಜನೇಯ, ಅಯ್ಯಪ್ಪ ಹಾಗೂ ಮೈಲಾರಲಿಂಗೇಶ್ವರ ಎಂದು ಅನೇಕ ಮಠಾದೀಶರು, ಜ್ಯೋತಿಷ್ಯಗಾರರು, ಶರಣರು, ಸಂತರು ಹೇಳುವದರಿಂದ ಪಟ್ಟಣದ ಮೈಲಾರಲಿಂಗೇಶ್ವರನ ಮಹಿಮೆ ಒಂದಾಗಿದೆ.
ಜಗತ್ತಿನಲ್ಲಿ ಭಗವಂತನ ಕೃಪೆಯಿಲ್ಲದಿದ್ದರೆ ಜೀವನವು ದುಸ್ಸಾದ್ಯ. ನಾನಾ ರೂಪಗಳಿಂದ, ನಾನಾ ಗುಣಗಳಿಂದ, ನಾನಾ ಶಕ್ತಿಗಳಿಂದ ಈ ಜಗದಲ್ಲಿ ತುಂಬಿಕೊಂಡು ತನ್ನ ಶಕ್ತಿಯಿಂದ ಈ ಜಗವನ್ನು ತುಂಬಿ ಮೈಲಾರಲಿಂಗೇಶ್ವರ ಲೀಲಾಮಯವಾಗಿ ವಿಹರಿಸುತ್ತಿದ್ದಾನೆ. ಎಲ್ಲವೂ ನಾನೇ ಮೈಲಾರ ಆಗಿರುತ್ತೇನೆ ಸಕಲವೂ ನಾನೇ ದೇವರಗುಡ್ಡ ಅಂದಾಗ ಒಂದೇ ನಾಮ ಮಾತ್ರ ಹಲವು ಮೈಲಾರಲಿಂಗೇಶ್ವರನ ವಿರಾಟ್ ಶಕ್ತಿಯಿಂದ ಇತಿಹಾಸ ಜಗತ್ತಪ್ರಸಿದ್ದವಾದ ಮೈಲಾರಲಿಂಗೇಶ್ವರನ ಮಹಿಮೆ ಅವತರಿಸಿದೆ. ಒಂದರ್ಥದಲ್ಲಿ ವಿಶ್ವವ್ಯಾಪಿಯಾಗಿರುವ ಮೈಲಾರಲಿಂಗ, ದೇಶೀಯ ಮಾತ್ರವಲ್ಲದೇ ವಿದೇಶಗಳಲ್ಲಿ ಪ್ರಾಬಲ್ಯ ಸಾಧಿಸಿದ್ದಾನೆ.
ಕುರುಬ ಸಮುದಾಯದ ಮುಖ್ಯ ಆರಾಧ್ಯ ದೈವವಾಗಿದ್ದರೂ ಮೈಲಾರಲಿಂಗ ಆದರೆ ಶಿಗ್ಗಾವಿ ತಾಲೂಕಿನಲ್ಲಿ ಸರ್ವ ಜನಾಂಗದವರು ಸಹಿತ ಜಾತಿ, ಮತ, ಪಂಥಗಳನ್ನು ಮೀರಿದ ವಿಶಿಷ್ಟ ದೈವವಾಗಿದೆ. ಅಂತೆಯೇ ಮೈಲಾರನ ಭಕ್ತರಲ್ಲಿ ಗೊರವರಿಗೆ ವಿಶೇಷ ಸ್ಥಾನವಿದೆ ಹಾಗೂ ಮುಖ್ಯ ಆಕರ್ಷಣೆ. ಇವರ ಹೇಳಿಕೆಗಳನ್ನು ದೇವರ ಹೇಳಿಕೆಗಳೆಂದೇ ಭಕ್ತರು ನಂಬುತ್ತಾರೆ. ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ವಿಚಾರಗಳು ಮೈಲಾರಲಿಂಗ ಪರಂಪರೆಯಲ್ಲಿ ಕಾವ್ಯಹಿಪುರಾಣ, ಕಲೆಹಿವಾಸ್ತುಶಿಲ್ಪ,ಜಾತ್ರೆಹಿಉತ್ಸವ, ಪಂಥಹಿಪ್ರಭಾವಹಿಪರಂಪರೆ ಹೀಗೆ ವೈಭವಿಕರಿಸಲಾಗುತ್ತದೆ.
ಅಂದರೆ ಮಲ್ಲಯ್ಯ, ಮಲ್ಲಣ್ಣ, ಗುಡದಯ್ಯ, ಮಲ್ಹಾರಿ, ಖಂಡೋಬಾ, ಮುಲ್ಲುಖಾನ್, ಅಜಮುತಖಾನ್ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಮೈಲಾರಲಿಂಗ ದೇವಸ್ಥಾನ ಕೆಲವು ಹಿರಿಯರ ಪ್ರಕಾರ ಮೈಲಾರಲಿಂಗೇಶ್ವರ ಮೂಲ ದೇವಸ್ಥಾನ ಶಿಗ್ಗಾವಿ ನಂತರ ಕೆಲವರ ಅಭಿಪ್ರಾಯದ ಪ್ರಕಾರ ಮೈಲಾರ ನಂತರ ದೇವರ ಗುಡ್ಡ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ತಾಲೂಕಿನಲ್ಲಿ ಎರಡೇ ಎರಡು ಮೈಲಾರಲಿಂಗೇಶ್ವರನ ದೇವಸ್ಥಾನ ದುಂಡಶಿ ಹಾಗೂ ಶಿಗ್ಗಾವಿ ಪಟ್ಟಣದಲ್ಲಿದೆ ಆದರೇ ಪ್ರತಿ ಹಳ್ಳಿಗಳಲ್ಲಿ ಮೈಲಾರ ದೇವರ ಸಿಬಾರ ಇರುತ್ತದೆ ಅದಕ್ಕೆ ಪ್ರತಿನಿತ್ಯ ಪೂಜೆ ಸಲ್ಲಿಸಿ ವರ್ಷಕ್ಕೊಮ್ಮೆ ಭಾರತ ಹುಣ್ಣಿಮೆಗೆ ಮೈಲಾರಕ್ಕೆ ಹೋಗುತ್ತಾರೆ ಆದರೆ ಮೈಲಾರಕ್ಕೆ ಹೋಗುವಾಗ ಮತ್ತು ಬರುವಾಗ ಮೊದಲಿಗೇ ಶಿಗ್ಗಾವಿ ಮೈಲಾರಲಿಂಗೇಶ್ವರನ ಆರ್ಶಿವಾದ ಪಡೆಯುವುದು ವಾಡಿಕೆಯಾಗಿದೆ. ಈಗಾಗಿ ಇದೇ ಮೂಲಸ್ಥಾನ ಅನ್ನುತ್ತಾರೆ. ಹಿರಿಯರ ಪ್ರಕಾರ ಶಿಗ್ಗಾವಿ ಮೈಲಾರಲಿಂಗೇಶ್ವರನ ದೇವಸ್ತಾನಕ್ಕೆ 300 ವರ್ಷದ ಇತಿಹಾಸವಿದೆ ಎನ್ನುತ್ತಾರೆ. ಹುಬ್ಬಳ್ಳಿಯ ಸಿದ್ದಾರೋಡ ಶ್ರೀಗಳು ಹಾಗೂ ಹಾನಗಲ್ಲ ಕುಮಾರಸ್ವಾಮಿಗಳು ಈ ದೇವಸ್ಥಾನಕ್ಕೆ ಬಂದಿದ್ದರು. 1828ರಲ್ಲಿ ಸಂತ ಶಿಶುನಾಳ ಶರೀಫಜ್ಜನವರು ಮೈಲಾರಲಿಂಗೇಶ್ವರನ ದೇವಸ್ಥಾನಕ್ಕೆ ಬಂದಿದ್ದರು ಎಂಬ ಪ್ರತೀತಿಯಿದೆ. 1902ರಲ್ಲಿ ಸರಕಾರಿ ಶಾಲೆ ಪ್ರಾರಂಭವಾಗಿದೆ. ಅಂದರೆ ಮುಖ್ಯನೆಲೆ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಮೈಲಾರ. ಕರ್ನಾಟಕವಷ್ಟೇ ಅಲ್ಲ ನೆರೆಯ ಆಂಧ್ರ ಪ್ರದೇಶ, ತಮಿಳುನಾಡು, ಗೋವಾ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲೂ ಮೈಲಾರಲಿಂಗ ಭಕ್ತರ ಆರಾಧ್ಯದೈವ. ಪ್ರತಿವರ್ಷ ಜಾತ್ರೆಯ ಸಂದರ್ಭದಲ್ಲಿ ಮೈಲಾರದಲ್ಲಿ ನುಡಿಯುವ ಕಾರಣಿಕ ರಾಜ್ಯದ ಜನರ ಭವಿಷ್ಯವಾಣಿಯೆಂದೇ ಜನಜನಿತವಾಗಿ ಕಾರ್ಯರೂಪಕ್ಕೆ ಬರುತ್ತದೆ.
ಪಟ್ಟಣದ ಅನೇಕ ಹಿರಿಯರಾದ ಹನುಮಂತಪ್ಪ ಕಂಕನವಾಡ, ಡುಮ್ಮನವರ ನಿಂಗಪ್ಪ, ಮತ್ತೂರ ನಾಗಪ್ಪ, ಶಂಕ್ರ್ಪ ಯಲವಿಗಿ, ನಾಗಪ್ಪ ಯಲವಿಗಿ, ಬಸವರಾಜ ನಿಂಗಪ್ಪ ಯಲಿಗಾರ, ಸಂಗಣ್ಣ ಮೊರಬದ, ಶಿವಪ್ಪ ಚಂದಾಪೂರ, ಸಹದೇವಪ್ಪ ಕಮಡೊಳ್ಳಿ, ಶಿವಪ್ಪ ಗಣಪ್ಪನವರ, ನಿಂಗಣ್ಣ ಇಂಗಳಗಿ ನಿಸ್ವಾರ್ಥ ಸೇವೆ ಸಲ್ಲಿಸಿದವರು.
ಈ ಪವಿತ್ರ ಕ್ಷೇತ್ರದಲ್ಲಿ ದೇವಸ್ಥಾನ ನಿರ್ವಹಣೆ ಮಾಡಲು ಮಹಿಳೆಯರಿಗೆ ಚರಕ ತರಬೇತಿ, ದಲಾಲಿ ವ್ಯಾಪಾರ, ಸರಕಾರಿ ಶಾಲೆ, ಮಂತ್ರೋಡಿ ಹೆಣ್ಣು ಮಕ್ಕಳ ಶಾಲೆ, ಮುಳಕೇರಿ ಚಿಕ್ಕಪ್ಪ ಕಾಳುಕಡಿ ವ್ಯಾಪಾರ, ದಿ.ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಈ ದೇವಸ್ಥಾನದಲ್ಲಿ ರೈತರ ಸಭೆ ಮಾಡಿದ್ದು ವಿಶೇಷ. ಹನುಮಂತರಾವ ಬೀಮರಾವ ಖದೀಮದಿವಾನವರ ಮೊಮ್ಮಗಳು ಇನ್ಫೋಸಿಸ್ ಮಾಲಕಿ ಹಾಗೂ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿಯವರು ಮೈಲಾರ ದೇವಸ್ಥಾನದಲ್ಲಿ ಆಟವಾಡುತ್ತಿದ್ದದ್ದು ವಿಶೇಷ.
ಭಾಕ್ಸ ಸುದ್ದಿ : ಪಟ್ಟಣದ ಐತಿಹಾಸಿಕ ಮೈಲಾರಲಿಂಗೇಶ್ವರ ದೇವಸ್ಥಾನವು 300 ವರ್ಷ ಇತಿಹಾಸ ಹೊಂದಿದ ದೇವಸ್ಥಾನವಾಗಿದ್ದು, ಇಲ್ಲಿ ಅನೇಕ ಪವಾಡಗಳು ನಡೆದಿವೆ ಹಾಗೂ ಕುರುವುಗಳಿವೆ ಅಲ್ಲದೇ ಮೈಲಾರಲಿಂಗೇಶ್ವರ, ಗಂಗಮಾಳವ್ವದೇವಿ, ಗಣಪತಿ, ಭೂಲಿಂಗೇಶ್ವರ, ನಾಗಲಿಂಗೇಶ್ವರ, ಪಾದುಕೆ, ತುಪ್ಪದ ಮಾಳವ್ವ, ಹೆಗ್ಗಪ್ಪಸ್ವಾಮಿ, ಆಂಜನೇಯ ಸ್ವಾಮಿ, ನವಗ್ರಹ ಮೂರ್ತಿಗಳ ಒಂದೇ ಕಡೆ ವಿವಿಧ ದೇವರ ದರ್ಶನ ತಾಲೂಕಿನಲ್ಲಿ ವಿಶೇಷ ಹಾಗೂ ಪವಿತ್ರವಾದ ಕ್ಷೇತ್ರವಾಗಿ ಹೊರಹೊಮ್ಮಲಿದೆ.
ಸುಭಾಸ ಚವ್ಹಾಣ ಅಧ್ಯಕ್ಷರು ಮೈಲಾರಲಿಂಗೇಶ್ವರ ದೇವಸ್ಥಾನ ಸಮಿತಿ ಶಿಗ್ಗಾವಿ
ಪಟ್ಟಣದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ನೀಲಿ ನಕ್ಷೆ ರಚಿಸಿ ಯೋಜನೆ ಸಿದ್ದಪಡಿಸಿದಾಗ 2007-08ರಲ್ಲಿ ಅದರ ಅಂದಾಜು ಮೊತ್ತ 80 ಲಕ್ಷ ಇತ್ತು ಅದು ವರ್ಷಕಳೆದಂತೆ ಸಾಮಗ್ರಿಗಳ ಬೆಲೆ ಗಗನಕ್ಕೆ ಏರಿತು ಹಾಗೂ ಇದು ಸಂಪೂರ್ಣ ಕಲ್ಲಿನ ದೇವಸ್ಥಾನ ಆಗಿರುವುದರಿಂದ ಕಟ್ಟಡದ ಕೆಲಸಗಾರರನ್ನು ಹೊಂದಿಸಿ ಕೆಲಸ ಮಾಡಿಸುವುದು ಕಷ್ಟಕರವಾಗಿತ್ತು. ಆದ್ದರಿಂದ ಕಳೆದ 17 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಈ ಪವಿತ್ರ ದೇವಸ್ಥಾನ ಅಭಿವೃದ್ದಿ ಆಗದೇ ಪಟ್ಟಣದ ಜನತೆಗೆ ವಿಘ್ನಗಳು ಪ್ರಾರಂಭವಾದವು. ಈ ದೇವಸ್ಥಾನಕ್ಕೆ ಅನೇಕ ಜನಪ್ರತಿನಿಧಿಗಳು, ರಾಜಕಾರಣಿಗಳು, ಮುಖಂಡರು, ಹಾಗೂ ಪಟ್ಟಣದ ಅನೇಕ ಭಕ್ತರು ಧನ ಸಹಾಯ ಮಾಡಿದ್ದಾರೆ. 7 ಕೋಟಿ ಭಕ್ತರ ಅವಶ್ಯಕತೆ ಇದೆಯೆನೋ ಎಂದು ಭಾಸವಾಗುತ್ತಿತ್ತು ಆದರೂ ಸಹಿತ ಹೊಸ ಸಮಿತಿ ರಚನೆ ಮಾಡಿ ಯುವ ಪಡೆ ಸಮಿತಿಯ ನೇತೃತ್ವದಲ್ಲಿ ದೇವಸ್ಥಾನ ಲೋಕಾರೆ್ಣಗೆ ಬಂದಿರುವುದು ಸಂತಸದ ವಿಷಯವಾಗಿದೆ.
ಜನೇವರಿ 30 ರಿಂದ ಫೆಬ್ರುವರಿ 7 ರವರೆಗೆ ಪ್ರತಿನಿತ್ಯ ಬೆಳಿಗ್ಗೆ ವಿಶೇಷ ಪೂಜೆ, ಹೋಮ ಹವನ, ಅನೇಕ ಶ್ರೀಗಳಿಂದ ಸಾಯಂಕಾಲ ಧಾರ್ಮಿಕ ಸಭೆ, ಸಂಗೀತ ಕಾರ್ಯಕ್ರಮ, ಪ್ರಸಾದ ಸೇವೆ ನೇರವೇರಲಿದೆ