ರಾಷ್ಟ್ರಿಯ ಲೋಕ ಅದಾಲತನಲ್ಲಿ ಒಟ್ಟು 199 ಪ್ರಕರಣ ಇತ್ಯರ್ಥ
ಮುಂಡಗೋಡ 10 ; ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಬೆಂಗಳೂರು ರವರ ನಿರ್ದೇಶನದ ಮೇರೆಗೆ ರಾಷ್ಟ್ರೀಯ ಲೊಕ್ ಅದಾಲತ್ ಮುಂಡಗೋಡ ಜೆಎಮ್ ಎಫ್ಸಿ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರಿಯ ಲೋಕ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಾಷ್ಟ್ರೀಯ ಲೋಕ್ ಆದಾಲತ್ ಗೆ ನ್ಯಾಯಿಕ ಸಂಧಾನಕಾರರಾಗಿ ನ್ಯಾಯಾಧೀಶರಾದ ಶ್ರೀಮತಿ ಅಕ್ಷತಾ ಸಿ.ಆರ್. ಹಾಗೂ ನ್ಯಾಯಕೇತರ ಸಂಧಾನಕಾರರಾಗಿ ಶ್ರೀಮತಿ ಜ್ಯೋತಿ ಪಾಟೀಲ್ ರವರು ಹಾಜರಿದ್ದರು. ಪಟ್ಟಣದಲ್ಲಿ ಶನಿವಾರ ನಡೆದ ಲೋಕ ಅದಾಲತನಲ್ಲಿ 11 ಎನ್.ಐ. ಆ್ಯಕ್ಟ್ ಪ್ರಕರಣಗಳು, 05 ಮೂಲದಾವಾ ಪ್ರಕರಣಗಳು, 1 ಎಫ್.ಡಿ.ಪಿ. ಪ್ರಕರಣ, 1 ಐ.ಪಿ.ಸಿ. ಪ್ರಕರಣ, 129 ಕೆ.ಪಿ. ಆಕ್ಟ್ ಪ್ರಕರಣಗಳು ಹಾಗೂ 08 ಅಮಲ್ಟಾರಿ ಪ್ರಕರಣಗಳು, ಮತ್ತು 23 ಜನನ ಪ್ರಕರಣಗಳು ಒಟ್ಟು 178 ಪ್ರಕರಣಗಳು ಮತ್ತು 21 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು 199 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗಿರುತ್ತದೆ.