ಪ್ರಾದೇಶಿಕ ಅಸಮತೋಲನೆ ನಿವಾರಣೆ ಕುರಿತು ಚಿಂತನಾ ಸಭೆ

ಲೋಕದರ್ಶನ ವರದಿ

ಬೆಳಗಾವಿ, 8: ಪ್ರಾದೇಶಿಕ ಅಸಮತೋಲನೆ ನಿವಾರಣೆಯಾಗಿ ಸಮತೂಲ ಕನರ್ಾಟಕದ ನಿಮರ್ಾಣಕ್ಕಾಗಿ ಅಧಿಕಾರದ ವಿಕೇಂದ್ರಿಕರಣವಾಗಬೇಕು ಎಂದು ಉತ್ತರ ಕನರ್ಾಟಕ ಪ್ರಾದೇಶಿಕ ಅಸಮತೋಲನೆ, ಸಮಸ್ಯೆಗಳು ಮತ್ತು ಪರಿಹಾರದ ಮಾಗರ್ೋಪಾಯಗಳ ಬಗ್ಗೆ ನಡೆದ ಚಿಂತನಾ ಸಭೆಯಲ್ಲಿ ಆಗ್ರಹಿಸಲಾಗಿದೆ.

ಶುಕ್ರವಾರದಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಈ ಸಭೆಯಲ್ಲಿ ಮಾತನಾಡಿದ ಉತ್ತರ ವಿವಿಧ ಜಿಲ್ಲೆಗಳ ಪ್ರಮುಖರುಗಳು, ಅಧಿಕಾರದ ವಿಕೇಂದ್ರಿಕರಣದ ಜೊತೆಗೆ ಈ ಭಾಗದಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು ಸೇರಿದಂತೆ ಎಲ್ಲ ಮೂಲ ಸೌಕರ್ಯ ಕಾಮಗಾರಿಗಳನ್ನು   ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಿದರು.

ಕಬ್ಬಿನ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗಡಿ ಮಾಡಲು ವೈಜ್ಞಾನಿಕ ವರದಿ ನೀಡುವ ಕೃಷಿ ಬೆಲೆ ಆಯೋಗ ರಚಿಸಬೇಕು. ಮೂಲ ಸೌಕರ್ಯಗಳನ್ನು ಅಭಿವೃದ್ದಿ ಪಡಿಸಬೇಕು. ಮಹಾದಾಯಿ ಹೋರಾಟಗಾರರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು. ಈ ಭಾಗದ ಜನಪ್ರತಿನಿಧಿಗಳು ಈ ಭಾಗದ ಸಮಸ್ಯೆಗಳ ನಿವಾರಣೆಗೆ ಸಕ್ರಿಯರಾಗಬೇಕು ಎಂದು ಒತ್ತಾಯಿಸಿದರು.

ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ರೈತರ ಹೆಸರಿನಿಂದ ಅಥವಾ ಬೇರೆ ಸಂಘಟನೆಗಳ ಹೆಸರಿನಿಂದ ದಕ್ಷಿಣ ಭಾಗದ ನಾಯಕರು ನಮಗೆ ಬೇಕಾಗಿಲ್ಲ. ನಮ್ಮ ಸಮಸ್ಯೆಗಳ ನಿವಾರಣೆಗೆ ನಾವೇ ನಾಯಕರಾಗಬೇಕು. ಸಮಸ್ಯೆಗಳ ಪರಿಹಾರಕ್ಕೆ ಮತ್ತು ಬೇಡಿಕೆಗಳ ಈಡೇರಿಕೆಗಾಗಿ ನಮ್ಮ ಭಾಗದ ಜನರು ಸಂಘಟಿತ ಹೋರಾಟಕ್ಕೆ ಸಿದ್ದರಾಗಬೇಕು ಎಂದು ಕರೆ ನೀಡಿದರು.

ಈಗಾಗಲೇ ಮಹಾದಾಯಿ ತೀಪರ್ು ಬಂದಿರುವದರಿಂದ  ಆ ತೀಪರ್ಿನಂತೆ ನಮ್ಮ  ಪಾಲಿನ ನೀರು ಪಡೆಯುವ ಮತ್ತು ಕಬ್ಬು ಬೆಳೆಗಾರರ ಹೋರಾಟವನ್ನು ತೀವ್ರಗೊಳಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಈ ಬೇಡಿಕೆಗಳ ಕುರಿತಂತೆ ಮತ್ತೊಮ್ಮೆ ಸುಧೀರ್ಘ ಚಚರ್ೆ ನಡೆಸಲು ಮಾರ್ಚ 15 ರಂದು ಮತ್ತೊಮ್ಮೆ ಸಭೆ ಸೇರಲು ತೀಮರ್ಾನಿಸಲಾಯಿತು

ಸಭೆಯನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದ ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮೀಜಿ, ನಮ್ಮ ಭಾಗದ ಬೇಡಿಕೆಗಳು ಈಡೇರಿಸಿಕೊಂಡು ಪ್ರಾದೇಶಿಕ ಅಸಮತೂಲನೆಯನ್ನು ನಿವಾರಿಸಲು ನಮ್ಮ ಭಾಗದ ಜನರು ಜಾಗೃತರಾಗಿ ಸಂಘಟಿತ ಹೋರಾಟ ನಡೆಸಬೇಕು. ಸಂಘಟಿತ ಹೋರಾಟದಿಂದ ಮಾತ್ರ ನ್ಯಾಯ ಪಡೆಯಲು ಸಾಧ್ಯ ಎಂದರು.

ಕೃಷಿಕ ಸಮಾಜ (ಸಂಯುಕ್ತ)ದ ಅಧ್ಯಕ್ಷ ಸಿದಗೌಡ ಮೋದಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಬಸವ ಭೀಮ ಸೇನೆಯ ಆರ್.ಎಸ್.ದಗರ್ೆ, ರೈತ ಮುಖಂಡರಾದ ಗುರುಗೌಡ ಪಾಟೀಲ, ಗುರುರಾಜ ಹುಳೇರ, ಧಾರವಾಡದ ಶಂಕರ ಅಂಬಲಿ, ಹುಬ್ಬಳ್ಳಿಯ ವಿಕಾಸ ಸೊಪ್ಪಿನ, ಬದಾಮಿಯ ಮಧುಸೂಧನ ತಿವಾರಿ, ಗದಗನ ಬಸವರಾಜ ಸಾಬಳೆ, ಹಾವೇರಿಯ ಶೇಖರಗೌಡ ಪಾಟೀಲ, ಶಿವಾನಂದ ಕರಿಗಾರ, ಬಾಗಲಕೋಟೆಯ ಗಂಗಾಧರ ಮೇಟಿ, ವಿಜಯಪುರದ ಲಕ್ಷ್ಮಣ ಭಕ್ಕಯ್ಯ, ನಿಪ್ಪಾಣಿಯ ಶೇತ್ಕರಿ ಸಂಘಟನೆಯ ರಮೇಶ ಪಾಟೀಲ,  ಶಕುಂತಲಾ ತೇಲಿ, ಅಜರ್ುನ ಗಾವಡಾ ಸೇರಿದಂತೆ ಅನೇಕ ಪ್ರಮುಖರು ಭಾಗವಹಿಸಿದ್ದರು.