ಕಾರವಾರ ಕಡಲತೀರದಲ್ಲಿ ಮ್ಯಾರಥಾನ್ ಯಶಸ್ವಿ
ಕಾರವಾರ 22: ಪ್ರವಾಸೋದ್ಯಮ ಇಲಾಖೆಸ್ಟಾರ್ ಚಾಯ್ಸ್ ನೃತ್ಯ ಕಲಾ ಶಾಲೆ ಅವರು ಆಯೋಜಿಸಿದ ಕಡಲು ಉತ್ಸವ ಅಂಗವಾಗಿ ನಗರದ ರವೀಂದ್ರನಾಥ್ ಟ್ಯಾಗೋರ್ ಕಡಲತೀರದಲ್ಲಿ ಭಾನುವಾರ ಬೀಚ್ ಮ್ಯಾರಥಾನ್ ಸ್ಪರ್ಧೆ ನಡೆಯಿತು.ಆಶಾನಿಕೇತನ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಲಿನೆಟ್ ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು.
ಟ್ಯಾಗೋರ ಕಡಲ ತೀರದ ಪ್ರವೇಶ ದ್ವಾರದ ತೀರದಿಂದ ಆರಂಭವಾದ ಮ್ಯಾರಥಾನ್ ಕೋಡಿಭಾಗದವರೆಗೆ ಸಾಗಿ, ಮರಳಿ ಕಡಲತೀರದಲ್ಲಿ ಕೊನೆಯಾಯಿತು.ಕಾರವಾರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 200 ಮ್ಯಾರಥಾನ್ ಪಟುಗಳು ಭಾಗವಹಿಸಿದ್ದರು. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಆಯೋಜಿಸಲಾಗಿತ್ತು. ಸುಮಾರು 5 ಕಿಲೋಮೀಟರ್ ಮ್ಯಾರಥಾನ್ ನಡೆಯಿತು. ಚಿಕ್ಕ ಚಿಕ್ಕ ಮಕ್ಕಳು, ಹಿರಿಯ ನಾಗರಿಕರು ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಬಹುಮಾನ ನೀಡಲಾಯಿತು.
ಪುರುಷರ ವಿಭಾಗದಲ್ಲಿ ನಾಗರಾಜ್ ಹೊನ್ನಪ್ಪ ನಾಯಕ್ (ಪ್ರಥಮ), ಕಾರ್ತೀಕ ಆರ್ ನಾಯ್ಕ (ದ್ವೀತಿಯ), ಸೋಹಮ್ ಎಸ್ ಮಾಜಾಳಿಕರ (ತೃತೀಯ) ಸ್ಥಾನ ಪಡೆದುಕೊಂಡರೆ ನಂತರದ ಸ್ಥಾನವನ್ನು ಜೋಸೆಫ್ ಎಸ್ ಸಿದ್ಧಿ, ಮಯೂರ್ ಎಚ್ ಕೆ, ಸಾಹಿಲ್ ಎಂ ನಾಯ್ಕ, ಶಿವಾ ರಘುನಾಥ್, ಕೃತಿಕ್ ಕೆ ನಾಯ್ಕ ಪಡೆದುಕೊಂಡರು.ಮಹಿಳೆಯರ ವಿಭಾಗದಲ್ಲಿ ಬಿಂದು ಎಸ್ ಹಿರೇಮಠ (ಪ್ರಥಮ), ಪೂರ್ವಿ ಟಿ ಹರಿಕಂತ್ರ (ದ್ವೀತಿಯ), ಅಹೈನಾರ್ ಶೇಕ್(ತೃತೀಯ) ಪಡೆದುಕೊಂಡರೆ ನಂತರದ ಸ್ಥಾನವನ್ನು ರಿದಿಮಾ ವಿ ಪಾವಸ್ಕರ್, ಟಿ ದಿವ್ಯಾ, ತೇಜಸ್ವಿನಿ ಇ ಗೌಡ, ಸ್ವಾತಿ ಗೌಡ, ಸಾಮಲಿ ಮಹಾಲೆ ಪಡೆದುಕೊಂಡರು.ಮ್ಯಾರಥಾನ್ ಕಾರ್ಯಕ್ರಮವನ್ನು ಕ್ರೀಡಾ ತರಬೇತುದಾರ ಪ್ರಕಾಶ್ ರೇವಣಕರ್ ಮತ್ತು ಅವರ ತಂಡದವರು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಉದ್ಯಮಿ ಪ್ರೀತಮ್ ರೇವಣಕರ್, ಆಯೋಜಕರಾದ ರಾಜನ್ ಬಾನಾವಾಳಿಕರ್, ರೋಹಿದಾಸ್ ಬಾನಾವಾಳಿಕರ್, ಜ್ಯೋತಿ ನಾಯ್ಕ, ಕುಮಾರ್ ನಾಯ್ಕ, ಯಶೋಧ, ನಿಶಾಂತ್ ನಾಯ್ಕ, ಪ್ರಕಾಶ್ ನಾಯ್ಕ ಇದ್ದರು.