1001 ಜನ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ
ಹಾನಗಲ್ 11: ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಇಲ್ಲಿ ನಡೆಯುವ ಗ್ರಾಮದೇವಿ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ 1001 ಜನ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.
ಹಳೆ ಬಸ್ ನಿಲ್ದಾಣದ ಬಳಿಯ ಪಾದಗಟ್ಟಿಯಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಯ ಮೂಲಕ ಗ್ರಾಮದೇವಿ ದೇವಸ್ಥಾನಕ್ಕೆ ತೆರಳಲಾಯಿತು. ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಉಡಿ ತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಾಸಕ, ಜಾತ್ರಾ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಶ್ರೀನಿವಾಸ ಮಾನೆ ಅವರು ಪತ್ನಿ ಉಷಾ ಅವರೊಂದಿಗೆ ದೇವಿಗೆ ಪೂಜೆ ಸಲ್ಲಿಸಿ, ಈ ಬಾರಿಯ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನಡೆಯಲಿ ಎಂದು ಪ್ರಾರ್ಥಿಸಿದರು.
ತಹಶೀಲ್ದಾರ್ ರೇಣುಕಾ ಎಸ್., ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಮಂಜಣ್ಣ ನಾಗಜ್ಜನವರ, ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ಉಪಾಧ್ಯಕ್ಷೆ ವೀಣಾ ಗುಡಿ, ಮಾಜಿ ಅಧ್ಯಕ್ಷೆ ಮಮತಾ ಆರೆಗೊಪ್ಪ, ಗಣೇಶ ಮೂಡ್ಲಿಯವರ, ರಾಜೂ ಗೌಳಿ, ಭೋಜರಾಜ ಕರೂದಿ, ಗುರುರಾಜ ನಿಂಗೋಜಿ, ಆದರ್ಶ ಶೆಟ್ಟಿ, ರಾಜಕುಮಾರ ಶಿರಪಂಥಿ, ಚಂದ್ರು ಉಗ್ರಣ್ಣನವರ, ಯಲ್ಲಪ್ಪ ಶೇರಖಾನಿ, ಪರಶುರಾಮ ನಿಂಗೋಜಿ, ವಿರುಪಾಕ್ಷಪ್ಪ ಕಡಬಗೇರಿ, ನಾಗರಾಜ ಉದಾಸಿ, ನೀಲಮ್ಮ ಉದಾಸಿ, ಶಿವಗಂಗಕ್ಕ ಪಟ್ಟಣದ, ವಿಜಯಲಕ್ಷ್ಮೀ ಹುಗ್ಗಿ, ಶೋಭಾ ಉಗ್ರಣ್ಣನವರ, ಸುಜಾತಾ ನಂದಿಶೆಟ್ಟರ, ರೂಪಶ್ರೀ ಗೌಳಿ, ಸುಜಾತಾ ಉದಾಸಿ, ಜ್ಯೋತಿ ಬೆಲ್ಲದ, ಮಧುಮತಿ ಪೂಜಾರ, ಸಂಕಮ್ಮ ಚಿಕ್ಕಣ್ಣನವರ, ವರುಣಿ ದೇಶಪಾಂಡೆ ಸೇರಿದಂತೆ ಜಾತ್ರಾ ಮಹೋತ್ಸವ ಸಮಿತಿಯ ಸದಸ್ಯರು,ಭಕ್ತರು ಪಾಲ್ಗೊಂಡಿದ್ದರು.