ಲೋಕದರ್ಶನ ವರದಿ
ಕಂಪ್ಲಿ 27:ಶಿಕ್ಷಕರ ಒಳಿತಿಗಾಗಿ ಕೂಡಲೇ ಸ್ಥಗಿತಗೊಂಡಿರುವ ಶಿಕ್ಷಕರ ವಗರ್ಾವಣೆ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ರಾಜ್ಯ ಸಕರ್ಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದಶರ್ಿ ಈರಪ್ಪ ಸೊರಟೂರು ಆಗ್ರಹಿಸಿದರು.
ತಾಲೂಕಿನ ಪ್ರಧಾನ ಅಂಚೆ ಕಛೇರಿ ಮುಂಭಾಗದಲ್ಲಿ ಬುಧವಾರ ಸಕರ್ಾರಿ ಗ್ರಾಮೀಣ ಶಿಕ್ಷಕರ ಸಂಘದ ತಾಲೂಕು ಘಟಕವು ಹಮ್ಮಿಕೊಂಡ ಅಂಚೆಪತ್ರ ಚಳುವಳಿಯ ಅಂಗವಾಗಿ, ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಬರೆದ ಅಂಚೆಪತ್ರಗಳನ್ನು ಪ್ರದಶರ್ಿಸಿ ಮಾತನಾಡಿ, ಗ್ರಾಮೀಣ ಶಿಕ್ಷಕರಿಗೆ 2500ರೂ.ಗಳ ಮಾಸಿಕ ಗ್ರಾಮೀಣ ಭತ್ಯೆಯನ್ನು ನೀಡಬೇಕು. ಪದವಿಧರ ಶಿಕ್ಷಕರನ್ನು 6ರಿಂದ 8ನೇವರ್ಗಕ್ಕೆ ಎಜಿಟಿಗೆ ವಿಲೀನಗೊಳಿಸಬೇಕು. ತಜ್ಞರ ಸಭೆ ನಡೆಸಿ ಎನ್ಪಿಎಸ್ ರದ್ದುಪಡಿಸಿ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಗ್ರಾಮೀಣ ಕೃಪಾಂಕ ಹಾಗೂ ಕೃಪಾಂಕ ರಹಿತ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಮಂಡಿಸಿದ ಎಲ್ಲಾ ಬೇಡಿಕೆಗಳನ್ನು ಶೀಘ್ರ ಈಡೇರಿಸುವಂತೆ ಆಗ್ರಹಿಸಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬರೆದ ಅಂಚೆಪತ್ರಗಳನ್ನು ಅಂಚೆ ಪೆಟ್ಟಿಗೆಗೆ ಹಾಕಿ ಸಾರ್ವಜನಿಕರ ಗಮನಸೆಳೆದರು.
ಅಂಚೆ ಪತ್ರ ಚಳುವಳಿಯಲ್ಲಿ ರಾಜ್ಯ ಸಕರ್ಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷ ನಾಗರಾಜ ನಾಯ್ಕ, ಸಹ ಕಾರ್ಯದಶರ್ಿ ಎನ್.ನೇತ್ರಾವತಿ, ಪ್ರಧಾನ ಕಾರ್ಯದಶರ್ಿ ವಿ.ಮುನಿಯನಾಯ್ಕ, ಸಂಘಟನಾ ಕಾರ್ಯದಶರ್ಿ ಎಚ್.ಗಿರಿಜಾ, ಖಜಾಂಚಿ ವಿ.ಪಕ್ಕೀರಪ್ಪ, ಮರಿಸ್ವಾಮಿ, ಎಚ್.ಜಡಿಯಪ್ಪ, ಯು.ಮಂಜುನಾಥ, ಎನ್ಪಿಎಸ್ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ, ಕರಿಬಸಪ್ಪ, ರಾಜಶೇಖರ್ ಹಾಗೂ ಗ್ರಾಮೀಣ ಭಾಗದ ಶಿಕ್ಷಕರು ಪಾಲ್ಗೊಂಡಿದ್ದರು.