ಅನೌಪಾಕಾರಿಕ ಶಿಕ್ಷಣ ಸಂಸ್ಥೆ, ದಲಿತ ವಿದ್ಯಾರ್ಥಿ ಪರಿಷತ್ ಸಹಯೋಗದಲ್ಲಿ ಖಖಐಅ ಸಹಾಯ ಕೈಪಿಡಿ ಬಿಡುಗಡೆ ಮಾಡಿ ವಿದ್ಯಾರ್ಥಿಗಳಿಗೆ ನೀಡಲಾಯಿತು
ವಿಜಯಪುರ ಮಾ, 8 : ವಿಜಯಪುರ ನಗರದಲ್ಲಿರುವ ಗಾಂಧಿ ಚೌಕ್ ಚರ್ಚ್ ಸಭಾಂಗಣದಲ್ಲಿ ಅನೌಪಚಾರಿಕ ಶಿಕ್ಷಣ ಸಂತೆ ಮತ್ತು ದಲಿತ ವಿದ್ಯಾರ್ಥಿ ಪರಿಷತ್ ಸಹಯೋಗದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬರ ಅಂಬೇಡ್ಕರ್ ರವರ 134 ನೇ ಜನ್ಮ ಜಯಂತಿ ನಿಮಿತ್ಯ ಕೊಡುಗೆಯಾಗಿ ನಾಡಿನ ಖಖಐಅ ಓದುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಪರಿಷತ್ತಿನ ಹಿತೈಸಿ ಶಿಕ್ಷಕಶಕರುಂದ ಸಿದ್ದಗೋಳಿಸಿರುವ ಖಖಐಅ ಪರೀಕ್ಷಾ ಸಹಾಯಕ ಕೈಪಿಡಿ ಬಿಡುಗಡೆಗೊಳಿಸಿ ಒಂದುದಿನದ ಕಾರ್ಯಾಗಾರ ಏರಿ್ಡಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಫಾದರ್ ಟಿಯೋಲೋ ಮೆಚಾಡೊ ರವರು ಮಾತನಾಡಿ ವಿದ್ಯಾರ್ಥಿಗಳು ನಮ್ಮ ಗುರಿಯನ್ನ ಸಾಧಿಸಬೇಕಾದರೆ ಛಲ ಬಿಡದೆ ಓದಬೇಕು, ಅವಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.
ವಿದ್ಯಾರ್ಥಿ ಪರಷತ್ನ ಸಂಸ್ಥಾಪಕ ರಾಜ್ಯ ಅಧ್ಯಕ್ಷರಾದ ಶ್ರೀನಾಥ್ ಪೂಜಾರಿ ಯವರು ಮಾತನಾಡಿ ವಿದ್ಯಾರ್ಥಿಗಳು ದೇಶದ ಭವಿಷ್ಯತ್ತಿನ ಪ್ರಜೆಗಳು ಸೈನಿಕರು ಯುದ್ಧಕ್ಕೆ ಹೋಗಬೇಕಾದರೆ ಯಾವರೀತಿ ತಯಾರಿ ಮಾಡುತ್ತಾರೋ ಅದೇರೀತಿ ಪರೀಕ್ಷೆ ಬರೆಯಲು ತಾವುಕೋಡ ತಯಾರಿ ಮಾಡಬೇಕು ಎಂದೂ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿಜಯಪುರ ನಗರದ ಮಹಿಳಾ ಪೊಲೀಸ್ ಠಾಣೆ ಪಿ ಎಸ್ ಐ ನಿಂಗಪ್ಪ ಎಸ್ ಪೂಜಾರಿ ಯವರು ಮಾತನಾಡಿ ಈ ಒಂದು ಕೈಪಿಡಿಯಲ್ಲಿರುವ ವಿಷಯಗಳನ್ನು ಸಂಪೂರ್ಣವಾಗಿ ಓದಿದರೆ ನೂರಕ್ಕೆ ನೂರು ಅಂಕ ಪಡಿಯುಹುದರಲ್ಲಿ ಯಾಹುದೆ ಸಂದೇಹವಿಲ್ಲ ಈ ಕಾರ್ಯಮಾಡಿದ ದಲಿತ ವಿದ್ಯಾರ್ಥಿ ಪರಿಷತ್ ತಂಡದವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ಕಾರ್ಯಕ್ರಮದ ವೇಧಿಕೆ ಅಲಂಕರಿಸಿದ ಡಿವಿಪಿ ರಾಜ್ಯ ಸಂಚಾಲಕರಾದ ಬಾಲಾಜಿ ಕಾಂಬಳೆ ಯವರು, ಜಿಲ್ಲಾ ಸಂಚಾಲಕರಾದ ಅಕ್ಷಯ್ ಕುಮಾರ್ ಅಜಮನಿ ಯವರು, ಪರೀಕ್ಷೆಯ ಕೈಪಿಡಿ ತಯಾರಿ ಮಾಡಿದ ಗೌತಮ್ ರವರು ವಿದ್ಯಾರ್ಥಿಗಳಿಗೆ ಉತ್ತಮವಾಗಿ ಪರೀಕ್ಷೆಯನ್ನು ಎದುರಿಸಿ ಎಂದು ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ ಹಿತೈಸಿ ಶಿಕ್ಷಕರು ವಿದ್ಯಾರ್ಥಿ ಪರಿಷತ್ ಮುಖಂಡರಾದ ಸಂದೇಶ್ ಕುಮುಟಗಿ, ಶಂಕರ ಬಸರಗಿ, ಯುವರಾಜ್ ಓಲೇಕಾರ್, ಪಂಡಿತ ಯಲಗೋಡ ಮತ್ತು ವಿದ್ಯಾರ್ಥಿಗಳು ಅನೌಪಚಾರಿಕ ಸಂಸ್ಥೆಯ ಸಿಬ್ಬಂದಿಗಳು ಭಾಗಿಯಾಗಿದ್ದರು.