ಮಾನವೀಯ ಹೃದಯವಂತಿಕೆ ಬೆಳೆಸುವ ಬಹುಮಾಧ್ಯಮ ನಾಟಕ - ರಾಜು ತಾಳಿಕೋಟಿ

A multi-media drama that fosters humane heartiness - Raju Talikoti

ಮಾನವೀಯ ಹೃದಯವಂತಿಕೆ ಬೆಳೆಸುವ ಬಹುಮಾಧ್ಯಮ ನಾಟಕ - ರಾಜು ತಾಳಿಕೋಟಿ  

 ರಾಣೇಬೆನ್ನೂರು : ಡಿ 19  ಮಾನವೀಯ ಹೃದಯವಂತಿಕೆಯ ಗುಣ ಧರ್ಮಗಳನ್ನು ಬೆಳೆಸುವಲ್ಲಿ ನಾಟಕಗಳು ಅತ್ಯಂತ ಪ್ರಮುಖ ಪಾತ್ರವಹಿಸಲಿವೆ ಎಂದು ವೃತ್ತಿ, ರಂಗಭೂಮಿ ಕಲಾವಿದ, ರಂಗಾಯಣ ನಿರ್ದೇಶಕ ಡಾ, ರಾಜು ತಾಳಿಕೋಟಿ ಹೇಳಿದರು.  

      ಅವರು, ಬಿ. ಎ.ಜೆ. ಎಸ್‌.ಎಸ್‌. ಕಾಲೇಜು ಆವರಣದಲ್ಲಿ, ಕುಪ್ಪೇಲೂರು, ರಂಗ ಚೇತನ ಸಂಸ್ಥೆ ತನ್ನ11ನೇ ವಾರ್ಷಿಕೋತ್ಸವದ ನಿಮಿತ್ತ ಆಯೋಜಿಸಿದ್ದ, ವಿವಿಧ ಕ್ಷೇತ್ರ ಸಾಧಕರಿಗೆ ಪ್ರಶಸ್ತಿ ಪ್ರಧಾನ- ಗಣ್ಯರ  ಅಭಿನಂದನಾ ಸನ್ಮಾನ ಮತ್ತು ಕೆ. ಎನ್‌. ಸಾಳುಠೆ ರಚಿತ "  ರತ್ನಮಾಂಗಲ್ಯ" ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಇತಿಹಾಸದಲ್ಲಿ ತನ್ನ ವೈಭವ ಕಂಡ   ಪೌರಾಣಿಕ, ಐತಿಹಾಸಿಕ, ಮತ್ತು ಸಾಮಾಜಿಕ ನಾಟಕಗಳು ಆಧುನಿಕ ಭರಾಟೆ,  ಪಾಚ್ಚಿಮಾತ್ಯ  ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ಪ್ರದರ್ಶನ ಕಾಣದೆ  ನಲಗುತ್ತಿವೆ. ಎಂದು ತಾಳಿಕೋಟಿ ವಿಷಾದಿಸಿದರು.      ಗ್ರಾಮೀಣ ಸಂಸ್ಕೃತಿ ಪುನರುತ್ಥಾನವಾಗಬೇಕಾದರೆ ಅಂದಿನ ಬಹು ಮೌಲ್ಯ ಕಂಡ ನಾಟಕಗಳು ಸರಕಾರ ಅವುಗಳನ್ನು ಪುನ: ಪ್ರದರ್ಶನ ಮಾಧ್ಯಮವಾಗಿ ಅಳವಡಿಸಿಕೊಳ್ಳಬೇಕಾದ ಇಂದಿನ ಅಗತ್ಯವಿದೆ ಎಂದರು.  

         ಇತಿಹಾಸದ ಪರಿಕಲ್ಪನೆಯಲ್ಲಿ, ವೈಭವ ಕಂಡ ಅಂದಿನ ನಾಟಕಗಳು   ಶಾಲಾ-ಕಾಲೇಜುಗಳಲ್ಲಿ ಯುವ  ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಪಠ್ಯಪುಸ್ತಕದಲ್ಲಿ ಅಳವಡಿಸಬೇಕು ಮತ್ತು ಶಾಲೆಗಳಲ್ಲಿ ತರಬೇತಿ ಕೊಡುವ ರಂಗ ಹಾಗೂ ಸಾಂಸ್ಕೃತಿಕ ಶಿಕ್ಷಕರನ್ನು ನೇಮಿಸಬೇಕಾದ ಅಗತ್ಯವಿದೆ ಎಂದರು.     ರಂಗ ಸಂಭ್ರಮ- ಸಂಸ್ಕೃತಿ ಮತ್ತು ನಾಟಕ ಪರಂಪರೆ ಕುರಿತು ಕಾಲೇಜು ಆಡಳಿತಾಧಿಕಾರಿ ಡಾಕ್ಟರ್ ಆರ್‌. ಎಂ.ಕುಬೇರ​‍್ಪ ಅವರು ಮಾತನಾಡಿದರು.  ಸಂಸ್ಥೆಯು  ನಡೆದು ಬಂದ ದಾರಿ ಕುರಿತು ಸಂಸ್ಥಾಪಕ ಅಧ್ಯಕ್ಷ ಗಣೇಶ್ ಗುಡಿಗುಡಿ ಅವರು ಮಾತನಾಡಿದರು.   ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರಕಾಶ್ ಕೋಳಿವಾಡ, ಅವರು, ರಾಜು ತಾಳಿಕೋಟಿ ಅವರಿಗೆ ಅಭಿನಂದಿಸಿ ಸನ್ಮಾನಿಸಿದರು.  

         ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಬಿ. ಹೆಚ್‌.ಬುರಡಿಕಟ್ಟಿ, ನ್ಯಾಯವಾದಿ ಎಸ್‌.ಎಸ್‌. ರಾಮಲಿಂಗಣ್ಣನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್‌. ವಿ. ಚಿನ್ನಿಕಟ್ಟಿ, ಢಾಕೇಶ್ ಲಮಾಣಿ,ಸಮಾಜ ಸೇವಕರಾದ ಮಂಜಯ್ಯ ಚಾವಡಿ, ಹೆಚ್‌. ಬಿ.ಶಾಂತವೀರ​‍್ಪ, ಎ. ಎ.ಕಾಡೆಮಿ ನಿರ್ದೇಶಕ ಅಣ್ಣೇಶ್ ಕೆ.ಎಚ್‌., ಅಕಾಡೆಮಿ ಶೈಕ್ಷಣಿಕ ಮುಖ್ಯಸ್ಥ ಅನಿಲ್ ಕುಮಾರ್ ಎಂ., ಸಾಹಿತಿಗಳಾದ ಡಾ, ಪ್ರಭುಸ್ವಾಮಿ ಹಾಳೇವಾಡಿಮಠ,ದಾವಣಗೆರೆ ಸಂಚಾರಿ ಪಿಎಸ್‌ಐ, ಶ್ರೀಮತಿ ಡಿ.ಎಚ್‌. ನಿರ್ಮಲ, ಕಿರುತೆರೆ ನಟಿ, ಕು. ಶೋಭಾ ಎಚ್‌. ಎಂ. ಸಾಹಿತಿ ಪವನ್ ನಾ. ದೀಕ್ಷಿತ್, ಡಾ, ಬಸವರಾಜ ಪೂಜಾರ,   ಸೇರಿದಂತೆ ಮತ್ತಿತರ ಗಣ್ಯರು, ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಜನಪದ, ಕಾನೂನು, ಆರೋಗ್ಯ, ಕಿರುತೆರೆ, ಬೆಳ್ಳಿತರೆ, ನೃತ್ಯ ಸೇರಿ ವಿವಿಧ ಕ್ಷೇತ್ರ ಸಾಧಕರನ್ನು ಸಾರ್ವಜನಿಕವಾಗಿ, ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಲಾಯಿತು. ಕಲಾವಿದ ರುದ್ರೇಶ್ ಬಡಿಗೇರ, ಪ್ರಾರ್ಥಿಸಿದರು.  

 "ಅಭಿರುಚಿ "ಕಲಾ ಸಂಸ್ಥೆ ಸಂಸ್ಥಾಪಕ ಕೆ.ಎಸ್‌. ಸ್ವಾಗತಿಸಿದರು. ಜಾನಪದ ವಿದ್ವಾಂಸ ಡಾ, ಕೆ.ಸಿ. ನಾಗರಜ್ಜಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಶ್ರೀಮತಿ ಜಯಶ್ರೀ ಮುರುಡಪ್ಪನವರ, ನಿರೂಪಿಸಿ, ಸಾಹಿತಿ ಪರಶುರಾಮ ಬಣಕಾರ, ವಂದಿಸಿದರು. ನಂತರ ಪ್ರದರ್ಶನಗೊಂಡ ವೃತ್ತಿ ರಂಗಭೂಮಿ ಕಲಾವಿದರ ರತ್ನಮಾಂಗಲ್ಯ ಸಾಮಾಜಿಕ ಮತ್ತು ಹಾಸ್ಯ ನಾಟಕವು ವಾಣಿಜ್ಯ ನಗರದ, ಹಾಗೂ ಗ್ರಾಮೀಣ ಪ್ರೇಕ್ಷಕರನ್ನು ಮನತಣಿಸಿದರು.