ಅಲೆಮಾರಿ ಸಮುದಾಯದ ಕುಟುಂಬಗಳ ಕುಂದು ಕೊರತೆಗಳ ಸಭೆ
ಗದಗ 07: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮ,ಅಧ್ಯಕ್ಷರಾದ ಪಲ್ಲವಿ ಜಿ.ಅವರು ಶನಿವಾರ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರ ಗ್ರಾಮಕ್ಕೆ ಭೇಟಿ ನೀಡಿ ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯದ ಗಂಟಿಚೋರ್, ಬುಡ್ಗಜಂಗಮ, ಕೊರಮ ಸಮುದಾಯದವರು ವಾಸಿಸುತ್ತಿರುವ ಸ್ಥಳ ವೀಕ್ಷಣೆ ಮಾಡಿ ಕುಂದು ಕೊರತೆಗಳ ಸಭೆ ಜರುಗಿಸಿ ನಿವೇಶನ ರಹಿತ ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯದವರಿಗೆ ನಿವೇಶನ ಒದಗಿಸಲು, ನಿವೇಶನ ಲಭ್ಯವಿದ್ದ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಲು ಸಂಬಂಧಸಿದ ಇಲಾಖೆಯವರಿಗೆ ಸೂಚಿಸಿದರು.
ಬಾಲೇಹೊಸೂರ ಗ್ರಾಮದಿಂದ 2 ಕಿ.ಮೀ. ಅಂತರದಲ್ಲಿ 3ಎ-12ಗು ಸ್ಮಶಾನಭೂಮಿ ಹಂಚಿಕೆಯಾಗಿರುವದನ್ನು ಹಸ್ತಾಂತರ ಮಾಡಿಕೊಂಡು ಅಭಿವೃದ್ದಿಗೊಳಿಸಲು ಸಂಬಂಧಪಟ್ಟ ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ ಸೂಚಿಸಿದರು ಮತ್ತು ಗಿರಣಿವಡ್ಡರ, ಬುಡ್ಗಜಂಗಮ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಸಮಸ್ಯೆ ಆಗುತ್ತಿದ್ದು ತಹಶೀಲ್ದಾರವರು ತಮ್ಮ ಹಂತದಲ್ಲಿ ಪರೀಶೀಲಿಸಿ ಅರ್ಹರಿಗೆ ಜಾತಿ ಪ್ರಮಾಣ ಪತ್ರಗಳನ್ನು ನೀಡಲು ಮಾನ್ಯ ಅಧ್ಯಕ್ಷರು ತಿಳಿಸಿದರು. ಲಕ್ಷ್ಮೇಶ್ವರ ಪಟ್ಟಣದ ಇಂದಿರಾ ನಗರದಲ್ಲಿರುವ ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯದ ಬುಡ್ಗಜಂಗಮ್, ಚನ್ನದಾಸರ, ಸೀಳ್ಳಿಕ್ಯಾತಸ್, ಕೊರಮ, ಕೊರಚ, ಕೊರವ ಹಾಗೂ ಇತರೆ ಅಲೆಮಾರಿ ಸಮುದಾಯದ ಕುಟುಂಬಗಳ ಸ್ಥಳ ವೀಕ್ಷಣೆ ಹಾಗೂ ಕುಂದು ಕೊರತೆ ಸಭೆಯನ್ನು ಜುರುಗಿಸಿ ನಿವೇಶನ ರಹಿತ ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯದವರಿಗೆ ನಿವೇಶನ ಒದಗಿಸಲು ಅರ್ಜಿಗಳನ್ನು ಸಲ್ಲಿಸಲು ತಿಳಿಸಿದರು.
ಹಾಗೂ ನಿವೇಶನ ಲಭ್ಯವಿದ್ದ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿಕೊಡಲು ಅರ್ಜಿ ಸಲ್ಲಿಸುವಂತೆ ತಿಳಿಸಿದರು.ಈ ಸಭೆಯಲ್ಲಿ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಬಿ.ಎಸ್. ಆನಂದಕುಮಾರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಮಹೇಶ ಪೋತದಾರ, ತಹಶೀಲ್ದಾರ ವಾಸುದೇವ ಸ್ವಾಮಿ, ಲಕ್ಷ್ಮೇಶ್ವರ ಪುರಸಭೆ ಮುಖ್ಯಾಧಿಕಾರಿ ಮಹೇಶ, ಪಂಚಾಯತ ಅಭಿವೃದ್ದಿ ಅಧಿಕಾರಿ ಶೇಖರಗೌಡ ವಡಕನಗೌಡರ, ಶಿರಹಟ್ಟಿ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಗೋಪಾಲ ಟಿ. ಲಮಾಣಿ , ಅಧಿಕಾರಿಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯಗಳ ಮುಖಂಡಾರಾದ ದುರಗೇಶ ವಿಭೂತಿ, ಮೋಹನ ಭಜಂತ್ರಿ, ಕೆ.ಎಸ್. ಬೇಲೂರ, ದುರಗಪ್ಪ ಬಂಡಿ,ಲೋಕೇಶ ಕಟ್ಟಿಮನಿ, ಶಿವಕುಮಾರ ಕಡೇಮನಿ, ವೆಂಕಟೇಶ ಪಿ., ಬಸವರಾಜ ಅರಕೇರಿ ಹಾಗೂ ಮುಂತಾದವರು ಹಾಜರಿದ್ದರು.