ಲೌಕಿಕ ಬದುಕಿನಲ್ಲಿ ಬಿದ್ದಿರುವ ಮನುಷ್ಯ ಶಾಂತಿ ನೆಮ್ಮದಿ ಇಲ್ಲದಂತಾಗಿದ್ದಾನೆ - ಬಸವರಾಜ್
ರಾಣೇಬೆನ್ನೂರು 30: ಲೌಕಿಕ ಬದುಕಿನಲ್ಲಿ ಬಿದ್ದಿರುವ ಮನುಷ್ಯನ ಜೀವನ ಶಾಂತಿ ನೆಮ್ಮದಿ ಇಲ್ಲದೆ ತೊಳಲಾಡುವಂತಾಗಿದೆ ಎಂದು ಶ್ರೀ ಗುರುಬಸವ ಚನ್ನಪ್ಪಜ್ಜನವರ ಮಠದ ಅಧ್ಯಕ್ಷ ಬಸವರಾಜ ಐರಣಿ ಹೇಳಿದರು. ಅವರು ಸೋಮವಾರ ಇಲ್ಲಿನ ಸಿದ್ದೇಶ್ವರ , ನಗರದ ಶ್ರೀ ಗುರು ಚನ್ನಪ್ಪಜ್ಜನವರ ಮಠದಲ್ಲಿ ಎಳ್ಳಮವಾಸ್ಯೆ ಪೂಜಾ ಮತ್ತು ಶ್ರೀ ಗುರುಬಸವ ಸ್ವಾಮಿಗಳವರ 88ನೇ ಆರಾಧನಾ ಮಹೋತ್ಸವ ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾನವ ಜನ್ಮ ಬಹುದೊಡ್ಡದು. ಮನುಷ್ಯನಾಗಿ ಹುಟ್ಟಿಬರುವುದು ದುರ್ಲಭ ಇಂದಿನ ಜನ್ಮದಲ್ಲಿ ಮನುಷ್ಯನಾಗಿ ಜನ್ಮ ಜನ್ಮತಾಳಿದ್ದೇವೆ ಇದೆಲ್ಲವೂ ಪುಣ್ಯ ವಿಶೇಷ ಎಂದ ಅವರು ಪ್ರತಿಯೊಬ್ಬರು ಧಾರ್ಮಿಕ ಸಂಸ್ಕಾರ ಪರಂಪರೆಯಲ್ಲಿ ಸಾಗಿದಾಗ ಮಾತ್ರ ಮನುಷ್ಯ ಜನ್ಮವು ಸಾರ್ಥಕತೆ ಪಡೆಯಲಿದೆ ಎಂದರು. ದೇವರು ಧರ್ಮ ಆಧ್ಯಾತ್ಮ ಮತ್ತು ಸಂಸ್ಕಾರ ಇವೆಲ್ಲವೂ ಪೂರ್ವಜನ್ಮದ ಪುಣ್ಯದ ಫಲ. ಇದ್ದವರು ಇಲ್ಲದವರಿಗೆ ಸಹಾಯ ಹಸ್ತ, ಮತ್ತು ಹಸಿದವರಿಗೆ ಅನ್ನ ನೀಡುವುದೇ ನಿಜವಾದ ಮಾನವೀಯ ಧರ್ಮವಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಕೃಷ್ಣಪ್ಪ ವೆಂಕಟಪ್ಪ ಇನಾಮತಿ, ಕಾರ್ಯದರ್ಶಿ ಪಾಂಡಪ್ಪ ರಾಮಪ್ಪ ಪೂಜಾರ, ಸಹ ಕಾರ್ಯದರ್ಶಿ ಮಾರುತಿ ಗರಡಿಮನಿ, ನಿಂಗಪ್ಪ ಐರಣಿ, ಖಜಾಂಚಿ ಮರಿಸ್ವಾಮಿ ನೀ. ಪೂಜಾರ, ಸಮಿತಿಯ ಸದಸ್ಯರಾದ ಬಸಪ್ಪ ಯಲವಟ್ಟಿ, ವೆಂಕಟೇಶ್ ಅಡ್ಮನಿ, ಮಲ್ಲಿಕಾರ್ಜುನ ಮಾಗೇನಹಳ್ಳಿ, ಲಿಂಗರಾಜ ನೀಲಗುಂದ, ಸಿದ್ದಪ್ಪ ಐರಣಿ, ರವಿ ಮು.ಕಿಚಡಿ, ಮಂಜುನಾಥ್ ಮಸಲ್ವಾಡ, ಸೇರಿದಂತೆ ಮತ್ತಿತರ ಗಣ್ಯರು, ಶ್ರೀಮಠದ ಭಕ್ತರು ಉಪಸ್ಥಿತರಿದ್ದರು. ಎಳ್ಳು ಅಮಾವಾಸ್ಯೆ ನಿಮ್ಮಿತ್ತ ಸೂರ್ಯೋದಯ ಕಾಲದಿಂದ ವಿವಿಧ ಧಾರ್ಮಿಕ ಪೂಜಾ, ವಿಧಿ ವಿಧಾನ ಕಾರ್ಯಗಳು ಜರುಗಿದವು. ಮಧ್ಯಾಹ್ನ ಸಾರ್ವಜನಿಕವಾಗಿ ಅನ್ನ ಸಂತರೆ್ಣ ನಡೆಯಿತು.