ಇಂದು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬೃಹತ್ ಆರೋಗ್ಯ ಮೇಳ
ಸವದತ್ತಿ 22: ಸಿಎಮ್ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಿ ರೋಗ ಮುಕ್ತ ಸಮಾಜಕ್ಕೆ ಶ್ರಮಿಸುತ್ತಿದೆ. ಬಡ ಜನರಿಗಾಗಿ ಬೆಳಗಾವಿ ವಿಭಾಗದ ಸವದತ್ತಿಯಲ್ಲಿ ಬೃಹತ್ ಉಚಿತ ಆರೋಗ್ಯ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ವಿಶ್ವಾಸ್ ವೈದ್ಯ ಹೇಳಿದರು. ಮಾ. 23 ರಂದು ಪಟ್ಟಣದಲ್ಲಿ ಜರುಗಲಿರುವ ಬೃಹತ್ ಆರೋಗ್ಯ ಮೇಳದ ಕುರಿತು ಶುಕ್ರವಾರ ತಮ್ಮ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಮೇಳಕ್ಕೆ 10 ಸಾವಿರಕ್ಕೂ ಅಧಿಕ ಜನ ಸೇರುವ ನೀರೀಕ್ಷೆ ಇದೆ. ನುರಿತ ವೈದ್ಯರ ತಂಡದಿಂದ ಆಲೋಪತಿ, ಆಯುರ್ವೇದ ಮತ್ತು ಹೋಮಿಯೋಪತಿ ಚಿಕಿತ್ಸೆ ಓಷಧೋಪಚಾರ ಸೇರಿ ಸಕಲ ವ್ಯವಸ್ಥೆಗೆ ಕ್ರಮ ವಹಿಸಲಾಗಿದೆ. 300ಕ್ಕೂ ಅಧಿಕ ವಿಧಾನದೊಂದಿಗೆ ಸುಮಾರು 20 ಕ್ಕೂ ಅಧಿಕ ಬಗೆಯ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ ನಡೆಸಲಾಗುವುದು. ಜೊತೆಗೆ ಹೆಚ್ಚಿನ ಚಿಕಿತ್ಸೆಗಾಗಿ ಪ್ರತಿಷ್ಠಿತ ಆಸ್ಪತ್ರೆಗಳಿಗೂ ರವಾನಿಸಿ, ಉಚಿತ ಚಿಕಿತ್ಸೆ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ.
12 ವಿಶೇಷ ವೈದ್ಯರ ನೇತೃತ್ವದ ತಾಲೂಕಾಸ್ಪತ್ರೆಯಲ್ಲಿ ಪ್ರತಿದಿನ 800 ಕ್ಕೂ ಅಧಿಕ ಹೋರ ರೋಗಿಗಳ ತಪಾಸಣೆ ಹಾಗೂ ತಿಂಗಳಿಗೆ 400 ಕ್ಕೂ ಹೆಚ್ಚು ಹೆರಿಗೆ ನಡೆಯುತ್ತಿವೆ.ಬಡ ಜನರ ಆಸರೆಯಾದ ತಾಲೂಕಾಸ್ಪತ್ರೆಯನ್ನು ಜಿ+4 ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯ ಮಾದರಿಯ ಅಭಿವೃದ್ಧಿಗೆ, ವೈದ್ಯರ ವಸತಿ ಗೃಹ ಹಾಗೂ ಇತರ ಅವಶ್ಯಕ ಸೌಲಭ್ಯಕ್ಕೆ ಬಜೆಟ್‌ನಲ್ಲಿ ಅಂದಾಜು ರೂ. 157 ಕೋಟಿ ಮೀಸಲಿರಿಸಲಾಗಿದೆ ಎಂದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಐ.ಪಿ. ಗಡಾದ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಆಶಾ-ಅಂಗನವಾಡಿ ಕಾರ್ಯಕರ್ತೆ ಯರ ಮೂಲಕ ಮೇಳದ ಪ್ರಚಾರ ಮಾಡಲಾಗಿದೆ.
ಪ್ರತಿಷ್ಠಿತ ವೈದ್ಯರು, ಅತ್ಯಾಧುನಿಕ ಸ್ಕ್ಯಾ ನಿಂಗ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು. ತಹಶೀಲ್ದಾರ್ ಎಮ್.ಎನ್. ಹೆಗ್ಗನ್ನವರ, ಟಿಎಚ್ ಒ ಶ್ರೀಪಾದ ಸಬನೀಸ್, ಮುಖ್ಯಾಧಿಕಾರಿ ಸಂಗನಬಸಯ್ಯ, ವಿಜಯ ಸಂಗಪ್ಪಗೋಳ, ಶಿವಾನಂದ ಹೂಗಾರ, ದಿಲಾವರ ಸನದಿ, ಪ್ರವೀಣ ರಾಮಪ್ಪನವರ, ಬಸವರಾಜ ಹುಗ್ಗಿ ಎಸ್.ವಿ ತುಪ್ಪದ, ಮಹಾನಂದಾ ಪಾಟೀಲ ಇತರರಿದ್ದರು. ಹೇಳಿಕೆ:ಪಟ್ಟಣದಲ್ಲಿ ಬೃಹತ್ ಆರೋಗ್ಯ: ಮೇಳದದ ಉದ್ಘಾಟನಾ ಸಮಾರಂಭ ಘನ ಉಪಸ್ಥಿತಿ ಸತೀಶ ಲ. ಜಾರಕಿಹೊಳಿ, ಮಾನ್ಯ ಲೋಕೋಪಯೋಗಿ ಸಚಿವರು ಕರ್ನಾಟಕ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಬೆಳಗಾವಿ, ಮುಖ್ಯ ಅತಿಥಿಗಳಾಗಿ ಲಕ್ಷ್ಮೀ ಆರ್. ಹೆಬ್ಬಾಳಕರ, ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನರ ಮತ್ತು ಹಿರಿಯ , ನಾಗರೀಕರ ಸಬಲೀಕರಣ ಸಚಿವರು, ಕರ್ನಾಟಕ ಸರ್ಕಾರ, ಉದ್ಘಾಟಕರು ದಿನೇಶ ಗುಂಡೂರಾವ್, ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಕರ್ನಾಟಕ ಸರ್ಕಾರ, ವಿಶೇಷ ಆಮಂತ್ರಿತರು ಅಶೋಕ ಮ. ಪಟ್ಟಣ, ಮಾನ್ಯ ಸರ್ಕಾರಿ ಮುಖ್ಯ ಸಚೇತಕರು, ಕರ್ನಾಟಕ ವಿಧಾನ ಸಭೆ, ಪ್ರಕಾಶ ಬಿ. ಹುಕ್ಕೇರಿ, ಕರ್ನಾಟಕ ಸರ್ಕಾರದ ಮಾನ್ಯ ವಿಶೇಷ ಪ್ರತಿನಿಧಿ-2 ನವದೆಹಲಿ,ಶ್ರೀ ಭರಮಗೌಡ ಎ. ಕಾಗೆ, ಮಾನ್ಯ ಅಧ್ಯಕ್ಷರು, ವಾಯುವ್ಯ ಸಾರಿಗೆ ನಿಗಮ ನಿಯಮಿತ, ಮಹಾಂತೇಶ ಎಸ್. ಕೌಜಲಗಿ ಮಾನ್ಯ ಅಧ್ಯಕ್ಷರು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಸೇರಿದಂತೆ ಜಿಲ್ಲೆಯ ಸಂಸದರು, ಶಾಸಕರು ತಜ್ಞ ವೈದ್ಯರು ಆಗಮಿಸುತ್ತಿದ್ದಾರೆ ಈ ಆರೋಗ್ಯ ಮೇಳದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು.ವಿಶ್ವಾಸ ವೈದ್ಯ ಶಾಸಕರು, ಸವದತ್ತಿ ಎಲ್ಲಮ್ಮನ ವಿಧಾನಸಭಾ ಕ್ಷೇತ್ರ.