ಸಾಹಿತ್ಯ ವಲಯಗಳಿಗೆ ಬಹುದೊಡ್ಡ ನಷ್ಟವನ್ನುಂಟು ಮಾಡಿದೆ: ಬಸವರಾಜ ಪೂಜಾರ

A great loss to literary circles: Basavaraja Pujara


ಸಾಹಿತ್ಯ ವಲಯಗಳಿಗೆ ಬಹುದೊಡ್ಡ ನಷ್ಟವನ್ನುಂಟು ಮಾಡಿದೆ: ಬಸವರಾಜ ಪೂಜಾರ 

ಹಾವೇರಿ 09: ಸೈದ್ದಾಂತಿಕ ಬದ್ದತೆಯ, ಸಮರಾ​‍್ಣ ಮನೋಭಾವದ ನಾಯಕರು ಹಾಗೂ ಬಹುದೊಡ್ಡ ವಿದ್ವಾಂಸರ ಅಗಲಿಕೆಯು ನಾಡಿನ ಜನಚಳುವಳಿಗಳು ಮತ್ತು ಬೌದ್ಧಿಕ, ಸಾಹಿತ್ಯ ವಲಯಗಳಿಗೆ ಬಹುದೊಡ್ಡ ನಷ್ಟವನ್ನುಂಟು ಮಾಡಿದೆ ಎಂದು ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಅಭಿಪ್ರಾಯಪಟ್ಟರು. 

ನಗರದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಅಗಲಿದ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌.ಎಸ್) ರಾಜ್ಯ ಅಧ್ಯಕ್ಷರಾಗಿದ್ದ ಕಾಮ್ರೇಡ್ ಜಿ.ಸಿ ಬಯ್ಯಾರೆಡ್ಡಿ, ಪ್ರಖ್ಯಾತ ಚಿಂತಕರು, ವಿದ್ವಾಂಸರು ಹಾಗೂ ಸಾಹಿತಿಗಳಾಗಿದ್ದ ಪ್ರೊ. ಮುಜಾಫರ್ ಅಸ್ಸಾದಿ ಮತ್ತು ನಾ ಡಿಸೋಜಾ ರವರಿಗೆ ಪ್ರಗತಿಪರ ಹಾಗೂ ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಆಯೋಜಿಸಿದ ಗೌರವ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 

ಪ್ರಾಮಾಣಿಕತೆ, ಸೈದ್ಧಾಂತಿಕ ಬದ್ಧತೆ ಹಾಗೂ ಸಮರಶೀಲ ಹೋರಾಟದ ಮನೋಭಾವದ ಸಂಗಾತಿ ಜಿ.ಸಿ. ಬಯ್ಯಾರೆಡ್ಡಿ ಅವರು ರಾಜ್ಯದಲ್ಲಿ ರೈತ, ಕಾರ್ಮಿಕರ ಮತ್ತು ದಲಿತ, ಆದಿವಾಸಿ ಸಮುದಾಯಗಳ, ಮಹಿಳೆ, ಶೋಷಿತ ಎಲ್ಲ ಜನ ವಿಭಾಗಗಳ ಐಕ್ಯ ಚಳುವಳಿಯನ್ನು ಕಟ್ಟುವಲ್ಲಿ ಮತ್ತು ಅದನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಸಮಾಜದಲ್ಲಿ ಶಾಂತಿ, ನಾಡಿನ ಸೌಹಾರ್ದ ಪರಂಪರೆಯ ರಕ್ಷಣೆಗಾಗಿ, ರಾಜ್ಯದಲ್ಲಿ ದುಡಿಯುವ ವರ್ಗದ ಪರ್ಯಾಯ ರಾಜಕೀಯವನ್ನು ಕಟ್ಟುವಲ್ಲಿ ಅವರ ಪಾತ್ರ ಮಹತ್ವದ್ದು ಎಂದರು. 

ಪ್ರೊ. ಮುಜಾಫರ್ ಅಸ್ಸಾದಿ ಹಾಗೂ ನಾ. ಡಿಸೋಜಾ ಅವರು ಅಪಾರ ಪಾಂಡಿತ್ಯದ ತುಂಬಿದ ಕೊಡದಂತಿದ್ದರು. ಅಂತರಾಷ್ಟ್ರೀಯ ಮಟ್ಟದ ವಿದ್ವಾಂಸರಾಗಿದ್ದರೂ ಯಾವುದೇ ಗರ್ವ ಇಲ್ಲದ ತೀರಾ ಸಜ್ಜನಿಕೆಯ ವ್ಯಕ್ತಿತ್ವ ಅವರದ್ದಾಗಿತ್ತು ಎಂದು ಸ್ಮರಿಸಿದರು.ಸಮ ಸಮಾಜವನ್ನು ಕಟ್ಟುವ, ಅನ್ಯಾಯ ಅಸಮಾನತೆಗಳ ಎದುರಿನಲ್ಲಿ ಹೋರಾಡುವ ಜೊತೆಯಲ್ಲಿ ಅವರ ಕೊಡುಗೆಗಳನ್ನು ಸ್ಮರಿಸುತ್ತಾ ಅವರ ಆಶಯಗಳನ್ನ ಸಾಧಿಸಲು ಮುಂದಾಗುವುದೇ ಈ ಗಣ್ಯರಿಗೆ ಅರ​‍್ಿಸುವ ನೈಜ ಶ್ರದ್ದಾಂಜಲಿಯಾಗಿದೆ ಎಂದರು. 

ಕಾರ್ಯಕ್ರಮದ ಆರಂಭದಲ್ಲಿ ಅಗಲಿದ ಮೂವರು ಗಣ್ಯರ ಭಾವಚಿತ್ರಗಳಿಗೆ ಪುಷ​‍್ಾರೆ್ಪಣಗೈದು ಎರಡು ನಿಮಿಷಗಳ ಗೌರವ ಶ್ರದ್ಧಾಂಜಲಿಗಳನ್ನು ಸಲ್ಲಿಸಲಾಯಿತು. 

       ಕಾರ್ಯಕ್ರಮದಲ್ಲಿ ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯರಾದ ಉಡಚಪ್ಪ ಮಾಳಗಿ,ಅಲೆಮಾರಿ-ಅರೆ ಅಲೆಮಾರಿ ಸಮುದಾಯ ಸಂಘಟನೆಯ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ. ಬಿಎಸ್‌ಪಿ ಮುಖಂಡರಾದ ಎಂ.ಕೆ ಮಖಬೂಲ್,ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಮುಖಂಡ ಶಿವಬಸಪ್ಪ ಗೋವಿ, ರೈತ ಸಂಘಟನೆಯ ಶಹರ ಅಧ್ಯಕ್ಷ ಸುರೇಶ ಛಲವಾದಿ, ಮಹಿಳಾ ಸಾಂತ್ವನ ಕೇಂದ್ರದ ಮುಖ್ಯಸ್ಥರಾದ ಪರಿಮಳ ಜೈನ, ಯುವ ಸಾಹಿತಿಗಳಾದ ರಾಜಶೇಖರ ಮಾಳವಾಡ, ಕೆಎಸ್‌.ಡಿಸಿಎಫ್ ಜಿಲ್ಲಾ ಮುಖಂಡರಾದ ಖಲಂದರ್ ಅಲ್ಲಿಗೌಡ್ರ, ಎಸ್‌ಎಫ್‌ಐ-ಡಿವೈಎಫ್‌ಐ ಮುಖಂಡರಾದ ಗೌತಮ ಸಾವಕ್ಕನವರ, ಮಹೇಶ ಮರೋಳ, ಬಸನಗೌಡ ಭರಮಗೌಡ್ರ, ವಿಠ್ಠಲ ಗೌಳಿ,ರೇಣುಕಾ ಕಹಾರ,ಧನುಷ್ ದೊಡ್ಮನಿ, ಅನ್ವಿಕಾ ಆರ್‌.ಬಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಎಸ್‌ಎಫ್‌ಐ ಜಿಲ್ಲಾಧ್ಯಕ್ಷರಾದ ಬಸವರಾಜ ಎಸ್ ನಿರೂಪಿಸಿ,ವಂದಿಸಿದರು.