ಪಾಟೀಲ ಜನ್ಮ ದಿನದ ಅಂಗವಾಗಿ ಶ್ರೀಮಂತ ಪಾಟೀಲ ಫೌಂಡೇಶನ್ ಸಹಯೋಗದಲ್ಲಿ ನಡೆದ ಮಹಾ ಆರೋಗ್ಯ ಶಿಬಿರ
ಕಾಗವಾಡ 1 : ಮಾಜಿ ಸಚಿವ ಶ್ರೀಮಂತ ಪಾಟೀಲ ಜನ್ಮ ದಿನದ ಅಂಗವಾಗಿ ಶ್ರೀಮಂತ ಪಾಟೀಲ ಫೌಂಡೇಶನ್ ಸಹಯೋಗದಲ್ಲಿ ನಡೆದ ಮಹಾ ಆರೋಗ್ಯ ಶಿಬಿರ ದಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಫಲಾನುಭವಿಗಳು ಲಾಭ ಪಡೆದುಕೊಂಡಿದ್ದಾರೆಂದು ಶ್ರೀಮಂತ ಪಾಟೀಲ ಫೌಂಡೇಶನ್ ಸಂಘಟಕ ಸಚೀನ ದೇಸಾಯಿ ಮತ್ತು ಅಬ್ದುಲ ಗಡ್ಡೇಕರ ತಿಳಿಸಿದ್ದಾರೆ. ಶನಿವಾರ ದಿ. 01 ರಂದು ಎರಡು ದಿನಗಳ ಮಹಾ ಆರೋಗ್ಯ ಮೇಳದ ಮುಕ್ತಾಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಕಣ್ಣು ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡ ತಪಾಸಣೆ ಮಾಡಿಕೊಂಡ 500 ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಚಸ್ಮಾ ವಿತರಿಸಲಾಗಿದೆ. ಇನ್ನೂಳಿದ 400 ಕ್ಕೂ ಹೆಚ್ಚು ಜನರಿಗೆ ಶಸ್ತ್ರ ಚಿಕಿತ್ಸೆಗಾಗಿ ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿಸಿದರು. ಸಂಜಯ ಕುಮಾರ ಕಾಯಪುರೆ ಮಾತನಾಡಿ, ಸಾಂಗಲಿಯ ಉಷಾಕಾಲ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರದಲ್ಲಿ 2000 ಕ್ಕೂ ಹೆಚ್ಚು ಜನ ಪಾಲ್ಗೊಂಡು, ಲಾಭ ಪಡೆದುಕೊಂಡರು. ಈ ಪೈಕಿ 700 ಕ್ಕೂ ಹೆಚ್ಚು ಹೃದಯ ಸಂಬಂಧಿತ ಇಸಿಜಿ, ಎಂಜೋಗ್ರಾಫಿ, ಎಂಜೋಪ್ಲಾಸ್ಟಿ, ಬೈಪಾಸ್ ಸರ್ಜರಿ ಸೇರಿದಂತೆ, ಚಿಕ್ಕಮಕ್ಕಳ ಉಚಿತ ಶಸ್ತ್ರ ಚಿಕಿತ್ಸೆಗಾಗಿ ಶಿಫಾರಸ್ಸು ಮಾಡಲಾಗಿದೆ ಎಂದು ಹೇಳಿದರು. ರಕ್ತ ದಾನ ಶಿಬಿರದಲ್ಲಿ 500 ಕ್ಮೂ ಹೆಚ್ಚು ಜನ ಜೊತೆಗೆ 5 ಸಕ್ಕರೆ ಕಾರ್ಖಾನೆಗಳಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತವಾಗಿ ರಕ್ತ ದಾನ ಶಿಬಿರದಲ್ಲಿ ಸುಮಾರು 1200 ಜನ ಸ್ವಯಂ ಪ್ರೇರಣೆ ರಕ್ತ ದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು. ಶ್ರೀಮಂತ ಪಾಟೀಲ ಫೌಂಡೇಶನ್ ಅಧ್ಯಕ್ಷ ಶ್ರೀನಿವಾಸ ಪಾಟೀಲ ಮಾರ್ಗದರ್ಶನದಲ್ಲಿ ಆಯೋಜಿಸಿದ್ದ ಮಹಾ ಆರೋಗ್ಯ ಶಿಬಿರವನ್ನು ಆರ್.ಎ. ಲಟಕೆ, ಸೂರಜ ಪಾಟೀಲ, ಚಂದ್ರಕಾಂತ ಚೌಗಲೆ, ಬಾಪು ಪಾಟೀಲ, ರಮೇಶ ಘೋಡಸೆ, ನಾರಾಯಣ ಕಾಳೇಲಿ, ನಾಗೇಶ ಹಿಂಗಮಿರೆ, ವಿನಾಯಕ ಶಿಂಧೆ, ರಾಜು ಮಾನೆ, ರಾಜು ಡೊಳ್ಳಿ, ಶೇಖರ ಕಿಣ್ಣಂಗೆ, ಅಭಿಜಿತ ಕಿತ್ತೂರೆ, ಕೃಷ್ಣಾ ಪಾಟೀಲ. ಸೇರಿದಂತೆ ಅನೇಕರು ಶಿಬಿರದ ಯಶಸ್ವಿಗೆ ಸಹಕಾರ ನೀಡಿದ್ದಾರೆಂದು ತಿಳಿಸಿದರು.