ಅದ್ದೂರಿ ರಂಗೋತ್ಸವ
ಮಹಾಲಿಂಗಪುರ 15: ಹೋಳಿ ಹಬ್ಬದ ಪ್ರಯುಕ್ತ ಸ್ಥಳೀಯ ನಡುಚೌಕಿಯಲ್ಲಿ ಮುಖಂಡ ಶಿವಾನಂದ ಅಂಗಡಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಅದ್ದೂರಿ ರಂಗೋತ್ಸವಕ್ಕೆ ಪುರಸಭಾ ಅಧ್ಯಕ್ಷ ಯಲ್ಲನಗೌಡ ಪಾಟೀಲ ಚಾಲನೆ ನೀಡಿದರು. ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಯುವಕರು ಸ್ಥಳೀಯ ಯುವಕರೊಂದಿಗೆ ಸೇರಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಡಿಜೆ ಸೌಂಡ್‌ಗೆ ಜ್ಜೆ ಹಾಕಿ ಕುಣಿದು ಕುಪ್ಪಳಿಸುತ್ತಾ ಹೊಸ ಲೋಕವನ್ನೇ ಸೃಷ್ಟಿಸಿದರು. ಭಾಜಪ ನಗರ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ, ಮುತ್ತಪ್ಪ ದಲಾಲ, ಪುಂಡಲೀಕ ಗಡೇಕರ, ಮಹಾಲಿಂಗ ಮಾಳಿ, ಹನಮಂತ ಯರಗಟ್ಟಿ, ಬಸವರಾಜ ಮಡಿವಾಳರ ಸೇರಿದಂತೆ ಹಲವರಿದ್ದರು.