ಲೋಕದರ್ಶನ ವರದಿ
ಶಿಗ್ಗಾವಿ22 : ಪ್ರವಾದಿ ಮಹಮ್ಮದರ ಜನ್ಮ ದಿನದ ಸಂತೋಷಕ್ಕಾಗಿ ಆಯೋಜಿಸಲಾಗುವ ಈದ್ ಮಿಲಾದ್ ಹಬ್ಬವನ್ನು ಶಿಗ್ಗಾವಿ ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳ ಸಾನಿದ್ಯದಲ್ಲಿ ಕೇಕ್ ಕತ್ತರಿಸುವ ಮೂಲಕ ಅದ್ಧೂರಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಬುಧವಾರ ಪಟ್ಟಣದ ಸಂತೆ ಮೈದಾನದಿಂದ ಆರಂಭವಾದ ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯದ ಮತ್ತು ಹಿಂದೂ ಸಮುದಾಯದ ಜನರು ಸಹಿತ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಸೌಹಾರ್ಧತೆಯನ್ನು ಮೆರೆದರು.
ಇದೇ ಸಂದರ್ಭದಲ್ಲಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಸಾವಿರಾರು ಜನರು ಭಾಗವಹಿಸಿ ಸಿಹಿ ಮತ್ತು ಹಣ್ಣುಗಳನ್ನು ಹಂಚುವ ಮೂಲಕ ಹಬ್ಬವನ್ನು ಆಚರಿಸಿದರು.
ಮೆರವಣಿಗೆಯಲ್ಲಿ ಮಾಜಿ ಶಾಸಕ ಸಯ್ಯದ್ ಅಜ್ಜಂಪೀರ್ ಎಸ್ ಖಾದ್ರಿ, ತಹಶೀಲ್ದಾರ ಶಿವಾನಂದ ರಾಣೆ, ಅಂಜುಮನ್ ಅದ್ಯಕ್ಷ ಮಜೀದ್ ಮಾಳಗೀಮನಿ,ಶ್ರೀಕಾಂತ ಪೂಜಾರ, ಪ್ರಮುಖ ಮುಖಂಡರಾದ ಸಾದಿಕ್ ಮಲ್ಲೂರ, ಕರಿಂಖಾನ್ ಮೊಗಲಲ್ಲಿ, ಗೌಸ್ಖಾನ್ ಮುನಶಿ, ಪ್ರಕಾಶ ಹಾದಿಮನಿ, ಹನುಮರೆಡ್ಡಿ ನಡುವಿನಮನಿ, ಮುನ್ನಾ ಬಿಸ್ತಿ, ಮಂಜುನಾಥ ತಿಮ್ಮಾಪೂರ, ಅಬ್ದುಲ್ ಸತ್ತಾರ ವದರ್ಿ ಸೇರಿದಂತೆ ಮುಖಂಡರು, ವಿದ್ಯಾಥರ್ಿಗಳು ಭಾಗವಹಿಸಿದ್ದರು.