ಶಿರಹಟ್ಟಿಯಲ್ಲಿ ಮತ್ತಷ್ಟು ಬಿಗಿಗೊಳಿಸಿದ ಲಾಕ್ಡೌನ್

ಲೋಕದರ್ಶನ ವರದಿ

ಶಿರಹಟ್ಟಿ 11: ಕೊರೊನಾ ಸೋಂಕನ್ನು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಮಾರುಕಟ್ಟೆಗೆ ಪ್ರವೇಶ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಬ್ಯಾರಿಕೇಡಗಳ ಮೂಲಕ ಬಂದ ಮಾಡಲಾಗಿದೆ. 

ಮುಂಜಾಗ್ರತ ಕ್ರಮವಾಗಿ ಪಟ್ಟಣದ ನೆಹರೂ ವೃತ್ತ, ಬೆಳ್ಳಟ್ಟಿ ರಸ್ತೆ, ಬಸವೇಶ್ವರ ವೃತ್ತಗಳಲ್ಲಿ ಜನ ಅನಗತ್ಯವಾಗಿ ಓಡಾಡುವುದನ್ನು ತಡೆಯುವ ನಿಟ್ಟಿನಲ್ಲಿ ಪೋಲಿಸ್ ಬಸ್, ಬ್ಯಾರಿಕೇಡ ಮತ್ತು ಹಗ್ಗಗಳ ಮೂಲಕ ಮುಚ್ಚಲಾಗಿದೆ. 

ಪಟ್ಟಣದ ಪ್ರಮುಖ ಜನ ನಿಬಿಡ ಪ್ರದೇಶಗಳಲ್ಲಿ ಬ್ಯಾರಿಕೇಡ ಹಾಕಲಾಗಿದೆ. ಯಾವುದೇ ರೀತಿಯ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲ, ಗಾಂಧಿ ವೃತ್ತದಲ್ಲಿರುವ ಮಾರುಕಟ್ಟೆಯಲ್ಲಿರುವ ಎಲ್ಲಾ ದಿನಸಿ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ ಮಾಡಲಾಗಿತ್ತು. ಮಾರುಕಟ್ಟೆಗೆ ಪ್ರವೇಶ ನೀಡುವ ಎಲ್ಲಾ ರಸ್ತೆಗಳನ್ನು ಬ್ಯಾರಿಕೇಡ ಮತ್ತು ಹಗ್ಗಗಳ ಮೂಲಕ ವಾಹನ ಸಂಚಾರವನ್ನು ನಿಷೇಧಿಸುವ ಸಲುವಾಗಿ ಬಂದ ಮಾಡಲಾಗಿದೆ.