ತಾಲೂಕಿನಾದ್ಯಂತ ಸಂಭ್ರಮದ ಬಣ್ಣದ ಓಕಳಿ

A festive color of Okali across the taluk

ತಾಲೂಕಿನಾದ್ಯಂತ ಸಂಭ್ರಮದ ಬಣ್ಣದ ಓಕಳಿ 

ದೇವರಹಿಪ್ಪರಗಿ 15: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರದಂದು ಸಾರ್ವಜನಿಕರು ಹೋಳಿ ಆಡಿ ಸಂಭ್ರಮಿಸಿದರು. ಚಿಣ್ಣರು ಹಲಗೆ ಬಾರಿಸುತ್ತ ಬಣ್ಣ ಎರಚಿ ಸಂಭ್ರಮಿಸಿದರೆ, ಯುವಕರು ಗ್ರಾಮದ ಹಾಗೂ ಪಟ್ಟಣದ ಓಣೆ ತುಂಬಾ ಸಂಚರಿಸಿ ಪರಿಚಯದವರಿಗೆ ಬಣ್ಣ ಎರಚಿ ಖುಷಿಪಟ್ಟರು. ತಾಲೂಕಿನ ದೇವರಹಿಪ್ಪರಗಿ, ಯಾಳವಾರ, ಹುಣಶ್ಯಾಳ, ಆಲಗೂರ, ಕೋರವಾರ, ತಿಳಗೂಳ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ರಂಗಿನ ಹಬ್ಬ ಜೋರಾಗಿತ್ತು. ಹಲವು ಗ್ರಾಮಗಳಲ್ಲಿ ಹಿಂದೂ-ಮುಸ್ಲಿಂ ಯುವಕರು ಪರಸ್ಪರ ಬಣ್ಣ ಎರಚಿ ಸೌಹಾರ್ದತೆ ಮೆರೆದರು. ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಗುರುವಾರ ರಾತ್ರಿ ಕಾಮದಹನ ನಡೆಸಿದ ನಂತರ ಶುಕ್ರವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮಕ್ಕಳು ಮಹಿಳೆಯರು ಒಬ್ಬರಿಗೊಬ್ಬರು ಬಣ್ಣ ಹಚ್ಚುವ ಮೂಲಕ ಶುಭಾಷಯ ವಿನಿಮಯ ಮಾಡಿಕೊಂಡರು.