ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಕಮದೋಡ ಗ್ರಾಮದಲ್ಲಿ ಆಯೋಜಿಸಿದ್ದ ಹಿಂದೂರಾಷ್ಟ್ರ ಜಾಗೃತಿ ಸಭೆ
ರಾಣೆಬೆನ್ನೂರು 25: ಸನಾತನ ಧರ್ಮದ ಸಿದ್ಧಾಂತ ಕೇವಲ ಹಿಂದುಗಳಿಗಾಗಿ, ಭಾರತಕ್ಕಾಗಿ ಮಾತ್ರವಲ್ಲ, ಸಂಪೂರ್ಣ ವಿಶ್ವಕ್ಕಾಗಿ ಉಪಯುಕ್ತವಾಗಿದೆ. ’ವಸುದೈವ ಕುಟುಂಬಕಮ್ ’ ಇದು ಹಿಂದೂ ಸಂಸ್ಕೃತಿಯ ಧಾರಣೆಯಾಗಿದೆ ಹೀಗಿರುವಾಗ ಸನಾತನ ಧರ್ಮವನ್ನು ನಾಶಗೊಳಿಸಲು ’ಲ್ಯಾಂಡ್ ಜಿಹಾದ್ ’ ,ಲವ್ ಜಿಹಾದ್ ಹಾಗೂ ಇತರ ಜಿಹಾದಗಳ ಮೂಲಕ ಹಿಂದೂಗಳನ್ನು ನಾಶಮಾಡುವ ಷಡ್ಯಂತ್ರ ನಡೆಯುತ್ತಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ರಾಜು ಧರೆಯಣ್ಣನವರ ಹೇಳಿದರು.
ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಪಟ್ಟಣದ ಶ್ರೀ ಮಾರುತಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಹಿಂದೂರಾಷ್ಟ್ರ ಜಾಗೃತಿ ಸಭೆಯಲ್ಲಿ ಇವರು ಮಾತನಾಡುತ್ತಿದ್ದರು. ಯಾವಾಗ ಯಾವಾಗ ಧರ್ಮದ ಮೇಲೆ ಆಘಾತಗಳು ಆಗುತ್ತವೆಯೋ ಆಗ ಭಗವಂತನು ಭೂಮಿಯ ಮೇಲೆ ಅವತಾರ ತಾಳಿ ಅಧರ್ಮವನ್ನು ನಾಶ ಮಾಡಿ ಧರ್ಮವನ್ನು ಮರು ಸ್ಥಾಪಿಸುತ್ತಾರೆ.
ದ್ವಾಪರಯುಗದಲ್ಲಿ ಕಂಸ ಎಂಬ ರಾಕ್ಷಸನನ್ನು ವಧೆ ಮಾಡಲು ಶ್ರೀಕೃಷ್ಣ ಜನ್ಮ ತಾಳಿದರು, ತೇತ್ರಾಯುಗದಲ್ಲಿ ರಾವಣನ್ನು ವಧೆ ಮಾಡಲು ಶ್ರೀ ರಾಮರು ಜನ್ಮ ತಾಳಿದರು ಅದೇ ರೀತಿ ಕಲಿಯುಗದಲ್ಲಿ ಅಧರ್ಮವನ್ನು ನಾಶ ಮಾಡಿ ಧರ್ಮವನ್ನು ಸ್ಥಾಪಿಸಲು ಭಗವಂತ ಬಂದೆ ಬರುತ್ತಾರೆ, ನಾವು ಧರ್ಮಶಿಕ್ಷಣವನ್ನು ಪಡೆದು ಧರ್ಮಯೋಧರಾಗೋಣ,ಹಿಂದೂರಾಷ್ಟ್ರ ಸ್ಥಾಪನೆಯಾಗುವ ತನಕ ಹೋರಾಡೋಣ,
2-3 ತಲೆಮಾರಿನಿಂದ ನಮಗೆ ಧರ್ಮ ಶಿಕ್ಷಣ ಸಿಕ್ಕಿಲ್ಲ ಇದರಿಂದಾಗಿಯೇ ಇವತ್ತು ಹಿಂದೂ ಧರ್ಮವು ಈ ಸ್ಥಿತಿಗೆ ಬಂದಿದೆ, ಎಲ್ಲರೂ ಧರ್ಮಶಿಕ್ಷಣ ಪಡೆದು ಧರ್ಮಾಚರಣೆ ಮಾಡೋಣ ಮತ್ತು ಹಿಂದೂ ಧರ್ಮವನ್ನು ರಕ್ಷಿಸೋಣ ಎಂದು ಹೇಳಿದರು. ಕೊನೆಯಲ್ಲಿ ಎಲ್ಲರೂ ಸೇರಿ ಹಿಂದೂರಾಷ್ಟ್ರ ಸ್ಥಾಪಿಸುವ ಪ್ರತಿಜ್ಞೆ ಮಾಡಿದರು, ಸುಮಾರು 100ಕ್ಕಿಂತ ಹೆಚ್ಚು ಹಿಂದೂ ಬಾಂದವರು ಉಪಸ್ಥಿತರಿದ್ದರು.