ಮಹಾಸ್ವಾಮಿಗಳವರ 9ನೇ ಸ್ಮರಣೋತ್ಸವ
ಹಾವೇರಿ 10: ಸುಕ್ಷೇತ್ರ ನರಸೀಪುರದಲ್ಲಿ ಅಂಬಿಗರ 7ನೇ ಶರಣ ಸಂಸ್ಕೃತಿ ಉತ್ಸವ-2025 ಹಾಗೂ ವಚನ ಗ್ರಂಥ ಮಹಾರಥೋತ್ಸವ ಜ,14 ಮತ್ತು 15 ರಂದು ಜರುಗಲಿದೆ ಎಂದು ಶ್ರೀ ನಿಜಗುಣ ಅಂಬಿಗರ ಚೌಡಯ್ಯನವರ ಗುರುಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಪೂಜ್ಯ ಶ್ರೀ ಶಾಂತಭೀಷ್ಮಚೌಡಯ್ಯ ಮಹಾಸ್ವಾಮಿಗಳು ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಜಾತ್ರಾ ಮಹೋತ್ಸವದ ಪೋಸ್ಟರಗಳನ್ನು ಬಿಡುಗಡೆಗೊಳಿಸಿ,ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ದಿ,14 ರಂದು ಬೆಳಿಗ್ಗೆ 6ಘಂಟೆಗೆ ನಿಜಗುಣ ಅಂಬಿಗರ ಚೌಡಯ್ಯನವರ ತೊಟ್ಟಿಲೋತ್ಸವ ಕಾರ್ಯಕ್ರಮ.8 ಘಂಟೆಗೆ ಅಂಬಿಗರ ಚೌಡಯ್ಯನವರ ಐಕ್ಯಮಂಟಪ ಪೂಜೆ.10 ಘಂಟೆಗೆ ಸಾಮೂಹಿಕ ರಕ್ತದಾನ ಶಿಬಿರ.11 ಘಂಟೆಗೆ ಸಾಮೂಹಿಕ ಸರಳ ವಿವಾಹ ಮಹೋತ್ಸವ ಮತ್ತು ಲಿಂ,ಪೂಜ್ಯ ಸದ್ಗುರು ಶಾಂತಮುನಿ ಮಹಾಸ್ವಾಮಿಗಳವರ 9ನೇ ಸ್ಮರಣೋತ್ಸವ.ಮಧ್ಯಾಹ್ನ 1-30 ಘಂಟೆಗೆ ರಾಜ್ಯ ಮಟ್ಟದ ವಚನ ಕಂಠಪಾಠ ಸ್ಪರ್ಧೆ.ಸಂಜೆ 7 ಘಂಟೆಗೆ ್ರ್ರಥಮ ಐತಿಹಾಸಿಕ ಗಂಗಾರತಿ ಕಾರ್ಯಕ್ರಮ. ರಾತ್ರಿ 8 ಘಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ.ನಿಜಗುಣ ಅಂಬಿಗರ ಚೌಡಯ್ಯನವರ ಜೀವನಾಧಾರಿತ ದೃಶ್ಯಾವಳಿ ಪ್ರದರ್ಶನ ಜರುಗುವುದು.
ದಿ,15 ರಂದು ಬೆಳಿಗ್ಗೆ 8ಘಂಟೆಗೆ ಧರ್ಮ ಧ್ವಜಾರೋಹಣ.9-30 ಘಂಟೆಗೆ ಧರ್ಮಸಭೆ.11 ಘಂಟೆಗೆ ಶ್ರೀ ನಿಜಗುಣ ಅಂಬಿಗರ ಚೌಡಯ್ಯನವರ 905 ನೇ ಜಯಂತೋತ್ಸವ.ಮಧ್ಯಾಹ್ನ 12 ಘಂಟೆಗೆ ಜಗದ್ಗುರು ಪೂಜ್ಯಶ್ರೀ ಶಾಂತಭೀಷ್ಮಚೌಡಯ್ಯ ಮಹಾಸ್ವಾಮಿಗಳವರ 9ನೇ ಪೀಠಾರೋಹಣ ವಾರ್ಷಿಕ ಮಹೋತ್ಸವ.ಸಂಜೆ 5ಘಂಟೆಗೆ ವಚನ ಗ್ರಂಥ ಮಹಾ ರಥೋತ್ಸವ ಸೇರಿದಂತೆ ಇನ್ನೂ ಅನೇಕ ಕಾರ್ಯಕ್ರಮಗಳು ಜರುಗಲಿದ್ದು,ರಾಜ್ಯದ ವಿವಿಧ ಮಠಗಳ ಮಹಾಸ್ವಾಮಿಗಳು,ರಾಜ್ಯ ಸರ್ಕಾರದ ಜನಪ್ರತಿನಿಧಿಗಳು,ಜಿಲ್ಲೆಯ ಜನಪ್ರತಿನಿಧಿಗಳು,ಸಮಾಜದ ಮುಖಂಡರು,ಗಣ್ಯರು ಸೇರಿದಂತೆ ರಾಜ್ಯ ಹಾಗೂ ಹೊರರಾಜ್ಯಗಳ ಸಮಾಜದ ಮುಖಂಡರು ಭಕ್ತರು ಆಗಮಿಸಲಿದ್ದು,ಈ ಕಾರ್ಯಕ್ರಮದ ಯಶಸ್ವಿಗೊಳಿಸಲು ಎಲ್ಲರ ಸಹಕಾರ ನೀಡಲು ಶ್ರೀಗಳು ಕೋರಿದರು.ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಮಂಜುನಾಥ ಗುಡಿಮನಿ, ಎಸ್ ಎನ್ ಮೇಡ್ಲೇರಿ,ಶಂಕರ ಸುತಾರ,ನಾಗಪ್ಪ ಶೇಷಗಿರಿ,ಶಂಕ್ರಣ್ಣ ಬಾರ್ಕಿ,ಮಂಜುನಾಥ,ನಿಂಗಪ್ಪ ಯಂಕಣ್ಣನವರ,ಕರಬಸಪ್ಪ ಹಳದೂರ ಸೇರಿದಂತೆ ಅನೇಕರಿದ್ದರು.