8 ಜನ ಬಳ್ಳಾರಿ ಜೈಲಿನಿಂದ ಬಿಡುಗಡೆ
ಬಳ್ಳಾರಿ 18: ರಂದು ಅವರ ಶಿಕ್ಷೆಯ ಅವಧಿಯಲ್ಲಿನ ಸನ್ನಡತೆ ಆಧರಿಸಿ 8 ಜನ ಕೈದಿಗಳನ್ನು ಇಲ್ಲಿನ ಕೇಂದ್ರ ಕಾರಾಗೃಹದಿಂದ ನಿನ್ನೆ ಬಿಡುಗಡೆ ಮಾಡಲಾಗಿದೆ. ಬಳ್ಳಾರಿ ಜಿಲ್ಲೆಯ 6 ಕೈದಿಗಳು, ಶಿವಮೊಗ್ಗ, ವಿಜಯಪುರ ಜಿಲ್ಲೆಯ ತಲಾ ಒಬ್ಬರು ಇದರಲ್ಲಿರುವ ದ್ದಾರೆ.ಜೀವಾವಧಿ ಶಿಕ್ಷೆಗೆ ಒಳಗಾಗಿ 17ವರ್ಷ 2ತಿಂಗಳು ಶಿಕ್ಷೆ ಅನುಭವಿಸಿದ್ದ ವಿಜಯಪುರ ಜಿಲ್ಲೆಯ ಮನೇನದಡ್ಡಿಸಿದ್ದಾಪುರ ಗ್ರಾಮದ ಈರ್ಪ, ಶಿವಮೊಗ್ಗ ಜಿಲ್ಲೆಯ ಅಂಜನಾಪುರ ಗ್ರಾಮದ ಪ್ರಶಾಂತ್ 14 ವರ್ಷ 3 ತಿಂಗಳು ಶಿಕ್ಷೆ ಅನುಭವಿಸಿದ್ದರು.ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ಎ.ಎಲ್ಲಪ್ಪ 15 ವರ್ಷ ಶಿಕ್ಷೆ ಪೂರ್ಣ ಗೊಳಿಸಿದ್ದರು. ಇದರ ಜೊತೆಗೆ 17 ವರ್ಷ ಶಿಕ್ಷೆ ಅನುಭವಿಸಿದ್ದ. ಬಳ್ಳಾರಿ ತಾಲೂಕಿನ ಕೆ.ಕೆ.ಹಾಳ್ ಗ್ರಾಮದ ಕಗ್ಗಲ್ ವೆಂಕಟೇಶ್, ಸೋಮಲಿಂಗಪ್ಪ, ಚಂದ್ರ, ಸುಂಕಣ್ಣ, ಈರಣ್ಣ ಬಿಡುಗಡೆಯಾಗಿದ್ದಾರೆ.ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಎಸ್ಪಿ ಡಾ.ಶೋಭಾರಾಣಿ ಹಾಗೂ ಜೈಲಿನ ಅಧೀಕ್ಷಕಿ ಲತಾ ಅವರು ಪ್ರಮಾಣ ಪತ್ರ ನೀಡಿ ಬೀಳ್ಕೊಟ್ಟರು.