ಅವಳಿ ನಗರದ 15 ನೇ ವಾರ್ಡಿನ ಬಸವೇಶ್ವರನಗರದಲ್ಲಿ 76 ನೇ ಗಣರಾಜ್ಯೋತ್ಸವ ಆಚರಣೆ

76th Republic Day celebration at Basaveshwar Nagar, Ward 15, Twin Cities

ಅವಳಿ ನಗರದ 15 ನೇ ವಾರ್ಡಿನ ಬಸವೇಶ್ವರನಗರದಲ್ಲಿ  76 ನೇ ಗಣರಾಜ್ಯೋತ್ಸವ ಆಚರಣೆ  

ಗದಗ 26 : ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ 15 ನೇ ವಾರ್ಡಿನಲ್ಲಿರುವ ಬಸವೇಶ್ವರ ನಗರ ಬಡಾವಣೆಯಲ್ಲಿ ನಾಗರಿಕರಿಂದ 76:ನೇ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ದ್ವಜಾರೋಹಣ ನೆರವೇರಿಸಿ ಮಾತನಾಡಿದ ಬಡಾವಣೆಯ ಮುಖಂಡರಾದ ಶ್ರೀ ಗುರುಲಿಂಗಪ್ಪ ಕಾಡಪನವರರವರು ದೇಶದ ಸಮಸ್ತ ನಾಗರಿಕರಿಗೆ ಸಂವಿಧಾನವನ್ನು ದೊರಕಿಸಿ ಕೊಟ್ಟ ಅವಿಸ್ಮರಣೀಯ ದಿನವಾದ ಇಂದಿನ ದಿನವನ್ನು ಪ್ರತಿಯೊಬ್ಬ ನಾಗರಿಕರಿಗೆ ಶುಭ ದಿನವಾಗಿರುತ್ತದೆ. ಈ ಸಂಧರ್ಭದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರರವರ ವಿರಚಿತ ಸಂವಿಧಾನವು ಪ್ರತಿಯೊಬ್ಬ ನಾಗರಿಕರು ಅದರ ಮಹತ್ವವನ್ನು ತಿಳಿಯುವುದು ಅವಶ್ಯಕವಾಗಿದೆ ಎಂದು ನುಡಿದರು. ಈ ಸಂಧರ್ಭದಲ್ಲಿ ಕಾಂಗ್ರೇಸ್ ಯುವ ಮುಖಂಡರಾದ ಮೋಹನ ದೊಡಕುಂಡಿ , ಬಿ ಡಿ ಕಿಲಬಣವರ್ , ಪಿ ಟಿ ನಾರಾಯಣಪುರ,,ರಾಜು ಬಳ್ಳಾರಿ,.ಅನವೀರ​‍್ಪ ದೊಡಕುಂಡಿ, ರಾಚೋಟಿ ಕಾಡಪ್ಪನವರ, ದರ್ಶನ ಬೆಳಗಲ , ಅಶೋಕ ಬಂಡೆಪ್ಪನವರ, ಸಿದ್ದಲಿಂಗಪ್ಪ ಬಂಡೆಪ್ಪನವರ, ಮಹಿಳಾಕಾರ್ಯಕರ್ತರೂ ಕಾವ್ಯ ಲಾಡ್, ವಿಜಯಲಕ್ಷ್ಮಿ ತಳವಾರ, ವಿದ್ಯಾ ಗುಂಡಗಟ್ಟಿ, ಶಾಂತಲಾ ಜಂಗಮಣಿ , ಮೀನಾಕ್ಷಿ ಬಡಿಗೇರ,ಗೀತಾ ಯೆಚ್ಚಲಗಾರ , ಶ್ವೇತಾ ಕುಬಸದ , ಲಕ್ಷ್ಮಿ ದೊಡಕುಂಡಿ, ರೇಖಾ ಜಂಗಮನಿ ಹಾಗೂ ಸಮಸ್ತ ಬಸವೇಶ್ವರ ನಗರದ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.