76ನೇ ಗಣರಾಜ್ಯೋತ್ಸವ ದ್ವಜಾರೋಹಣ ನೆರವೇರಿಸಿದ ಸಚಿವ ಎಚ್.ಕೆ.ಪಾಟೀಲ
ಗದಗ 26: ಭಾರತೀ0ು ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜ್ಯಾತ್ಯಾತೀತ, ಪ್ರಜಾಸತ್ತಾತ್ಮಕ ಗಣತಂತ್ರವನ್ನಾಗಿ ವಿಧಿ0ುುಕ್ತವಾಗಿ ಸ್ಥಾಪಿಸಿದ್ದೇವೆ. ಸಾಮಾಜಿಕ ನ್ಯಾ0ುವನ್ನು ರಾಷ್ಟ್ರದ ಎಲ್ಲಾ ಪ್ರಜೆಗಳಿಗೆ ಒದಗಿಸುವ ಸಂವಿಧಾನ ನಮ್ಮದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ ಅವರು ಹೇಳಿದರು.
ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ರವಿವಾರದಂದು ಜರುಗಿದ ಗಣರಾಜ್ಯೋತ್ಸ ದಿನಾಚರಣೆ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ನಮ್ಮ ದೇಶ ಪ್ರಪಂಚದಲ್ಲಿಯೇ ಅತಿದೊಡ್ಡ ಪ್ರಜಾಸತ್ತಾತ್ಮಕವಾದ ಆಡಳಿತವನ್ನು ಹೊಂದಿದ ಗಣರಾಜ್ಯ ಜನರಿಂದ-ಜನರಿಗಾಗಿ ಆಡಳಿತ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಧ್ಯೇಯ ಮಂತ್ರ. ಈ ಧ್ಯೇಯ ಮಂತ್ರವನ್ನು ಸಾಕಾರಗೊಳಿಸಲು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ನೇತೃತ್ವದಲ್ಲಿ ರಚಿಸಲ್ಪಟ್ಟ ಸಂವಿಧಾನವನ್ನು 1950ರ ಜನವರಿ 26 ರಂದು ಅಂಗೀಕರಿಸಿ ನಮ್ಮ ದೇಶವನ್ನು ಸರ್ವತಂತ್ರ ಸ್ವತಂತ್ರ, ಸಾರ್ವಭೌಮ ಗಣರಾಜ್ಯವೆಂದು ಘೋಷಣೆ ಮಾಡಲಾಯಿತು ಎಂದರು.
ಇಂದು ನಾವು ಆಚರಿಸುತ್ತಿರುವ ಗಣರಾಜ್ಯೋತ್ಸವ ಅತ್ಯಂತ ವೈಶಿಷ್ಟ-್ಯ ಪೂರ್ಣವಾದುದಾಗಿದೆ. ನೂರು ವಸಂತಗಳ ಹಿಂದೆ 1924ರಲ್ಲಿ ನಮ್ಮ ಬೆಳಗಾವಿ0ುಲ್ಲಿ ನಡೆದ ಎ.ಐ.ಸಿ.ಸಿ. ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ0ುವರ ಸ್ಮರಣೆ0ುಲ್ಲಿ "ಗಾಂಧಿ ಭಾರತ ಶತಮಾನೋತ್ಸವವನ್ನು ವರ್ಷಪೂರ್ಣ ಆಚರಿಸುತ್ತಿದ್ದೇವೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಶತಮಾನದ ಶ್ರೇಷ್ಠ ಉತ್ತಮ ಮಾನವ, ಅಂತರಾಷ್ಟ್ರೀ0ು ಭಾವೈಕೈ0ು ಸಂಕೇತ. ಅವರು ಅಹಿಂಸೆ0ು ಬೆಳಕು, ಸತ್ಯದ ಥಳಕು, ಸಮಾನತೆ ಬಿತ್ತಿದ ಚೇತನ, ಗಾಂಧೀಜಿ 0ುುಗ ಪುರುಷ, ಗಾಂಧೀಜಿ ಚರ್ಚಿಸುವ ವಿಷ0ುವಲ್ಲ ಹೃದ0ುದಲ್ಲಿಟ್ಟು ಧ್ಯಾನಿಸುವ ಜೀವ. ಗಾಂಧೀಜಿ ಭಾರತಕ್ಕೆ ಆತ್ಮವಾದರೆ ವಿಶ್ವಕ್ಕೆ ಮಹಾತ್ಮರಾಗಿದ್ದಾರೆ. ಅವರನ್ನು ಸ್ಮರಿಸಿ, ನಮಿಸಿ, ಅವರ ಸನ್ಮಾರ್ಗದಲ್ಲಿ ಪಥಿಕರಾಗಲು ಇಂದು ಪಣತೊಡುವ ಪರ್ವಕಾಲವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ನಾಡು ಕಂಡ ಬಲು ಅಪರೂಪದ ರಾಜಕಾರಣಿ, ನಾಡು ಮೆಚ್ಚಿದ ಜನನಾ0ುಕ, ಸಹಕಾರ ರಂಗದ ಭೀಷ್ಮ ದಿ. ಕೆ. ಎಚ್. ಪಾಟೀಲರ ಜನ್ಮ ಶತಮಾನೋತ್ಸವ ವರ್ಷಾಚರಣೆ ನಡೆ0ುುತ್ತಿರುವ ಪುಣ್ಯ ಪ್ರಸಂಗದಲ್ಲಿ ನಾವು ಶೋಷಣೆಮುಕ್ತ, ಸಮಾನತೆ0ು ಸಮಾಜ ಕಟ್ಟುವಲ್ಲಿ ಕ್ರೀ0ಾಶೀಲ ಪೂರ್ವಕ ತೊಡಗಿಸಿಕೊಳ್ಳಲು ಸಮರ್ಿತರಾಗಲು ದಾಪುಗಾಲುಗಳನ್ನೀಡೋಣ ಎಂದು ಕರೆ ನೀಡಿದರು.
ಗದುಗಿನಲ್ಲಿ ಹೆಮ್ಮೆಯಿಂದ ತಲೆ0ೆುತ್ತಿರುವ ವಿಶೇಷ ಬೆಳವಣಿಗೆಯಿಂದ ಎಲ್ಲರ ಆಕರ್ಷಣೆ0ಾಗಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾ0ುತ ರಾಜ್ ವಿಶ್ವವಿದ್ಯಾಲ0ುಕ್ಕೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ0ುವರ ನಾಮಕರಣವಾದ ಸಂತಸದ ಪ್ರಸಂಗದಲ್ಲಿ ನಾವು ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ ಅವರನ್ನು ನಮಿಸೋಣ. ಪ್ರಪಂಚದ ಶ್ರೇಷ್ಠ ಸಂವಿಧಾನ ರಚಿಸಿದ ಕೀರ್ತಿಗೆ ಭಾಜನರಾಗಿರುವ ಡಾ. ಅಂಬೇಡ್ಕರ ಜೊತೆಗೆ ಸಂವಿಧಾನ ರಚನಾ ಸಮಿತಿ0ು ಅಧ್ಯಕ್ಷರಾಗಿದ್ದ ಡಾ.ಬಾಬು ರಾಜೇಂದ್ರ ಪ್ರಸಾದ, ಪಂಡಿತ ಜವಾಹರಲಾಲ ನೆಹರು, ಸರ್ದಾರ ವಲ್ಲಭಬಾಯಿ ಪಟೇಲ ಸೇರಿ 300ಕ್ಕೂ ಅಧಿಕ ಪ್ರತಿಭಾವಂತ ಪಂಡಿತರನ್ನು ಅವರ ಅವಿರತ ಶ್ರಮಕ್ಕೆ ಭೌದ್ಧಿಕ ಕೊಡುಗೆಗೆ ಅವರ ತಪಸ್ವಿ ಸ್ವಭಾವಕ್ಕೆ ಮಣಿದು ಸ್ಮರಿಸಿ ನಮ್ಮ ಸಂವಿಧಾನವನ್ನು ಎತ್ತಿ ಹಿಡಿ0ುಲು ಕಂಕಣ ಬದ್ಧರಾಗೋಣ ಎಂದರು.
ಕಲೆ, ಸಾಹಿತ್ಯ, ಸಂಸ್ಕೃತಿ, ಆಧ್ಯಾತ್ಮ, ಸಂಗೀತ, ವಾಸ್ತುಶಿಲ್ಪ, ಶಿಲ್ಪಕಲೆ, ಚಿತ್ರಕಲೆ, ಸಹಕಾರ, ಓಧ್ಯಮಿಕ ಕ್ಷೇತ್ರಗಳಲ್ಲಿ ವಿಶಿಷ್ಠ ಸ್ಥಾನ ಪಡೆದಿರುವ ಗದಗ ಪರಿಸರದಲ್ಲಿ ಸಂಗೀತ ನಿನಾದಿಸುತ್ತಿದೆ. ನಮ್ಮ ಜಿಲ್ಲೆ0ು ಗಾಳಿ0ುಲ್ಲಿ ವಿದ್ಯುತ್ ಇದೆ. ಗಣಿಗಳಲ್ಲಿ ಬಂಗಾರವಿದೆ. ಇಲ್ಲಿ0ು ದೇವಾಲ0ುಗಳು, ಬಸದಿಗಳು, ದರ್ಗಾಗಳು ಹಾಗೂ ಅನೇಕ ಪ್ರಾಚೀನ ಸ್ಮಾರಕಗಳಿವೆ. ಖ್ಯಾತಿವೆತ್ತ ಕಲಾವಿದರ ನೆಲೆಬೀಡಾಗಿದೆ. ಸಾಂಸ್ಕೃತಿಕ ವೈಭವ ಸಾರುವ ಈ ಪರಿಸರ ಐತಿಹಾಸಿಕ, ಪಾರಂಪಾರಿಕ, ನೆಲಗಳನ್ನೊಳಗೊಂಡಿದೆ. ಇಲ್ಲಿ ಧರ್ಮ ಸಮನ್ವ0ುತೆ ಇದೆ, ಸಾಮರಸ್ಯವಿದೆ. ಇಲ್ಲಿ ಬಂಧುತ್ವ ಬಲಗೊಂಡಿದೆ. ಪ್ರೀತಿ- ಸ್ನೇಹ ಬೆಸೆಗೊಂಡಿದೆ. ಪುರಾತತ್ವದ ನೆಲೆಗಳಿವೆ. ಆಧುನಿಕತೆ ತೆರೆದುಕೊಂಡಿದೆ. ಕೆ.ಜಿ.ಯಿಂದ ಪಿ.ಜಿ.0ು ಎಲ್ಲ ವಿಶ್ವವಿದ್ಯಾಲ0ುಗಳು ಕಾ0ುರ್ನಿರ್ವಹಿಸುತ್ತಿವೆ. ಇದು ಸಹಕಾರದ ಗಂಗೋತ್ರಿ, ಒಟ್ಟಿನಲ್ಲಿ ಗದಗ, ರಾಜ್ಯದ ಸಾಂಸ್ಕೃತಿಕ, ಸಾಹಿತ್ಯಕ ರಾಜಧಾನಿ0ಾಗಿದೆ ಎಂಬುದು ನಮಗೆಲ್ಲ ಹೆಮ್ಮೆ0ು ಸಂಗತಿ0ಾಗಿದೆ.
ಸಂವಿಧಾನ ಜಾರಿಗೆ ಬಂದು 75 ವಸಂತಗಳನ್ನು ಪೂರ್ಣಗೊಳಿಸಿ, ಅಮೃತ ಮಹೋತ್ಸವದ ಸುಸಂಭ್ರಮದಲ್ಲಿದ್ದೇವೆ. ಪ್ರಜಾಪ್ರಭುತ್ವದ ಮೌಲ್ಯಗಳಾದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀ0ು ನ್ಯಾ0ುವನ್ನು, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸಣೆ0ು ಸ್ವಾತಂತ್ಯವನ್ನು ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ0ುನ್ನು ದೊರೆ0ುುವಂತೆ ಮಾಡುವುದಕ್ಕಾಗಿ ವ್ಯಕ್ತಿಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭಾತೃತ್ವ ಭಾವನೆ0ುನ್ನು ಮೂಡಿಸುವುದಕ್ಕಾಗಿ ದೃಢ ಸಂಕಲ್ಪ ಮಾಡಿ ನಮ್ಮ ಸಂವಿಧಾನ ಸಭೆ0ುಲ್ಲಿ 1949ನೆ0ು ಇಸ್ವಿ0ು ನವೆಂಬರ ತಿಂಗಳ 26ನೇ ದಿನದಂದು ಈ ಸಂವಿಧಾನವನ್ನು ನಮಗೆ ನಾವೇ ಅರ್ಿಸಿಕೊಂಡು ಅಂಗೀಕರಿಸಿ ಶಾಸನವಾಗಿ ವಿಧಿಸಿಕೊಂಡಿದ್ದೇವೆ ಎಂದು ತಿಳಿಸಿದರು.
ಭಾರತ ಗಣರಾಜ್ಯವಾಗಿ ಪ್ರಜೆಗಳೇ ಪ್ರಭುಗಳಾಗಿ ಬಾಳಲು ಹೆಮ್ಮೆಯಿಂದ ಬದುಕಲು ಸಂವಿಧಾನ ನಮಗೆಲ್ಲ ಶ್ರೀರಕ್ಷೆನೀಡಿದೆ. ನಮ್ಮ ರಾಷ್ಟ್ರವನ್ನು ಇನ್ನಷ್ಟು ಬಲಿಷ್ಠ ರಾಷ್ಟ್ರವಾಗಿ ಸರ್ವರಿಗೂ ಸಾಮಾಜಿಕ ನ್ಯಾ0ುದ ಅತ್ಯಂತ ಪ್ರಭಲ ಅಸ್ತವಾಗಿರುವ ನಮ್ಮ ಸಂವಿಧಾನವು ನಮಗೆ ಸಾಮಾಜಿಕ, ಆರ್ಥಿಕ, ರಾಜಕೀ0ು, ಶೈಕ್ಷಣಿಕ, ನ್ಯಾ0ು ಪಡೆ0ುುವ ಅಧಿಕಾರ ನೀಡಿದೆ. ಸಮಾಜದಲ್ಲಿರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನಮ್ಮ ಪ್ರಜಾಪ್ರಭುತ್ವದಲ್ಲಿದೆ. ಸಮಸ್ಯೆ ಮುಕ್ತವಾದ, ಶೋಷಣೆ ಮುಕ್ತವಾದ ಸಮಾಜವನ್ನಾಗಿಸಲು ನಮ್ಮ ಸಂವಿಧಾನದ ಪಥ ದಾರೀದೀಪವಾಗಿದೆ. ನಾವೆಲ್ಲ ಆ ಪಥದಲ್ಲಿ ಸಾಗಿ ಸಮೃದ್ಧ ಭಾರತ ಕಟ್ಟುವ ಕನಸನ್ನು ನನಸಾಗಿಸಬೇಕಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮ0್ಯು ಅವರು ಅಭಿವೃದ್ಧಿ0ು ಹರಿಕಾರರೂ ಹಾಗೂ ಹಸಿವು ಮುಕ್ತ ಕರ್ನಾಟಕ ಮಾಡಿದ ಮುಖ್ಯಮಂತ್ರಿ, ಜಿಲ್ಲೆ0ು ಅಭಿವೃದ್ಧಿಗೆ ಸಹಕಾರ ನೀಡಿದ್ದು ದಿನಾಂಕ 15.12.2024 ರಂದು ಜಿಲ್ಲೆ0ು ರೋಣಕ್ಕೆ ಆಗಮಿಸಿ, ರೋಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿ0ುಲ್ಲಿ 19689.97 ಲಕ್ಷರೂ. ವೆಚ್ಚದಲ್ಲಿ 11 ಶಂಕು ಸ್ಥಾಪನೆಗಳನ್ನು ಹಾಗೂ 5 ಉದ್ಘಾಟನೆ ಕಾಮಗಾರಿಗಳು ಸೇರಿದಂತೆ ಒಟ್ಟು 16 ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಅಭಿವೃದ್ಧಿ0ು ದಾಪುಗಲನ್ನು ಇಡಲಾಗಿದೆ ಎಂದರು.
ಬಡವರನ್ನು ಬಡತನ ರೇಖೆಯಿಂದ ಮೇಲೆತ್ತುವ ಕ್ರಾಂತಿಕಾರಕ ಕಾ0ುರ್ಕ್ರಮ ಗ್ಯಾರಂಟಿಯಿಂದಾಗಿದೆ. ಬಡವರ, ಅವಕಾಶ'ವಂಚಿತರ, ಶೋಷಣೆಗೆ ಒಳಗಾದವರ ಪರ ಗಟ್ಟಿ0ಾಗಿ ನಿಂತು ಸಾಮಾಜಿಕ, ಆರ್ಥಿಕ, ನ್ಯಾ0ು ನೀಡುವ, ನಾಡಿನ ಜನತೆ0ು ದೈನಂದಿನ ಬವಣೆಗಳನ್ನು ನೀಗಿಸಲು 5 ಗ್ಯಾರಂಟಿಗಳನ್ನು ಜನತೆಗೆ ಕೊಡಮಾಡಿದೆ. ಗೃಹಲಕ್ಷಿ-್ಮ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಹಾಗೂ 0ುುವನಿಧಿ0ುಂತಹ ಕ್ರಾಂತಿಕಾರಿ ಕಾ0ುರ್ಕ್ರಮಗಳನ್ನು ಜಾರಿಗೊಳಿಸಿದ ಕೀರ್ತಿ ಸಿಎಂ ಸಿದ್ಧರಾಮ0್ಯುನವರಿಗೆ ಸಲ್ಲುತ್ತದೆ ಎಂದರು. ಜಗತ್ತಿನಲ್ಲಿ ಬಡವರನ್ನು ಮೇಲ್ಮಟ್ಟಕ್ಕೇರಿಸುವ ಮೂಲಕ ಕ್ರಾಂತಿಕಾರಕ ಕೆಲಸ ಮಾಡಿದ ಹೆಗ್ಗಳಿಕೆ ನಮ್ಮ ಸರ್ಕಾರದ್ದಾಗಿದೆ. 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ನಿರಂತರ ಶ್ರಮಿಸುವದರ ಮೂಲಕ ನುಡಿದಂತೆ ನಡೆದಿದ್ದೇವೆ. ಬಡವರ ಕಲ್ಯಾಣ ಕೆಲಸಗಳಿಗೆ ನಮ್ಮ ಸರಕಾರ ಎಂದಿಗೂ ಬದ್ಧವಾಗಿದೆ ಎಂದು ಸಚಿವ ಎಚ್. ಕೆ. ಪಾಟೀಲ ವಿಶ್ವಾಸದಿಂದ ನುಡಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ, ಜಿಲ್ಲಾ ಪಂಚಾಯತ್ ಸಿಇಓ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಡಿಸಿಎಫ್ ಸಂತೋಷ ಕೆಂಚಪ್ಪನವರ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಉಪವಿಭಾಗಾಧಿಕಾರಿ ಗಂಗಪ್ಪ ಎಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರುಗಳು, ಸಾರ್ವಜನಿಕರು, ಅಪಾರ ಸಂಖ್ಯೆಯಲ್ಲಿ ಶಾಲಾ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.