ಸತೀಶ ಶುಗರ‌್ಸ ಲಿ.ಕಾರ್ಖಾನೆಯಲ್ಲಿ 76ನೇ ಗಣರಾಜ್ಯೋತ್ಸವದ ಸಂಭ್ರಮಾಚರಣೆ

76th Republic Day Celebration at Satish Sugars Ltd Factory

 ಸತೀಶ ಶುಗರ‌್ಸ ಲಿ.ಕಾರ್ಖಾನೆಯಲ್ಲಿ 76ನೇ ಗಣರಾಜ್ಯೋತ್ಸವದ ಸಂಭ್ರಮಾಚರಣೆ 

ಮೂಡಲಗಿ 26: ಭಾರತ ದೇಶ ವಿವಿಧತೆಯಲ್ಲಿ ಏಕತೆ ಹಾಗೂ ಸರ್ವರಲ್ಲಿಯೂ ಸಮಾನತೆಯನ್ನು ಕಾಣುವುದಾಗಿದೆ. ಇಂದು ದೇಶವು ಎಲ್ಲ ರಂಗಗಳಲ್ಲಿ ಮುಂದುವರೆಯುತ್ತಾ ಸಾಗಿದ್ದರೂ ಸಹ ಸಮಾಜದಲ್ಲಿನ ಜಾತಿ-ಭೇದ, ಮೇಲು-ಕೀಳು, ರಾಜ್ಯ-ರಾಜ್ಯಗಳ ನಡುವಿನ ಗಡಿ ಸಂಬಂಧಿತ ಕಲಹಗಳು ದೇಶದ ಅಭಿವೃದ್ದಿಗೆ ಮಾರಕವಾಗುತ್ತಿವೆ ಎಂದು ಸತೀಶ ಶುಗರ‌್ಸ ಕಾರ್ಖಾನೆ ತಾಂತ್ರಿಕ ವಿಭಾಗದ ಉಪಾಧ್ಯಕ್ಷ ವೀರು ತಳವಾರ ಕಳವಳ ವ್ಯಕ್ತಪಡಿಸಿದರು. 

      ತಾಲೂಕಿನ ಹುಣಶ್ಯಾಳ ಪಿಜಿ ಬಳಿಯ ಸತೀಶ ಶುಗರ​‍್ಸ‌ ಕಾರ್ಖಾನೆಯಲ್ಲಿ ರವಿವಾರ ಜರುಗಿದ 76 ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ,  ದೇಶದ ಪ್ರಜೆಗಳಾದ ನಾವೆಲ್ಲರೂ ದೇಶದ ಏಕತೆಗಾಗಿ, ಅಭಿವೃದ್ದಿಗಾಗಿ ಒಗ್ಗಟ್ಟಾಗಿ ಶ್ರಮಿಸ ಬೇಕಾಗಿದೆ ಎಂದರು. 

       ಸಮಾರಂಭದಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸಿದ ಪ್ರಗತಿ ಪರ ರೈತರಾದ ಸಂಗನಕೇರಿಯ ಈರಗೌಡ ಭೀಮಗೌಡ ಪಾಟೀಲ ಕಪರಟ್ಟಿಯ ಯಮನಪ್ಪಾ ಭೀಮಪ್ಪಾ ಬೈಲಾಡಿ ಮತ್ತು ನಿಪನಾಳದ ಸಾರಿಗೆ ಮುಕ್ತೆದಾರರಾದ ಗೋಪಾಲ ರಂಗಪ್ಪಾ ಪಡತರಿ, ಮಸಗುಪ್ಪಿಯ ವಿಠ್ಠಲ ಶಿವರಾಯಪ್ಪಾ ಹೊಸುರ ಅವರನ್ನು ಸತ್ಕರಿಸಿ ಗೌರವಿಸಿದರು. 

      ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ಪಿ.ಡಿ.ಹಿರೇಮಠ  ಮಾತನಾಡಿ, ಸತೀಶ ಶುಗರ‌್ಸ ಕಾರ್ಖಾನೆಯು ಸನ್ 2000 ನೇ ಸಾಲಿನ ಪ್ರಾರಂಭಗೊಂಡು  ಪ್ರಸ್ತುತ 2025 ನೇ ಸಾಲಿನಲ್ಲಿ 25 ವರ್ಷಗಳನ್ನು ಪೂರೈಸುತ್ತಿದ್ದು, ಕಾರ್ಖಾನೆಯ ಅಭಿವೃದ್ದಿಗೆ ಸಹಕರಿಸುತ್ತಿರುವ ರೈತ ಬಾಂಧವರು ಸಂಸ್ಥೆಯ ಪ್ರಗತಿಗೆ ತಮ್ಮೆಲ್ಲರ ಸಹಾಯ-ಸಹಕಾರ  ನಿರಂತರವಾಗಿರಲಿ ಎಂದರು.  

  

    ಕಾರ್ಖಾನೆಯ ಕಬ್ಬು ಅಭಿವೃದ್ದಿ ವಿಭಾಗದ ವ್ಯವಸ್ಥಾಪಕರಾದ ಎನ್‌. ಬಿ.ರಡರಟ್ಟಿ, ರಾಘವೇಂದ್ರ ದಪ್ತರದಾರ ಮಾತನಾಡಿದರು.  

    ಕಾರ್ಯಕ್ರಮದಲ್ಲಿ ಕಾರ್ಖಾನೆಯ ವ್ಯವಸ್ಥಾಪಕರುಗಳಾದ ಮಲ್ಲಿಕಾರ್ಜುನ ಸಸಾಲಟ್ಟಿ, ಮಹೇಶ ಜಿ. ಆರ್, .ಸಂಜಯ ಬಾವಿಸಕರ ಮತ್ತು ವಿವಿಧ ವಿಭಾಗಗಳ ಅಧಿಕಾರಿ ವರ್ಗದವರು, ಕಾರ್ಮಿಕ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು. 


ಫೋಟೋ ಕ್ಯಾಪ್ಸನ್‌> ಮೂಡಲಗಿ: ತಾಲೂಕಿನ ಸತೀಶ ಶುಗರ​‍್ಸ‌ ಕಾರ್ಖಾನೆಯಲ್ಲಿ ಜರುಗಿದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸಿದ ಪ್ರಗತಿ ಪರ ರೈತರನ್ನು ಸತ್ಕರಿಸಿ ಗೌರವಿಸಿದರು. 

ಫೋಟೋ ಫೈಲ್ ನಂ> 26ಎಂಡಿಎಲ್‌ಜಿ2