ದುರ್ಗಾದೇವಿ ಶಿಕ್ಷಣ ಸಂಸ್ಥೆಯಲ್ಲಿ 76 ನೇ ಗಣರಾಜ್ಯೋತ್ಸವ ಆಚರಣೆ
ಗದಗ 26 : ನಗರದ ಗಂಗಾಪೂರಪೇಟೆಯಲ್ಲಿ ದುರ್ಗಾದೇವಿ ಶಿಕ್ಷಣ ಸಂಸ್ಥೆಯಲ್ಲಿ ರವಿವಾರ 76 ನೇ ಗಣರಾಜ್ಯೋತ್ಸವನ್ನು ಆಚರಿಸಲಾಯಿತು. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾಧ್ಯಕ್ಷ ವಿಜಯಕುಮಾರ ಬಣಕಾರ ಅವರು ಧ್ವಜಾರೋಹಣ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಎಚ್..ಎನ್. ಪ್ರಶಸ್ತಿ ಪಡೆದ ಸಮಾಜ ಸೇವಕ ಹೀರಾಲಾಲ ಸಿಂಗ್ರಿ ಅವರಿಗೆ ಶಿಕ್ಷಣ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಂಡರಗಿಯ ಹಿರಿಯರಾದ ಯಲ್ಲಪ್ಪ ಹೊಂಬಳಗಟ್ಟಿ, ವಿರೇಶ ಹಡಗಲಿ, ಗಂಗಾಧರ ಹವಳೆ, ಸಲಹಾ ಸಮಿತಿಯ ಸದಸ್ಯರಾದ ಮುತ್ತು ಜಡಿ, ಮುಖ್ಯೋಪಾದ್ಯಾಯನಿ ಎಚ್.ಎಂ.ನದಾಫ್, ಸಹಶಿಕ್ಷಕಿಯರಾದ ಎಂ.ಎಂ.ಹಿಡ್ಕಿಮಠ, ಆರ್.ಎಂ.ಅಂಗಡಿ, ಎಸ್.ವೈ. ತಿರಕಣ್ಣವರ, ವಿ.ವಿ.ಕಲ್ಮನಿ, ಮಂಜುಳಾ ದಾಸರ, ರೂಪಾ ಅಸೂಟಿ ಸಿಬ್ಬಂದಿಗಳಾದ ಲಕ್ಷ್ಮೀ ಕಮಡೊಳ್ಳಿ, ಸೈನಾಜಬಾನು ರೋಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.