ಜಿಲ್ಲಾ ಕ್ರೀಡಾಂಗಣದಲ್ಲಿ 76ನೇ ಗಣರಾಜ್ಯೋತ್ಸವ ಸಂಭ್ರಮದ ಽ ಸಾಧಕರಿಗೆ ಸನ್ಮಾನ
ಬಾಗಲಕೋಟೆ 26: ಮಹಾನ್ ಮೇಧಾವಿಗಳ ಸತತ ಅಧ್ಯಯನ, ಚರ್ಚೆಗಳ ಅವಿರತ ಶ್ರಮದ ಫಲವಾಗಿ ಭಾರತ ಸಂವಿಧಾನ ರಚನೆಗೊಂಡು ದೇಶದೊಳಗಿದ್ದ ಎಲ್ಲ ರಾಜ್ಯಗಳು, ಸಂಸ್ಥಾನಗಳು ವೀಲೀನಗೊಂಡು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಏಕ ಸಂವಿಧಾನ ದಡಿ ಬೃಹತ್ ಗಣತಂತ್ರವಾಗಿ ಹೊರಹೊಮ್ಮಿದ ದೇಶ ಭಾರತ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ನವ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರವಿವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ತ್ಯಾಗ, ಬಲಿದಾನ, ್ರಾಣಾರೆ್ಪಣ ಮಾಡಿದ ಅಸಂಖ್ಯಾತ ದೇಶ ಭಕ್ತರನ್ನು, ರಾಷ್ಟ್ರಪೀತ ಮಹಾತ್ಮ ಗಾಂಧೀಜಿ ಜವಾಹರಲಾಲ್ ನೆಹರೂ, ವಲ್ಲಭಭಾಯಿ ಪಟೇಲ, ಲಾಲ ಬಹಾದ್ದೂರ ಶಾಸ್ತ್ರಿ, ಬಾಬು ರಾಜೇಂದ್ರ ಪ್ರಸಾದ ಮುಂತಾದ ಮಹಾನ್ ಮೇಧಾವಿಗಳನ್ನು ನೆನಪಿಸಬೇಕಾಗುತ್ತದೆ. ಇದು ನಮ್ಮೆಲ್ಲರ ಕರ್ತವ್ಯ ಕೂಡಾ ಆಗಿದೆ ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಯೋಜನೆ ಅನುಷ್ಠಾನಕ್ಕೆ ನಮ್ಮ ಸರಕಾರ ಬದ್ದತೆಯನ್ನು ಸ್ಪಷ್ಟಪಡಿಸಿದೆ. ಇದರಿಂದ ಮುಳುಗಡೆಯಾಗುವ ಸುಮಾರು 73 ಸಾವಿರ ಎಕರೆ ಭೂಮಿಯನ್ನು ಕನ್ಸೆಂಟ್ ಅವಾರ್ಡಿನ ಮೂಲಕ ಒಂದೇ ಹಂತದಲ್ಲಿ ಭೂಸ್ವಾಧೀನಪಡಿಸುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ವಾಡಿಕೆಗಿಂತ ಹೆಚ್ಚಿನ ಮಳೆಯಿಂದಾಗಿ ಗ್ರಾಮೀಣ ರಸ್ತೆಗಳು ತೀವ್ರ ಹಾನಿಗೊಳಗಾಗಿದ್ದು, ಇವುಗಳ ಸುಧಾರಣೆಗಾಗಿ ಪ್ರತಿ ಮತಕ್ಷೇತ್ರಕ್ಕೆ ತಲಾ 10 ಕೋಟಿ ರೂ.ಗಳಂತೆ ಜಿಲ್ಲೆಗೆ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿಗೆ ರೈತರಿಗೆ ಸಮರ್ಕವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರವ ವಿತರಣೆ ಮಾಡಲಾಗಿದೆ. ಬಾಗಲಕೋಟೆ ತೋಟಗಾರಿಕೆ ಬೆಳೆಗೆ ಹೆಸರುವಾಸಿಯಾಗಿದ್ದು, ದ್ರಾಕ್ಷಿ, ದಾಳಿಂಬೆ, ಅರಿಶಿಣ, ಮೆಣಸಿನಕಾಯಿ ಹಾಗೂ ಬಾಳೆ ಬೆಳೆಗೆ ಹೆಚ್ಚಿನ ಬೇಡಿಕೆ ಇದ್ದು, ಒಟ್ಟು 34,100 ಮೆಟ್ರಿಕ್ ಟನ್ ತೋಟಗಾರಿಕೆ ಉತ್ಪನ್ನಗಳು ವಿವಿಧ ರಾಜ್ಯ ಹಾಗೂ ವಿದೇಶಕ್ಕೂ ರು್ತ ಮಾಡಲಾಗಿದೆ. ವಿವಿಧ ಸಾಮಾಜಿಕ ಭದ್ರತೆ ಯೋಜನೆಯಡಿ 2.55 ಲಕ್ಷ ಫಲಾನುಭವಿಗಳು ಲಾಭ ಪಡೆಯುತ್ತಿದ್ದಾರೆ. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ತನ್ನ ಮಾರಾಟದ ಜಾಲವನ್ನು ನೆರೆಯ ಮಹಾರಾಷ್ಟ್ರ ರಾಜ್ಯಕ್ಕೂ ವಿಸ್ತರಿಸಿದೆ ಎಂದು ತಳಿಸಿದರು.
ಸರಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆಯಡಿ ಒಟ್ಟು ಪ್ರಯಾಣಿಕರಲ್ಲಿ ಶೇ.62 ಪ್ರಯಾಣಿಕರು ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಶೇ.96.49 ರಷ್ಟು ಲಾಭ ಪಡೆಯುತ್ತಿದ್ದರೆ. ಗೃಹಲಕ್ಷ್ಮೀ ಯೋಜನೆಯಡಿ ಶೇ.94.81 ರಷ್ಟು ಲಾಭ ಪಡೆಯುತ್ತಿದ್ದಾರೆ. ಗೃಹ ಜ್ಯೋತಿ ಯೋಜನೆಯಡಿ ಒಟ್ಟು 4,20,514 ಜನ ನೋಂದಾಯಿಸಿಕೊಂಡು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಯುವನಿಧಿ ಯೋಜನೆಯಡಿ ಪದವೀಧರರು 7637, ಡಿಪ್ಲೋಮಾ 91 ಸೇರಿ ಒಟ್ಟು 7729 ಫಲಾನುಭವಿಗಳು ಪ್ರಯೋಜನ ಪಡೆದುಕೊಳ್ಳುತ್ತಿದಾರೆ ಎಂದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ 34.94ಲಕ್ಷ ಮಾನವದಿನಗಳನ್ನು ಸೃಜಿಸಿ ರೂ. 153.05 ಕೋಟಿ ಖರ್ಚು ಭರಿಸಲಾಗಿರುತ್ತದೆ. ದೀನ್‌ದಯಾಳ ಅಂತ್ಯೋದಯ ಯೋಜನೆಯಡಿ 3322 ಸ್ವ-ಸಹಾಯ ಸಂಘಗಳಿಗೆ ರೂ.3621.00 ಲಕ್ಷಗಳ ಸಮುದಾಯ ಬಂಡವಾಳ ನಿಧಿಯನ್ನು ಜೀವನೋಪಾಯ ಚಟುವಟಿಕೆಗಳಿಗಾಗಿ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ 800 ಗ್ರಾಮೀಣ ನಿರುದ್ಯೋಗ ಯುವಕ, ಯುವತಿಯರಿಗೆ ಕೌಶಲ್ಯ ತರಬೇತಿಯನ್ನು ನೀಡಿ ಸ್ವ-ಉದ್ಯೋಗ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಎಚ್.ವಾಯ್.ಮೇಟಿ, ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ, ಹನಮಂತ ನಿರಾಣಿ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕನ್ನವರ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿ.ಪಂ ಸಿಇಓ ಶಶಿಧರ ಕುರೇರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್ ಪಿ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಶೀಲ್ದಾರ ಅಮರೇಶ ಪಮ್ಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬಾಕ್ಸ್ . .
ಸಾಧಕರಿಗೆ ಸನ್ಮಾನ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಲಾಯಪ್ಪಗೌಡ ನಾಯ್ಕರ (ಭಾರತೀಯ ಸೇನೆ), ಬಸಪ್ಪ ಗಿರಿಗಾವಿ, ಈಶ್ವರ ಕರಬಸವನವರ (ಕೃಷಿ), ಚಂದ್ರಲಿಂಗಪ್ಪ ಬಸರಕೋಡ (ವೀರಗಾಸೆ), ಬಸವರಾಜ ದಾವಣಗೆರೆ (ಶಿಕ್ಷಣ, ಸಮಾಜಸೇವೆ), ಮೌನೇಶ ಬಡಿಗೇರ (ಶಿಲ್ಪಕಲೆ), ಪರಶುರಾಮ ಬಿಸನಾಳ, ಡಾ.ವಿಜಯಮಹಾಂತೇಶ ಮಲಗಿಹಾಳ (ಸಮಾಜ ಸೇವೆ), ಮಲ್ಲಿಕಾರ್ಜುನ ಯರಗೇರಿ (ಜನಪದ ಸಂಗೀತ), ಭರತ ಮಧರಖಂಡಿ, ರೂಪಶ್ರೀ ಕಲಾದಗಿ (ಅಂಗಾಂಗದಾನ), ಡಾ.ಬಸವರಾಜ ಗವಿಮಠ (ಲಲಿತಕಲಾ ಸೇವೆ), ವೈಷ್ಣವಿ ಬಾದವಾಡಗಿ, ಪೂರ್ವಿ ಸಿದ್ದವಗೋಳ, ರಾಮಕೃಷ್ಣ ದಾಸರ (ಕ್ರೀಡೆ), ವಿಲಾಸ್ ಯಣ್ಣಿ (ಸಂಗೀತ), ಹನುಮಪ್ಪ ಕೆಸರಪೆಂಟಿ, ನಿಂಗಪ್ಪ ಕಲ್ಲಪ್ಪ (ಭಜನೆ), ರಾಘವೇಂದ್ರ ನೀಲನ್ನವರ (ಯೋಗ), ಸಲೀಮ ಕೊಪ್ಪದ, ವಿಶ್ವಜ ಕಾಡದೇವರ, ಲಿಂಗರಾಜ ಚಿನಿವಾಲರ (ಪತ್ರಕರ್ತರು), ತಿಪ್ಪಣ್ಣ ಚಲವಾದಿ (ಸಂಪಾದಕರು).
ಪಥಸಂಚಲನ ತಂಡಗಳಿಗೆ ಬಹುಮಾನ
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಥಸಂಚಲನ ಮಾಡಿದ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಎನ್.ಸಿ.ಸಿ ಸೀನೀಯರ್ ಡಿವಿಜನ್ 37 ಕರ್ನಾಟಕ ಬಟಾಲಿಯನ್ ಬಾಗಲಕೋಟೆ (ಪ್ರಥಮ), ಬಾಲಕಿಯ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ (ದ್ವಿತೀಯ) ಹಾಗೂ ಆದರ್ಶ ವಿದ್ಯಾಲಯ ನವನಗರ, ಬಾಗಲಕೋಟೆ (ತೃತೀಯ).