ಧರ್ಮಸ್ಥಳ ಜ್ಞಾನ ವಿಕಾಶ ಕ್ಷೇತ್ರದಿಂದ 6 ದಿನಗಳ ಸಾರಿ ಚುಕ್ಕೆ ಸಮಾರೋಪ ಸಮಾರಂಭ
ಯರಗಟ್ಟಿ, 07; ಮಹಿಳೆಯರು ಸ್ವಾವಲಂಬಿಯಾಗಿ ಬದುಕಬೇಕು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬುವುದು ಈ ತರಬೇತಿಯ ಉದ್ದೇಶವಾಗಿದೆ ಸ್ವ ಉಧ್ಯೋಗದ ಮುಖಾಂತರ ನಿಮ್ಮ ಕುಟುಂಬವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುವ ಎಲ್ಲರಕಿಂತ ತಾವೇನೂ ಕಡಿಮೇ ಇಲ್ಲ ಅವಕಾಶ ಸಿಕ್ಕಿದರೆ ತಾನು ಸ್ವಾವಲಂಬಿಯಾಗ ಬಲ್ಲೆ ಎಂದು ಸಮಾಜಕ್ಕೆ ತೋರಿಸಿ ಪ್ರತಿಯೂಬ್ಬ ಮಹಿಳೆಯರಿಗೆ ಮಾದರಿಯಾಗಬೇಂದು ತಿಳಿಸಿದರು.
ನಿವೇಲ್ಲಾ ಸಣ್ಣ ಪುಟ್ಟ ಸ್ವ ಉಧ್ಯೋಗಗಳನ್ನು ಮಾಡಿಕೊಂಡು ಸಂಪಾದನೆಯ ದಾರಿ ಕಂಡುಕೊಂಡು ಮಹಿಳೆಯರಿಗೆ ಇನ್ನೂ ಹೆಚ್ಚಿನ ತಿಳುವಳಿಕೆಯನ್ನು ಕೊಡುವುದೇ ಈ ತರಬೇತಿಯ ಮೂಲ ಉದ್ದೇಶವಾಗಿರುತ್ತದೆ ಎಂದು ಧರ್ಮಸ್ಥಳ ಜ್ಞಾನ ವೀಕಾಸ ಕ್ಷೇತ್ರದ ಯೋಜನಾಧಿಕಾರಿ ಸತೀಶ ಡಿ ರವರು ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಅವರು ಯರಗಟ್ಟಿ ಸಮೀಪದ ಕೋ.ಶಿವಾಪೂರ ಗ್ರಾಮದ ಹಿರೇಮಠದಲ್ಲಿ ನಡೆದ ಚಿಕ್ಕನಂದಿ ವಲಯದ ಕಾರ್ಯಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮದಲ್ಲಿ ಸಾರಿ ಕುಚ್ಚ ಕಸೋತಿ ಸ್ವ ಉದ್ಯೋಗ 6 ದಿನಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸ್ಥಳಿಯ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯ ವಿಜಯ ಪಡಿ ಮಾತನಾಡಿ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಚಿಂತನೆಗಳು ಮಹಿಳೆಯರ ಸಬಲಿಕರಣಕ್ಕೆ ಸಾಕ್ಷಿಯಾಗಿದೆ ಸಾಕಷ್ಟು ಜನರ ಬದುಕಿಗೆ ಬೆಳಕಾಗಿದೆ ವಿವಿದ ಉದ್ಯೋಗ ಮಾಡಿ ಉಳಿದ ಸದಸ್ಯರಿಗೂ ಮಾದರಿಯಾಗಬೇಕು ಎಂದು ಮಾಹಿತಿ ನೀಡಿದರು.
ಮತ್ತೊಬ್ಬರಿಗೆ ಉಧ್ಯೋಗ ನೀಡುವ ಕೈಗಳಾಗಬೇಕು ಅದಕ್ಕಾಗಿ ದೇಶದಲ್ಲಿ ಹೆಣ್ಣು, ಗಂಡು ಎನ್ನು ತಾರತಮ್ಮವಿಲ್ಲದೆ ಬೌದ್ದಿಕವಾಗಿ ಶಾರೀರಿಕವಾಗಿ ಸದೃಡ ಇರುವಾಗಲೆ ಸ್ವ ಉದ್ಯೋಯೋಗ ಮಾಡಿ ಸಂಪಾಧಿಸಿ ಉಳಿತಾಯದೊಂದಿಗೆ ಕುಟುಂಬದ ಮುಂದಿನ ನೆಮ್ಮದಿಯ ಬದುಕು ಸಾಗಿಸಬೇಕೆಂದು ತಿಳಿಸಿದರು ಸ್ವ ಉಧ್ಯೋಗ ಮಾಡುವಾಗ ಆ ಉಧ್ಯೋಗದ ಬಗ್ಗೆ ತಜ್ಞತೆ ಆಸಕ್ತಿ ಮಾತುಗಾರಿಕೆ ಪ್ರಾಮಾಣ ತೆ ನಿಮ್ಮಲ್ಲಿ ಇರಲಿ ಗ್ರಾಹಕರೊಂದಿಗೆ ಉತ್ತಮ ಸಂವಹನ ಇರಲಿ ಎಂದು ಸಲಹೆ ನೀಡಿದರು.
ಈ ಸಂದರ್ಬದಲ್ಲಿ ಜ್ಞಾನ ವಿಕಾಸ ತರಬೇತಿ ಸಂಸ್ಥೆಯ ಸಂಪೂನ್ಮೋಲ ವ್ಯಕ್ತಿ ಶ್ರೀಮತಿ ಕಾವೇರಿ ಯರಗಟ್ಟಿ ಮಾತನಾಡಿ ತರಬೇತಿ ತೆಗೆದುಕೊಂಡಿರುವ 37 ಮಹಿಳೆಯರು ಸಾರಿ ಚುಕ್ಕೆ ಕಸೋತಿ ತರಬೇತಿ ಪಡೆದುಕೊಂಡವರಿಗೆ ಪ್ರಮಾನ ಪತ್ರ ನೀಡಿ ಗೌರವಿಸಲಾಯಿತು. ಪಾಲ್ಗೊಂಡು ಉತ್ತಮ ಮಾರುಕಟ್ಟೆಯ ಕೌಶಲ್ಯವನ್ನು ಹೊಂದಿ ಹೆಚ್ಚು ಆದಾಯನ್ನು ಗಳಿಸಬೇಕು. ಜ್ಞಾನವಿಕಾಸ ತರಬೇತಿ ಕೇಂದ್ರದಡಿಯಲ್ಲಿ ಸಾರಿ ಕುಚ್ಚ ತರಬೇತಿ ಕಾರ್ಯಾಗಾರ ಮಹಿಳೆಯರ ಬದುಕು ವಿಕಾಸಗೊಳಿಸಲು ಸಹಕಾರಿಯಾಗಿದೆ ನಮ್ಮೆಲ್ಲರ ಬದುಕನ್ನು ಉನ್ನತಿಯ ಕಡೆಗೆ ಸಾಗಬೇಕು ಬಾಗವಹಿಸಿದ ಫಲಾನುಭವಿಯವರು ತಾವೇ ಸ್ವಂತ 6 ದಿನಗಳ ವಿವಿಧ ವಿಭಿನ್ನವಾದ ಕುಚ್ಚ ಹಾಕಿ ತಯಾರಿಸಿದ ಸಾರಿ ಪ್ರಧರ್ಶಸಲಾಯಿತು. ಗೀತಾ ಎಸ್ , ಮೇಲ್ವಿಚಾರಕರ ಶಂಬಾಜಿ ಎಸ್, ಜಗದೀಶ ಕೌಜಲಗಿ, ಸೇವಾ ಪ್ರತಿನಿಧಿ ಸುಣ ತಾ ದೇಸನೂರ, ಗುರುದೇವಿ ಹೂಗಾರ, ಸುಮೀತ್ರಾ ಹಿರೇಮಠ, ಕಲಾವತಿ ಹಂಜಿ, ಉಮಾ ರಾಯರ, ರೋಪಾ ಕೌಜಲಗಿ, ಯಲ್ಲವ್ವ ಉಪ್ಪಾರ, ಮಂಜುಳಾ ಕೋಳವಿ, ಕಾವ್ಯಾ ಚಿಕ್ಕಮಠ ಮುಂತಾದವರು ಇದ್ದರು.