ಸಹಕಾರಿ ಬ್ಯಾಂಕ್ ಚುನಾವಣೆಗೆ 37 ನಾಮಪತ್ರ ಸಿಂಧು

37 nomination papers for Co-operative Bank election Sindhu

ಸಹಕಾರಿ ಬ್ಯಾಂಕ್ ಚುನಾವಣೆಗೆ 37 ನಾಮಪತ್ರ ಸಿಂಧು  

ತಾಳಿಕೋಟಿ 12: ಪಟ್ಟಣದ ಪ್ರತಿಷ್ಠಿತ ಸಹಕಾರಿ ಕೋ- ಆಪರೇಟಿವ್ ಬ್ಯಾಂಕ್ ಇದರ ಆಡಳಿತ ಮಂಡಳಿ ನಿರ್ದೇಶಕರ 13 ಸ್ಥಾನಗಳಿಗೆ ಒಟ್ಟು 37 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಎಲ್ಲಾ 37 ನಾಮಪತ್ರಗಳೂ ಸಿಂಧುತ್ವ ಪಡೆದುಕೊಂಡಿವೆ. ನಾಮಪತ್ರ ಪರೀಶೀಲನೆ ದಿನವಾದ ಜನವರಿ 12ರಂದು, ನಾಮಪತ್ರಗಳನ್ನು ಪರೀಶೀಲಿಸಿದ ಚುನಾವಣಾಧಿಕಾರಿ ಚೇತನ್ ಭಾವಿಕಟ್ಟಿ ಹಾಗೂ ಸಹಾಯಕ ಚುನಾವಣಾಧಿಕಾರಿ ಆರಿ​‍್ಬ.ಧಮ್ಮೂರಮಠ ಅವರು ಎಲ್ಲಾ 37 ಅಭ್ಯರ್ಥಿಗಳ ನಾಮಪತ್ರಗಳು ಸಿಂಧುವಾಗಿವೆ ಎಂದು ಪ್ರಕಟಿಸಿದ್ದಾರೆ.  

ಬ್ಯಾಂಕಿನ ನಿರ್ದೇಶಕ ಮಂಡಳಿಯ ಸಾಮಾನ್ಯ ಕ್ಷೇತ್ರಕ್ಕೆ 18 ಅಭ್ಯರ್ಥಿಗಳು, ಮಹಿಳಾ ಕ್ಷೇತ್ರಕ್ಕೆ 6, ಪರಿಶಿಷ್ಟ ಜಾತಿ ಯ 03, ಪರಿಶಿಷ್ಟ ಪಂಗಡಕ್ಕೆ 02, ಹಿಂದುಳಿದ ವರ್ಗ ಅ ಗೆ 04, ಹಿಂದುಳಿದ ವರ್ಗ ಬ ಗೆ 04 ಹೀಗೆ ಒಟ್ಟು 37 ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಿದ್ದರು ಈಗ ಇವರೆಲ್ಲರೂ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಾಗಿದ್ದಾರೆ. ಜನೆವರಿ 13ರಂದು ನಾಮಪತ್ರ ಹಿಂಪಡೆಯಲು ಅವಕಾಶವಿದ್ದು ಜನೆವರಿ 19 ರಂದು ಮತದಾನ ನಡೆಯಲಿದೆ.