ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 2024 ಹಿ 25 ನೇ ಸಾಲಿನ
ಗದಗ ಜಿಲ್ಲಾ ಮಟ್ಟದ ಯುವ ಜನೋತ್ಸವದ ಸಮಾರೋಪ ಸಮಾರಂಭಗದಗ 10: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆ ಗದಗ, ನೆಹರೂಯುವ ಕೇಂದ್ರ ಗದಗ, ಯುವ ಸಂಘಗಳ ಒಕ್ಕೂಟಗದಗ, ಲಾಯನ್ಸ್ ಶಿಕ್ಷಣ ಸಂಸ್ಥೆ ಗದಗ ಹಾಗೂ ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯಗದಗ ಇವರುಗಳ ಸಹಯೋಗದಲ್ಲಿ 2024 ಹಿ 25 ನೇ ಸಾಲಿನ ಗದಗಜಿಲ್ಲಾ ಮಟ್ಟದ ಯುವ ಜನೋತ್ಸವದ ಸಮಾರೋಪ ಸಮಾರಂಭವನ್ನು ದಿನಾಂಕ 04-12-2024 ರ ಬುಧವಾರ ವೈಭವದಿಂದ, ವಿಜೃಂಭಣೆಯಿಂದ ಹಾಗೂ ಅಷ್ಟೇ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸಮಾರೋಪ ಸಮಾರಂಭದ ಕಾರ್ಯಕ್ರಮ ಜರುಗಿತು ಈ ಸಮಾರಂಭದ ಅಧ್ಯಕ್ಷತೆಯನ್ನು ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯದ ಚೇರ್ಮನ್ ಪ್ರೊ.ರಾಜೇಶ ಕುಲಕರ್ಣಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ.ಶರಣುಗೋಗೇರಿ, ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆ ಗದಗ ಹಾಗೂ ಜಿಲ್ಲಾ ನೆಹರುಯುವ ಕೇಂದ್ರದ ಅಧಿಕಾರಿ ರಂಜಿನಿ.ಎನ್ ಉಪಸ್ಥಿತರಿದ್ದರು.ಈ ಸಮಾರಂಭದಲ್ಲಿ ಪ್ರೊ.ರಾಜೇಶ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ನಮ್ಮ ಕರ್ನಾಟಕ ಸರಕಾರವು ಯುವ ಜನಾಂಗದಲ್ಲಿನ ಸುಪ್ತ ಪ್ರತಿಭೆ ಯನ್ನು ಕಂಡು ಹಿಡಿದು ಅದನ್ನು ಎಲ್ಲೆಡೆಗೂ ಪಸರಿಸುವ ಉದ್ದೇಶದಿಂದಲೇ ಈ ಯುವ ಜನೋತ್ಸವ ಕಾರ್ಯಕ್ರಮವನ್ನು ವಿಶಿಷ್ಠ ರೀತಿಯಲ್ಲಿ ಹಮ್ಮಿಕೊಂಡಿದ್ದಾರೆ.ಯುವ ಜನತೆ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿದ್ದು ಸಂತಸತಂದಿದೆ ಎಂದು ವಿಜೇತರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಇನ್ನೊರ್ವ ಅತಿಥಿಗಳಾಗಿ ಡಾ.ಶರಣುಗೋಗೇರಿ ಮಾತನಾಡಿ ಯುವ ಜನೋತ್ಸವ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳನ್ನು, ವಿಜೇತರನ್ನು, ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಾಯ ಹಸ್ತ ನೀಡಿ ಕಾರ್ಯಕ್ರಮವನ್ನು ಯಶಗೊಳಿಸಿದ್ದಕ್ಕಾಗಿ ಎಲ್ಲ ಮಹನೀಯರುಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದರು.ಯುವ ಜನೋತ್ಸವದಲ್ಲಿ ಜರುಗಿದ ಸ್ಪರ್ಧೆಗಳು : ವಿಷಯಾಧಾರಿತ ಸ್ಪರ್ಧೆಗಳು, ಸಾಂಸ್ಕೃತಿಕ ಸ್ಪರ್ಧೆಗಳು, ಜೀವನಕೌಶಲ್ಯ ಸ್ಪರ್ಧೆಗಳು, ಯುವಕೃತಿ ವಿಭಾಗ.
ಭಾಷಣ ಸ್ಪರ್ಧೆಯಲ್ಲಿಕುಮಾರ ಸೈಯ್ಯದ ಬಾಜಿ ಪ್ರಥಮ ಸ್ಥಾನ ಗಳಿಸಿ ನಗದು ಬಹುಮಾನ ರೂ.5000 ಪಡೆದರೆ, ಕುಮಾರ ಶಿವನಗೌಡ ಬಿರಾದಾರ ದ್ವಿತೀಯ ಸ್ಥಾನ ಪಡೆದು ನಗದು ಬಹುಮಾನ ರೂ.2500 ಪಡೆದರು, ಕುಮಾರಿ ಮಾನ್ಯ ಶೆಟ್ಟಿತೃತೀಯ ಸ್ತಾನ ಗಿಟ್ಟಿಸಿಕೊಂಡು ರೂ.1500 ನಗದನ್ನು ಪಡೆದರು.ಚಿತ್ರಕಲೆ ಸ್ಪರ್ಧೆಯಲ್ಲಿ ವಿಜಯ ಕಲಾ ಮಂದಿರ ಮಹಾವಿದ್ಯಾಲಯದ ವಿದ್ಯಾರ್ಥಿ ವೀನೀತ.ಎಸ್.ಪತ್ತಾರ ಪ್ರಥಮ ಸ್ಥಾನ ಪಡೆದು, ನಗದು ಬಹುಮಾನ ರೂ.2500 ಕ್ಕೆ ಭಾಜನರಾದರೆ, ಸರಕಾರಿಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿ ರಾಜೇಶ.ವಿ.ಸೋಳಂಕಿ ದ್ವಿತೀಯ ಸ್ಥಾನ ಗಳಿಸಿ ನಗದು ಬಹುಮಾನ ರೂ.1500 ಪಡೆದರು. ತೃತೀಯ ಸ್ಥಾನವನ್ನು ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ಹೇತಲ.ಕೆ.ಶಾಹ ಪಡೆದು ಬಹುಮಾನ ರೂ.1000 ಕ್ಕೆ ಅರ್ಹರಾದರು. ಕವನ ರಚನೆ ಸ್ಪರ್ಧೆಯಲ್ಲಿಕುಮಾರಿಜ್ಯೋತಿ ಮ್ಯಾಗೇರಿ ಪ್ರಥಮ ಸ್ಥಾನ ಗಳಿಸಿ ನಗದು ಬಹುಮಾನ ರೂ.2500ನ್ನು ತಮ್ಮದನ್ನಾಗಿಸಿಕೊಂಡರೆ, ಕುಮಾರ ಮಹೇಶ ಸಂಕಣ್ಣವರ ದ್ವಿತೀಯ ಸ್ಥಾನ ಪಡೆದು ನಗದು ಬಹುಮಾನ ರೂ.1500 ಪಡೆದುಕೊಂಡರು.ತೃತೀಯ ಸ್ಥಾನವನ್ನುಕುಮಾರಿ ನೀಲಮ್ಮ.ಕೆ.ಟಿ. ನಗದು ಬಹುಮಾನ ರೂ.1000 ದೊಂದಿಗೆತೃಪ್ತಿಪಟ್ಟುಕೊಂಡರು.ಸಮೂಹ ಜನಪದ ನೃತ್ಯದಲ್ಲಿ ಪ್ರಥಮ ಸ್ಥಾನವನ್ನುಗದಗ - ಬೆಟಗೇರಿಯಕುಮಾರಿಗೌರಿತಂಡ ಪಡೆದು ನಗದು ಬಹುಮಾನ ರೂ.7000 ಕ್ಕೆ ಭಾಜನರಾದರೆ, ದ್ವಿತೀಯ ಸ್ಥಾನವನ್ನು ಶಿರೋಳದ ಅಜ್ಜನಗೌಡತಂಡವು ಪಡೆದುಕೊಂಡು ನಗದು ಬಹುಮಾನ ರೂ.5000 ಗಿಟ್ಟಿಸಿದರು.ರೋಣದ ಅಮೇಶಾ ತಂಡವುತೃತೀಯ ಸ್ಥಾನಪಡೆದು ನಗದು ಬಹುಮಾನ ರೂ.3000 ಕ್ಕೆ ತೃಪ್ತರಾದರು.
ಗುಂಪು ವಿಜ್ಞಾನ ಮೇಳ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪ್ರಜ್ವಲ ಹಿರೇಮಠತಂಡವು ನಗದು ಬಹುಮಾನ ರೂ.7000 ಗಳಿಸಿದರೆ, ಅಮೃತಾಕೋರವರತಂಡವು ದ್ವಿತೀಯ ಸ್ಥಾನ ಗಳಿಸುವುದರೊಂದಿಗೆ ನಗದು ಬಹುಮಾನ ರೂ.5000 ತನ್ನದಾಗಿರಿಸಿಕೊಂಡಿತು.ತೃತೀಯ ಸ್ಥಾನ ಪ್ರಜ್ವಲ ಅಂಗಡಿತಂಡವು ಪಡೆದು ನಗದು ಬಹುಮಾನ ರೂ.3000 ಕ್ಕೆ ಅರ್ಹರಾದರು. ಮೊಬೈಲ್‌ಛಾಯಾಗ್ರಹಣ(ಫೋಟೋಗ್ರಾಫಿ) ಸ್ಪರ್ಧೆಯಲ್ಲಿಕುಮಾರ ಸಾಗರ.ವಿ.ಬಡಿಗೇರ ಪ್ರಥಮ ಸ್ಥಾನ ಪಡೆದು ನಗದು ಪುರಸ್ಕಾರ ರೂ.2500 ನ್ನು ತನ್ನದಾಗಿಸಿಕೊಂಡರೆ, ಖುರ್ಷಿದಾ.ಎಮ್.ಅಣ್ಣಿಗೇರಿ ದ್ವಿತೀಯ ಸ್ಥಾನ ಗಳಿಸಿ ರೂ.1500 ಪುರಸ್ಕಾರಕ್ಕೆ ಪಾತ್ರರಾದರು.ತೃತೀಯ ಸ್ಥಾನವುಕುಮಾರಅಜಯ.ಎಮ್.ಚನೆಗೋರಿ ಪಡೆದು ನಗದು ಬಹುಮಾನ ರೂ.1000 ಪಡೆದರು.
ವಿಜ್ಞಾನ ಮೇಳ ವೈಯಕ್ತಿಕ ವಿಭಾಗದಲ್ಲಿಕುಮಾರಿಆಫ್ರಿನ್ ಹೊಸಳ್ಳಿ ಪ್ರಥಮ ಸ್ಥಾನಕ್ಕೆ ಭಾಜನರಾಗಿ ನಗದು ಪುರಸ್ಕಾರ ರೂ.3000 ಗಳಿಸಿದರೆ, ದ್ವಿತೀಯ ಸ್ಥಾನವನ್ನುಅರ್ಚನಾಜಾಲಿಹಾಳ ಪಡೆದು ಬಹುಮಾನ ರೂ.2000 ಕ್ಕೆ ಅರ್ಹರಾದರು. ವಿದ್ಯಾಶ್ರೀ ನಾಯಕತೃತೀಯ ಸ್ಥಾನಕ್ಕೆ ತೃಪ್ತಿ ಹೊಂದಿ ನಗದು ಪುರಸ್ಕಾರ ರೂ.1500 ನ್ನು ಪಡೆದರು.ಜನಪದ ನೃತ್ಯ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಸ್ಥಾನದಲ್ಲಿ ಕುಮಾರಿ ವಷಾ.ಎಮ್.ಕಲಕಂಬಿ ಮಿಂಚಿದರೆ, ಕುಮಾರಿ ಸಂಗೀತಾ.ಡಿ.ಗೌಡರ ದ್ವಿತೀಯ ಸ್ಥಾನವನ್ನು ಹಾಗೂ ಕುಮಾರಿ ಸಹನಾ ಕಟ್ಟಿಮನಿ ತೃತೀಯ ಸ್ಥಾನ ಪಡೆದರು.
ಗುಂಪು ಜನಪದಗೀತೆಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನುಅಡವಿ ಸೋಮಾಪುರದ ಮಂಜುನಾಥ ತಂಡವು ಪಡೆದರೆ, ದ್ವೀತಿಯ ಸ್ಥಾನವನ್ನುಗದುಗಿನ ಅಭಿಷೇಕತಂಡವು ಪಡೆದುಕೊಂಡಿತು. ಹುಲಕೋಟಿಯ ರಂಜೀತಾತಂಡವು ಮೂರನೇಯ ಸ್ಥಾನಕ್ಕೆ ತೃಪ್ತಿಪಟ್ಟಿತು.
ವೈಯಕ್ತಿಕ ಜನಪದ ಹಾಡಿನ ಸ್ಪರ್ಧೆಯಲ್ಲಿಕುಮಾರಚಿದಾನಂದ ಹನಮಳ, ದ್ವಿತೀಯ ಸ್ಥಾನವನ್ನು ಕುಮಾರಿ ಭೂಮಿಕಾ ಪಾಟೀಲ ಹಾಗೂ ತೃತೀಯ ಸ್ಥಾನವನ್ನುಕುಮಾರ ಮೈಲಾರ್ಪ ಹರಿಜನ ಪಡೆದರು.ಕಥಾ ಸ್ಪರ್ಧೆಯಲ್ಲಿ ಹರ್ತಿಯಕುಮಾರಿ ಅಶ್ವಿನಿ.ಬಿ.ದೇಸಾಯಿ ಪ್ರಥಮ ಸ್ಥಾನ ಗಳಿಸಿದರೆ, ಗದುಗಿನ ಮನೋರಮಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ವೀಣಾ.ವ್ಹಿ.ಚುಡಗುಂಡ ದ್ವಿತೀಯ ಸ್ಥಾನವನ್ನು ಹಾಗೂ ಕೆ.ಎಲ್.ಇ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕುಮಾರಿ ಗಾಯಿತ್ರಿ ಮದಗುಂಡಿ ತೃತಿಯ ಸ್ಥಾನ ಪಡೆದರು.ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೆ ಸನ್ಮಾರ್ಗ ಮಹಾವಿದ್ಯಾಲಯದ ಚೇರ್ಮನ್ ಪ್ರೊ.ರಾಜೇಶಕುಲಕರ್ಣಿ, ಡಾ.ಶರಣುಗೋಗೇರಿ, ರಂಜಿನಿ ಎನ್ ಹಾಗೂ ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಪ್ರೇಮಾನಂದ ರೋಣದ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.
ಸನ್ಮಾರ್ಗ ಪದವಿ ಪೂರ್ವಚೇರ್ಮನ ಪ್ರೊ.ರಾಜೇಶಕುಲಕರ್ಣಿ, ಪ್ರಾಚಾರ್ಯ ಪ್ರೊ.ಪ್ರೇಮಾನಂದ ರೋಣದ, ಸಂಸ್ಥೆಯ ಆಡಳಿತಾಧಿಕಾರಿಯಾದ .ಎಂ.ಸಿ. ಹಿರೇಮಠ, ನಿರ್ದೇಶಕರಾದ ಪ್ರೊ.ರೋಹಿತಒಡೆಯರ, ಪ್ರೊ.ರಾಹುಲ ಒಡೆಯರ, ಪ್ರೊ.ಉಡುಪಿ ದೇಶಪಾಂಡೆ, ಪ್ರೊ.ಸೈಯ್ಯದ್ ಮತಿನ್ ಮುಲ್ಲಾ ಉಪಸ್ಥಿತರಿದ್ದರು.