2025-30 ನೇ ಸಾಲಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆ
ಹಾವೇರಿ 17 :ಇಲ್ಲಿನ ಸುವರ್ಣ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ, ಇದರ 2025-30 ನೇ ಸಾಲಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆಯಿತು. ಕರ್ನಾಟಕ ಸೌಹಾರ್ದ ಸಹಕಾರಿ ನಿಯಮ 2004ರ 5ಎಲ್ ನಲ್ಲಿನ ಉಪನಿಬಂಧಾನುಸಾರ,ಈ ಕೆಳಕಾಣಿಸಿದ ಅಭ್ಯರ್ಥಿಗಳು ಸದರಿ ಸಹಕಾರಿಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಕ್ರಮಬದ್ಧವಾಗಿ ಅವಿರೋಧವಾಗಿ ಚುನಾಯಿತರಾಗಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ಉದಯ ದತ್ತಾತ್ರೇಯ ಕುರ್ಡೇಕರ,ನಾಗರಾಜ ರಾಮದಾಸ ಕುರ್ಡೇಕರ, ಪ್ರಕಾಶ ವೆಂಕಟೇಶ ಪುತಳೇಕರ,ಪ್ರಸಾದ ರಮಾಕಾಂತ ವಿಠಲಕರ,ಮಂಜುನಾಥ ತಿರಕಪ್ಪ ಬಿಷ್ಟಣ್ಣವರ,ಸುಭಾಸ ಮಾನಪ್ಪ ಪೋತದಾರ,ಸುರೇಶ ಸೀತಾರಾಮಪ್ಪ ಕಮ್ಮಾರ, ಮಹಿಳಾ ಕ್ಷೇತ್ರದಿಂದ ಗಾಯತ್ರಿ ಸಿದ್ರಾಯಪ್ಪ ನೇಜಕರ,ಗೀತಾಬಾಯಿ ದಾನಪ್ಪ ಜೂಜಗಾಂವ ಹಿಂದುಳಿದ"ಅ"ವರ್ಗದಲ್ಲಿ ರಾಘವೇಂದ್ರ ತಿಮ್ಮಪ್ಪ ಸಾನು,ಹಿಂದುಳಿದ "ಬ"ವರ್ಗದಲ್ಲಿ ಶೇಖರ್ಪ ಶಿವಪ್ಪ ಕಲ್ಲಮ್ಮನವರ ಪರಿಶಿಷ್ಟ ಜಾತಿ ಕ್ಷೇತ್ರದಿಂದ ಮಂಜುಳಾ ಮುನೇಶ್ವರ ಚೂರಿ ಪರಿಶಿಷ್ಟ ವರ್ಗ ಕ್ಷೇತ್ರದಿಂದ ಸಚಿನ ರಾಮಚಂದ್ರ ಮಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಹನುಮೇಗೌಡ ವಿ.ಪಾಟೀಲ ಅವರು ತಿಳಿಸಿದ್ದಾರೆ.ಸಹಕಾರಿ ಇಲಾಖೆಯ ಸುಭಾಸ ಎಂ ಹಾಗೂ ಇತರರು ಇದ್ದರು.