ನೀಲಗುಂದ ಗುದ್ನೇಶ್ವರ ಮಹಾಸ್ವಾಮಿಗಳ 19ನೇ ವರ್ಷದ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ

19th year statue installation ceremony of Neelgund Gudneshwara Mahaswamy

ನೀಲಗುಂದ ಗುದ್ನೇಶ್ವರ ಮಹಾಸ್ವಾಮಿಗಳ 19ನೇ ವರ್ಷದ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ

ಕುಕನೂರು 04: ಸತತ 19 ವರ್ಷಗಳಿಂದ ತಪ್ಪದೆ  ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಮತ್ತು ಸಾಮೂಹಿಕ ವಿವಾಹಗಳನ್ನು ನೆರವೇರಿಸಿಕೊಂಡು ಬರುತ್ತಿರುವ ಗುದ್ನೇಶ್ವರ ಮಠದ ಜಂಗಮರ ಕಾರ್ಯ ಶ್ಲಾಘನೀಯ ಎಂದು ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು ಹೇಳಿದರು. 

 ಕುಕನೂರು ಪಟ್ಟಣದ ಗುದ್ನೇಪ್ಪನ ಮಠದ ನೀಲಗುಂದ ಮಠದಲ್ಲಿ ನೀಲಗುಂದ ಗುದ್ನೇಶ್ವರ ಮಹಾಸ್ವಾಮಿಗಳ 19ನೇ ವರ್ಷದ ಮೂರ್ತಿ ಪ್ರತಿಷ್ಠಾಪನೆ ಪ್ರಯುಕ್ತ ಸಾಮೂಹಿಕ 11 ಜೋಡಿ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ತಾಲೂಕ ಪಂಚಾಯತ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಮಾತನಾಡಿ ಜಂಗಮರು ದಾನ ತೆಗೆದುಕೊಳ್ಳುವುದಲ್ಲದೆ ಜ್ಯೋಳಿಗೆಯಿಂದ ದಾನ ಧರ್ಮ ಕಾರ್ಯಗಳನ್ನು ಸಹಿತ ಮಾಡುತ್ತಾರೆ ಅಂತಹ ದಾನ ಶ್ರೇಷ್ಠದಾನವಾಗಿದೆ. ಗುದ್ನೇಶ್ವರ ಮಠ ಸಣ್ಣ ಗ್ರಾಮವಾದರೂ ಗುರು ಹಿರಿಯರು ಯುವಕರು ಒಳ್ಳೆಯ ಕೆಲಸಗಳನ್ನು ನೆರವೇರಿಸಿಕೊಂಡು ಬರುತ್ತಿದ್ದಾರೆ ಎಂದು ಮಾತನಾಡಿದರು. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿದ ಅನ್ನದಾನೇಶ್ವರ ಶಾಖಾಮಠದ ಡಾಕ್ಟರ್ ಮಹದೇವ  ಮಹಾಸ್ವಾಮಿಗಳು ಮಾತನಾಡಿ ಪುಟ್ಟ ಗ್ರಾಮದಲ್ಲಿ ಜಂಗಮರ ಸಂಖ್ಯೆ ಇಂದ ಕೂಡಿದ್ದು ಇವರು ಬೇಡುವ ಜಂಗಮರಲ್ಲ ದಾನ ಧರ್ಮಗಳನ್ನು ಮಾಡುವ ಜಂಗಮರು ಇಂತಹ ಜಂಗಮರಿಗೆ ನೀಲಗುಂದ ಮಠದ ಪ್ರಭುಲಿಂಗ ದೇವರು ಅವರ ಅಭಿವೃದ್ಧಿಗಾಗಿ ಹಗಲಿರಲು ಶ್ರಮಿಸುತ್ತಾರೆ.  

ಇಂತಹ ತಪ್ಪು ಭೂಮಿಯಲ್ಲಿ ವಿವಾಹ ನೆರವೇರಿಸಿಕೊಂಡ ತಾವು ಪುಣ್ಯವಂತರು. ಪುಟ್ಟ ಗ್ರಾಮವಾದರೂ ಸಹಿತ 11 ಜೋಡಿ ಸಾಮೂಹಿಕ ವಿವಾಹಗಳನ್ನು ಪ್ರತಿ ವರ್ಷ ನಡೆಸಿಕೊಂಡು ವಿವಿಧ ರೀತಿಯ ಸಿಹಿ ಬೋಜನಗಳನ್ನು ಗ್ರಾಮದವರೇ ತಯಾರಿಸಿ ಬಂದ ಸಕಲ ಸದ್ಭಕ್ತರಿಗೆ ವಿತರಿಸಿ ಅದ್ದೂರಿಯಾಗಿ ವಿವಾಹಗಳನ್ನು ನೆರವೇರಿಸಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು. ಗ್ರಾಮದ ಹಿರಿಯರಾದ ಗುದ್ನೇಯ್ಯ ಬಂಡಿ ಮಠ ಪ್ರಾಸ್ತಾವಿಕ ನುಡಿಗಳ ನಾಡಿದರು.ಈ ಸಂದರ್ಭದಲ್ಲಿ ಸಚಿನ್ ಆಚಾರ, ನವೋದಯ ವಿದ್ಯಾಲಯದ ಪ್ರಾಂಶುಪಾಲ ಜಯ ಮೇಡಂ, ಎಎಸ್‌ಐ ನಿರಂಜನ ತಳವಾರ, ಪಟ್ಟಣ ಪಂಚಾಯಿತಿ ಸದಸ್ಯ ಜಗನ್ನಾಥ ಭೋವಿ,ಬಸವನಗೌಡ ತೊಂಡಿಹಾಳ, ಚನ್ನಬಸಯ್ಯ ಧೂಪದ, ವೀರಯ್ಯ ದೇವಗಣ ಮಠ, ಸಿದ್ದಲಿಂಗಯ್ಯ ಬಂಡಿ, ರುದ್ರಯ್ಯ ಗಲಬಿ, ರುದ್ರಯ್ಯ ಇನಾಮ್ದಾರ್, ಶಶಿಕುಮಾರ ಓಲಿ, ವೀರಯ್ಯ ಬ್ಯಾಳಿ, ರುದ್ರಯ್ಯ ವಿರಪಣ್ಣವರ್, ವಿರುಪಾಕ್ಷಯ್ಯ ಬಂಡಿ, ಮಲ್ಲಯ್ಯ ಹಲಸಿ ಮರದ, ಮಲ್ಲಯ್ಯ ಹುಣಸಿಮರದ, ಶರಣಯ್ಯ ಹೂನಾಳ, ಚನ್ನಬಸಯ್ಯ ಇನಾಮ್ದಾರ್, ಗುದ್ನೇಶ ದೇವಗಣಮಠ, ರೇವಣಸಿದ್ದಯ್ಯ ನಾಗಣ್ಣವರ್, ಹಾಗೂ ಗ್ರಾಮದ ಗುರುಹಿರಿಯರು ಇತರರು ಇದ್ದರು. ವರದಿ ಚನ್ನಯ್ಯ ಹಿರೇಮಠ ಕುಕನೂರು