ಕೂಡ್ಲಿಗಿ 25:ರಾಜ್ಯದಲ್ಲಿಯೇ ಕುಖ್ಯಾತಿ ಹೊಂದಿ ಸುಧ್ದಿಯಲ್ಲಿರುವ ಆಂಭಿಡೆಂಟ್ ಹಾಗೂ ಕೆಲ ಕಂಪನಿಗಳು ಕೂಡ್ಲಿಗಿ ಯ ಜನರಿಂದ ಕಟ್ಟುವ ಹಣಕ್ಕೆ ಹೆಚ್ಚಿನ ಬಡ್ಡಿ ಹಣವನ್ನು ನೀಡುವ ಆಮೀಶ ಒಡ್ಡಿ ಕಟ್ಟಿಸಿಕೊಂಡು ಈಗ ಹಣವನ್ನು ಸಕಾಲಕ್ಕೆ ನೀಡದೇ ಪಾಲುದಾರರಿಗೆ ಹಣ ನೀಡದೇ ಸತಾಯಿಸುತ್ತಿದ್ದು, ಹಣ ವಂಚನೆ ಮಾಡಬಹುದಾದ ಹಿನ್ನಲೆಯಲ್ಲಿ ಶಂಕೆ ವೆಕ್ತವಾಗಿ ಕಂಪನಿಗಳ ಏಜೆಂಟರ ವಿರುಧ್ದ ಹಣ ಹೂಡಿಕೆದಾರರು ದೂರು ನೀಡಲು ಮುಂದಾಗಿರುವ ಪ್ರಸಂಗ ಸೃಷ್ಠಿಯಾಗಿದೆ. ಕಂಪನಿಗಳು ಹೂಡಿಕೆಗೆ ಹೆಚ್ಚಿನ ಬಡ್ಡಿ ಸೇರಿಸಿ ಕಂತುಗಳಲ್ಲಿ ಹಿಂದಿರುಗಿಸುವ ಆಮೀಶ ತೋರಿದ್ದು ಪರಿಣಾಮ ಸುಮಾರು 150 ಜನರು ಶೇರು ಹಾಕಿದ್ದು, ಒಟ್ಟು 19ಕೋಟಿರೂ ಗಳಷ್ಟು ವಂಚನೆಯಾಗಿರುವುದು ತಿಳಿದುಬಂದಿದೆ.ಅಂಬಿಡೆಂಟ್ ಮಾಕರ್ೆಟಿಂಗ್ ಪ್ರೈವೇಟ್ ಲಿಮಿಟೆಡ್, ಈರಾ ಗೋಲ್ಡಾನ್ ಲಿಮಿಟೆಡ್, ಹೈದರಾಬಾದ್ ಇಂಜಾಜ್ ಇಂಟರ್ನ್ಯಾಷನಲ್, ಅಜ್ಮೀರ್,ಗ್ರೂಫ್ಸ್, ಆಲಾ ವಿಂವರ್ಸ್,ಕಂಪನಿಗಳಿಂದ ಸಾಮಾನ್ಯರಿಗೆ ವಂಚನೆಯಾಗಿರುವುದಾಗಿ ತಿಳಿದು ಬಂದಿದ್ದು ಸಂಬಂಧಿಸಿದಂತೆ ಐವತ್ತಕ್ಕೂ ಹೆಚ್ಚು ಹಣ ಹೂಡಿಕೆದಾರರು ಹಿರಿಯ ವಕೀಲ ಹಾಗೂ ಕನ್ನಡಸೇನೆ ರಾಜ್ಯ ಉಪಾಧ್ಯಕ್ಷ,ತಾಲೂಕು ಪತ್ರಕರ್ತರ ಒಕ್ಕೂಟ ಗೌರವಾದ್ಯಕ್ಷ ಎಲ.ಎಸ್.ಬಷೀರ್ ಅಹಮ್ಮದ್ ನೇತೃತ್ವದಲ್ಲಿ ಪತ್ರಿಕೆ ಹೇಳಿಕೆ ಮೂಲಕ ತಮ್ಮ ನೋವನ್ನು ದೂರನ್ನು ತೋಡಿಕೊಂಡಿದ್ದಾರೆ.
ನಾನು ದಿನಗೂಲಿ ನೌಕ್ರೀ ಮಾಡಾನು ಒಂದು ವರ್ಷ ಆಗತಿ ಸಂಬಂಳ ಆಗಿಲ್ಲ, ಹೆಚ್ಚಿನ ಬಡ್ಡಿ ಹಣ ಸೇರಿಸಿ ವಾಪಾಸು ಕಂತಿನಂತೆ ಕೊಡುತೀವಿ ಅಂದಿದ್ದಕ್ಕೆ ಆಸೆಯಿಂದ ಅವರ ಮಾತುನಂಬಿ ನಾನು ನಮ್ಮ ಅಣ್ಣ ಸಂಬಂಧಿಕರು ಸ್ನೇಹಿತರು ಪರಿಚಯಸ್ಥ್ರು ಸೇರಿ ಹತ್ತಾರು ಲಕ್ಷಗಟ್ಟಲೆ ದುಡ್ಡು ಕೊಟ್ಟೀವಿ ನಾನು ನಮ್ಮ ಅಣ್ಣ ಸಾಲಾ ಮಾಡಿ ರೊಕ್ಕ ಕೊಟ್ಟೀವಿ ಕೂಲಿನಾಲಿ ಮಾಡಿ ಕೂಡಿಟ್ಟಿದ್ದ ರೊಕ್ಕನ ಯಾವನೋ ನಮ್ಮ ಗೆ ಪರಿಚಯಸ್ತನ ಮಧ್ಯಸ್ತಿಕೆ ಮಾಡಿಕಂಡು ಬಂದು ಆರು ಲಕ್ಸ ಇಸ್ಗಂಡಾನ ಅದಕ್ಕ ಪೇಪರು ಬಾಂಡುಕಟ್ಟಾನ ಅಸ್ಟ ರೊಕ್ಕ ಕೊಡವಲ್ಲ ಕೊಡ್ತ್ನು ಅಂತಾನ ಕೊಡುವಲ್ಲ ಅದಕಾ ವಕೀಲರ ಹತ್ರ ಇಸ್ಕೊಡ್ಸ್ರೀ ಅಂತ ಕುಂತೀವಿ - ಯೂನೂಸ್ ನೊಂದ ಸಂತ್ರಸ್ಥ
ಕೂಲಿ ನಾಲಿ ಮಾಡಿ ನಾವು ಕೂಡಿಟ್ಟಿದ್ದ ಹಣವನ್ನು ಹೆಚ್ಚಿನ ಬಡ್ಡಿ ಹಣದ ಆಮೀಶ ಒಡ್ಡಿ ಸ್ಥಳೀಯ ಸಮಾಜದ ಮೌಲಾನಾ ರೊಬ್ಬರ ನೇತೃತ್ವದಲ್ಲಿ ಸ್ಥಳೀಯ ಏಜೆಂಟ್ ಯೂಸೆಫ್ ಎಂಬಾತನು ತಮ್ಮಿಂದ ಹಣ ಕಟ್ಟಿಸಿಕೊಂಡಿದ್ದು, ಅದಕ್ಕೆ ದಾಖಲುಗಳನ್ನು ನೀಡಿದ್ದಾನೆಯಾದರು ಕರಲವರಿಗೆ ಮಾತ್ರ ಒಂದೆರಡು ಕಂತುಗಳ ಹಣ ನೀಡಿದ್ದು ಉಳಿದವರಿಗೆ ಏನೂ ಬಂದಿರುವುದಿಲ್ಲ, ಮತ್ತು ಹಣ ಹಿಂದಿರುಗಿಸುವ ಸಂಬಂದ ಮಾತುಕತೆಗೂ ಸೂಕ್ತರೀತಿಯಲ್ಲಿ ಸ್ಫಂದಿಸದೇ ಆರಿಕೆ ಉತ್ತರ ನೀಡಿ ತಲೆಮರೆಸಿಕೊಳ್ಳುತ್ತಿದ್ದು, ಆತನ ನಡವಳಿಕೆಗಳಲ್ಲಿ ಅನುಮಾನ ಬಂದು ಆತನ ವಿರುಧ್ದ, ವಂಚನೆ ಪ್ರಕರಣ ದಾಖಲಿಸಲು ಎಲ್ಲಾ ಪೂರ್ವತಯಾರಿ ನಡೆಸಿದ್ದು ಶೀರ್ಘದಲ್ಲಿಯೇ ದೂರುದಾಖಲಿಸಲಾಗುದೆಂದು ಶೇರುದಾರರು ಹೇಳಿಕೆ ಯಲ್ಲಿ ತಿಳಿಸಿದ್ದಾರೆ.
ಹಬ್ಬಕ್ಕೆ ರೊಕ್ಕ ಇಲ್ಲ ಅಂದ್ರೂ ಕಂಪನಿಗೆ ಕಟ್ಟೀವಿ ಹೆಚ್ಚಿಗೆ ದುಡ್ಡು ಮಾಡಿಕೊಡುತೀವಿ ಅಂದಿದ್ದಕ್ಕೆ ಕೊಟ್ಟೀವಿ ಈಗ ಸಾಲಾಸೂಲಿ ಮಾಡಿ ದಿನಕಳೆತಿದಿವಿ ಸಾಲಗಾರರಕಾಟ ಮಿತಿ ಮೀರೇತಿ ದಿನ ಕಳೆದು ಕಷ್ಟ ಆಗತಿ ಪೊಲೀಸು ಟೇಷನ್ ಗೂ ಒಕಿವಿ ನ್ಯಾಯಸಿಗಲಿಲ್ಲ ಅಂದ್ರ ಕಂಪನಿರ ಹೆಸರು ಬರೆದು ನೇಣು ಆಕಣ ಪರಿಸ್ಥಿತಿ ಅಗೇತಿ. ನಾವು ಸತ್ರ ಅವರಾಕಾರಣ ಆಕಾರ, ಕಟ್ಟಿಸಿಕೊಂಡ ಕಂನಿಯವ್ರು ಆದಷ್ಟು ಬೇಗ ಕಂಪನಿಯವರು ರೊಕ್ಕ ವಾಪಾಸುಕೊಡಬೇಕು ಅದಕ್ಕಾಗಿ ನಾವು ವಕೀಲರಹತ್ರ ಓಗೀವಿ ನ್ಯಾಯಕೊಡಿಸಿ ನಮಗೆ ರೊಕ್ಕಕೊಡ್ಸ್ರೀ ಅಂತ ಹೋರಾಟ ಮಾಡುತೀವಿ - ಖೈರುನ್ ಬೀ ನೊಂದ ಸಂತ್ರಸ್ಥೆ
ಶೇರುದಾರರ ಪರ ವಕೀಲರಾದ ಬಷೀರ್ ಅಹಮ್ಮದ್ ಮಾತನಾಡಿ ಕೂಲಿ ಕಾಮರ್ಿಕರು ರೈತರು,ಬಡವರಲ್ಲಿ ಹೆಚ್ಚಿನ ಹಣ ನೀಡುವುದಾಗಿ ಹಣ ಪಡೆದು ವಂಚನೆ ಗೈಯ್ಯುವ ಕಂನಿ ವಿರುಧ್ದ ಸೂಕ್ತ ಕಾನೂನು ಹೋರಾಟಕ್ಕೆ ರೂಪುರೇಷೆಗಳನ್ನು ಹಾಕಿದ್ದು,ಪ್ರಾರಂಬಂಬದಲ್ಲಿ ಕಂಪನಿಯವರು ಹಣ ಹಿಂದಿರುಗಿಸುವುದಾಗಿ ದೂರು ದಾಖಲಿಸದಂತೆ ಮನವಿ ಮಾಡಿಕೊಂಡಿದ್ದರು, ಆದರೆ ಈಗ ಹಿಂದೇಟು ಹಾಕಿ ಪಲಾಯನವಾದ ಅನುಸರಿಸುತ್ತಿದ್ದು, ಅವರ ವಿರುಧ್ದ, ವಂಚನೆ ಪ್ರಕರಣ ದಾಖಲಿಸಿ ಕಾನೂನು ಹೋರಾಟ ಮಾಡಲಾಗುವುದೆಂದು ಅವರು ತಿಳಿಸಿದ್ದಾರೆ. ಕಂಪನಿ ಹಾಗೂ ಕಂಪನಿಯ ಏಜೆಂಟರುಗಳು ಮುಗ್ದರನ್ನು ವಂಚಿಸುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಹಣ ಕಟ್ಟಿರುವುವವರು ನ್ಯಾಯ ಒದಗಿಸಿಕೊಡಿ, ಕಟ್ಟಿರುವ ಹಣ ವಾಪಾಸು ಕೊಡಿಸಿರೆಂದು ನೆರವು ಕೋರಿಬಂದಿದ್ದಾರೆ ಅವರ ಮಾಹಿತಿ ಮೇರೆಗೆ ದೂರುಗಳನ್ನು ಆಧರಿಸಿ ಪ್ರಕರಣವನ್ನು ಪರಿಶೀಲಿಸಿಅಧ್ಯಯನಮಾಡಿ ನಂತರ ಕಾನೂನು ಹೋರಾಟ ಮಾಡುವ ಮೂಲಕ ನೊಂದವರಿಗೆ ನೆರವನ್ನು ನೀಡಲಾಗುವುದೆಂದರು. ಸೈಯದ್ ಷಫೀವುಲ್ಲಾ,ಮಹಮದ್ ಇಲಿಯಾಸ್,ಅಪ್ಪೇನಳ್ಳಿಇನಾಯತುಲ್ಲಾಖಾನ್,ಸಲಾಂಸಾಬ್,ಹೊನ್ನೂರಾಭೀ ಸೇರಿದಂತೆ ಸುಮಾರು ಐವತ್ತಕ್ಕೂ ಹೆಚ್ಚು ಶೇರುದಾರರು ಉಪಸ್ಥಿತರಿದ್ದರು.