ನವ ವಸಂತಕ್ಕೆ ಕಾಲಿಟ್ಟ 18 ಜೋಡಿ ವಧು-ವರರು

ಲೋಕದರ್ಶನ ವರದಿ

ಕಂಪ್ಲಿ 14: ಸಾಮೂಹಿಕ ವಿವಾಹಗಳು ಹಮ್ಮಿಕೊಳ್ಳುವುದರಿಂದ ಆಥರ್ಿಕ ಹೊರೆಯನ್ನು ಕಡಿಮೆಮಾಡಬಹುದು ಎಂದು ಹೆಬ್ಬಾಳ್ ಬ್ರಹನ್ಮಠ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು. 

ಸಮೀಪದ ಸಣಾಪುರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ಬಳಿ ಶ್ರೀ ಚಿಕ್ಕೇನಕೊಪ್ಪ ಚನ್ನವೀರ ಶರಣರ 24ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಜರುಗಿದ 18 ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೂತನ ದಂಪತಿಗಳಿಗೆ ಆಶರ್ಿವದಿಸಿ ಮಾತನಾಡಿ ಉತ್ತಮ ಸಹಬಾಳ್ವೆಯಿಂದ ಕುಟಂಬವನ್ನು ನಡೆಸಿಕೊಂಡು ಹೋಗುವಲ್ಲಿ ನೂತನ ವಧುವರರು ಮುಂದಾಗಬೇಕು ಎಂದರು.

ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 18 ಜೋಡಿ ವಧು-ವರರು ನವ ವಸಂತಕ್ಕೆ ಕಾಲಿಟ್ಟರು. 

ಮೆರವಣಿಗೆ: ಶ್ರೀ ಚಿಕ್ಕೇನಕೊಪ್ಪ ಚನ್ನವೀರ ಶರಣರ ಭಾವಚಿತ್ರ ಮೆರವಣಿಗೆಯನ್ನು ಗ್ರಾಮದ ಮುಖ್ಯ ಬೀದಿಗಳಲ್ಲಿ ನಡೆಸಲಾಯಿತು. ಮೆರವಣಿಗೆಯಲ್ಲಿ ಕಳಸಗನ್ನಡಿ, ಮಂಗಲ ವಾಧ್ಯಗಳು, ಭಜನೆ ಮಂಡಳಿ ಪಾಲ್ಗೊಂಡಿದ್ದರು.

ಸಜ್ಜಲಗುಡ್ಡ ಸಂಸ್ಥಾನಮಠ ದೊಡ್ಡಬಸವಾರ್ಯತಾತನವರು, ಬುಕ್ಕಸಾಗರದ ಕರಿಸಿದ್ದೇಶ್ವರ ಸ್ವಾಮಿಗಳು, ಎಂ.ಈಶಣ್ಣ ತಾತ.ಸಿದ್ದಯ್ಯತಾತ ಪದ್ಮಯ್ಯಸಾಮಿ .   ದೇವಸಮುದ್ರ ಜಿಪಂ ಸದಸ್ಯ ಕೆ.ಶ್ರೀನಿವಾಸರಾವ್, ಪುರಸಭೆ ಅಧ್ಯಕ್ಷ ಎಂ.ಸುಧೀರ್, ವೀರಭದ್ರೇಶ್ವರ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ, ಸಣಾಪುರ ಗ್ರಾಪಂ  ಸದಸ್ಯ ವೈ.ಮಹಾಂತೇಶ್,  ನಿದರ್ೇಶಕ ಪಿ.ಚಿಕ್ಕಣ್ಣ, ಮುಖಂಡರಾದ  ಜಿ.ಶರಣಪ್ಪ, ಜಿ.ಈಶಪ್ಪ, ಜಿ.ಕುಮಾರಸ್ವಾಮಿ,  ಕೆ.ಮರಿಸ್ವಾಮಿ, ಕೆ.ಬಸವರಾಜ, ಕನಕಗಿರಿ ರೇಣುಕಗೌಡ, ಇಟಗಿ ಬಸವರಾಜಗೌಡ,  ವಿದ್ಯಾಧರ, ಶ್ರೀ ಚಿಕ್ಕೇನಕೊಪ್ಪ ಚನ್ನವೀರ ಶರಣರ ಬಳಗದವರು ಹಾಗೂ ಸಕಲ ಸದ್ಭಕ್ತರು ಪಾಲ್ಗೊಂಡಿದ್ದರು.