ಲೋಕದರ್ಶನ ವರದಿ
ಹೂವಿನಹಡಗಲಿ 06:ಆಧುನಿಕ ಜಗತ್ತಿನಲ್ಲಿ ಧರ್ಮ ಸಂಸ್ಕೃತಿ ಮತ್ತು ಪರಂಪರೆಗಳ ಬಗ್ಗೆ ನಿರ್ಲಕ್ಷ್ಯ ಮನೋಭಾವ ಹೆಚ್ಚುತ್ತಿರುವುದು ಒಳ್ಳೆಯದಲ್ಲ. ಸಮಾಜದಲ್ಲಿ ಹೆಚ್ಚು ಸಂಘರ್ಷಗಳು ಬೆಳೆಯುತ್ತಿರುವುದು ನೋವಿನ ಸಂಗತಿ ಸಮಾಜದಲ್ಲಿ ಶಾಂತಿ ಸೌಹರ್ಾದ್ರತೆ ಬೆಳೆಸುವುದೇ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಭಿಪ್ರಾಯಪಟ್ಟರು.
ತಾಲೂಕಿನ ಪುರ ಗ್ರಾಮದಲ್ಲಿ ಬುಧವಾರ ಸೋಗಿ ಪುರವರ್ಗ ಕಟೇಮನೆ ಮಠದ ಗುರು ಲಿಂ.ಸಿದ್ದವೀರ ಶಿವಾಚಾರ್ಯ ಸ್ವಾಮೀಜಿಗಳ 42ನೇ ಸಂಸ್ಮರಣೋತ್ಸವ, ಲಿಂ.ಚಂದ್ರಶೇಖರ ಸ್ವಾಮೀಜಿವರ 4ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಆಶೀವರ್ಾಚನ ನೀಡಿದರು.
ಮುಕ್ತಿಮಂದಿರ ವಿಮಲರೇಣುಕಾ ಸ್ವಾಮೀಜಿ, ಮೂಲಿಗದ್ದೆಮಠ ಅಭಿನವ ಚನ್ನಬಸವಸ್ವಾಮೀಜಿ, ಗವಿಮಠದ ಶಾಂತವೀರಸ್ವಾಮೀಜಿ ಸೇರಿದಂತೆ ಹರ-ಗುರು ಚರಮೂತರ್ಿಗಳು ಆಶೀವರ್ಾಚನ ನೀಡಿದರು.
ಹಿರೇಮಲ್ಮಠ ಹೊನ್ನಾಳಿ ಡಾ.ಒಡೆಯರ ಚನ್ನಮಲ್ಲಿಕಾಜರ್ುನ, ಪುರದ ಪಟ್ಟದ ಅಭಿನವ ಸಿದ್ದವೀರ ಸ್ವಾಮೀಜಿಗಳ ನೇತೃತ್ವದಲ್ಲಿ ಧಾಮರ್ಿಕ ಕಾರ್ಯಕ್ರಮಗಳು ಜರುಗಿದವು. ಹರಪನಹಳ್ಳಿ ತೆಗ್ಗಿನ ಮಠದ ವರಸದ್ಯೋಜಾತ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಮುಂಡರಗಿ ಪ್ರಾಧ್ಯಪಕ ಆರ್.ಎಸ್.ಪೊಲೀಸ್ ಪಾಟೀಲ ಮಾತನಾಡಿದರು. ತಹಶೀಲ್ದಾರ ಕೆ.ರಾಘವೇಂದ್ರರಾವ್, ತಾ.ಪಂ.ಇಒ ಯು.ಎಚ್.ಸೋಮಶೇಖರ, ತಾ.ಪಂ.ಅಧ್ಯಕ್ಷೆ ಶಾರದಮ್ಮ, ಬಿ.ಹನುಮಂತಪ್ಪ, ತಾ.ಪಂ.ಸದಸ್ಯೆ ಲಲಿತಾಬಾಯಿ, ಜಿ.ಪಂ.ಸದಸ್ಯೆ ಲಲಿತಾಬಾಯಿ ಇದ್ದರು.ವೇದಘೋಷ ಎ.ಎಂ.ಹಾಲಯ್ಯ ಶಾಸ್ತ್ರೀಗಳು, ಪ್ರಾರ್ಥನೆ ಚಂದ್ರಶೇಖರ ಶಿವಾಚಾರ್ಯ ಗಾನ ಕಲಾ ಸಂಘ ಪುರ, ಸಂಗೀತ ಪ್ರಕಾಶ್ ಜೈನ್ ಸಂಗಡಿಗರು ನಡೆಸಿದರು. ಗೌರೀಶ ಅಂಗಡಿ ಸ್ವಾಗತಿಸಿದರು.ಪ್ರೊ.ಶಾಂತಮೂತರ್ಿ ಬಿ.ಕುಲಕಣರ್ಿ ಪ್ರಾಸ್ತಾವಿಕ ಮಾತನಾಡಿದರು.ಪ್ರಭು ಸೊಪ್ಪಿನ ನಿರೂಪಿಸಿದರು.
ಸಾಮೂಹಿಕ ವಿವಾಹದಲ್ಲಿ 15ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಪಟ್ಟದ ಚಂದ್ರಶೇಖರ ಶಿವಾಚಾರ್ಯ ಶ್ರೀ ಪ್ರಶಸ್ತಿಯನ್ನು ಖ್ಯಾತ ಜಾನಪದ ವಿದ್ವಾಂಸರಾದ ಡಾ.ಶಂಭು ಬಳಿಗಾರ ಅವರಿಗೆ ನೀಡಲಾಯಿತು. ಇದಕ್ಕೂ ಮೊದಲು ಸಿದ್ದವೀರ ಶಿವಾಚಾರ್ಯ ಸ್ವಾಮೀಜಿ ಮತ್ತು ಲಿಂ.ಚಂದ್ರಶೇಖರ ಸ್ವಾಮೀಜಿಗಳ ಭಾವಚಿತ್ರ ಪಲ್ಲಕ್ಕಿ ಉತ್ಸವ ನಡೆಯಿತು.