14 ಮತಯಂತ್ರ, 7 ಕಂಟ್ರೋಲ್ ಯುನಿಟ್, 41 ವಿವಿಪ್ಯಾಟ್ಗಳ ಬದಲಾವಣೆ

ಧಾರವಾಡ .23 ಧಾರವಾಡ ಜಿಲ್ಲೆಯ ವಿವಿಧ ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಆರಂಭವಾದ ಮತದಾನ ಕಾರ್ಯವು ಸಂಜೆ 6 ಗಂಟೆವರೆಗೆ ಶಾಂತಿಯುತವಾಗಿ ಜರುಗಿತು.

ಬೆಳಿಗ್ಗೆಯಿಂದ ಸಂಜೆ 5 ಗಂಟೆವರಗೆ ವಿವಿಧ ಮತಗಟ್ಟೆಗಳಲ್ಲಿರುವ ಒಟ್ಟು 14 ಮತಯಂತ್ರ 7 ಕಂಟ್ರೋಲ್ ಯುನಿಟ್ ಮತ್ತು 41 ವಿವಿಪ್ಯಾಟ್ಗಳಲ್ಲಿ ತಾಂತ್ರಿಕ ಅಡಚಣೆ ಉಂಟಾಗಿತ್ತು. ತಕ್ಷಣ ಇಂಜನೀಯರಗಳ ತಂಡ ಹಾಗೂ ತಾಂತ್ರಿಕ ಸಿಬ್ಬಂದಿ ಅವುಗಳನ್ನು ಬದಲಾಯಿಸಿ ಸುಗಮ ಮತದಾನ ಕಾರ್ಯಕ್ಕೆ ಸಹಕರಿಸಿದರು.

    ಜಿಲ್ಲಾ ಚುನಾವಣಾಧಿಕಾರಿಗಳ ಉಸ್ತುವಾರಿ: ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ ಅವರ ನಾಯಕತ್ವದಲ್ಲಿ ವಿವಿಧ ಅಧಿಕಾರಿ ಮತ್ತು ಸಿಬ್ಬಂದಿಗಳು ಮತದಾನ ಪ್ರಗತಿಯನ್ನು ಸಮರ್ಪಕವಾಗಿ ಸಂಗ್ರಹಿಸಿ, ಪ್ರತಿ ಗಂಟೆಗೊಮ್ಮೆ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದರು. 

         ಇದಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸ್ಥಾಪಿಸಲಾಗಿದ್ದ ಮತದಾನ ದಿನದ ಕಾರ್ಯಗಳ ವೀಕ್ಷಣಾ ಕೇಂದ್ರದಲ್ಲಿ  ಸ್ವತಃ ಜಿಲ್ಲಾಧಿಕಾರಿಗಳೇ ಉಸ್ತುವಾರಿ ವಹಿಸಿ ಸೆಕ್ಟ್ರ್ ಅಧಿಕಾರಿಗಳಿಗೆ, ಸಹಾಯಕ ಚುನಾವಣಾಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.

ಅಪರ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ, ಎನ್.ಐ.ಸಿ ಅಧಿಕಾರಿ ಮೀನಾಕುಮಾರಿ, ಮಾಲಿನ್ಯ ನಿಯಂತ್ರಣಾಧಿಕಾರಿ ವಿಜಯಕುಮಾರ ಕಡಕ್ಭಾವಿ, ಆಧಾರ ಕಾರ್ಡ ಸಂಯೋಜಕ ರುದ್ರೇಶ ಸೇರಿದಂತೆ ಮತ್ತಿತರ ಅಧಿಕಾರಿಗಳು, ಸಿಬ್ಬಂದಿ  ಜಿಲ್ಲಾಧಿಕಾರಿಗಳಿಗೆ ಸಹಕಾರ ನೀಡಿದರು.