ಡಾಽ ಮಹಾಂತ ಶಿವಾಚಾರ್ಯ ಮಹಾಸ್ವಾಮೀಜಿಯವರ 12ನೇ ವರ್ಷದ ಪುಣ್ಯಸ್ಮರಣೋತ್ಸವ

12th Anniversary of Dr. Mahanta Shivacharya Mahaswamiji

ಡಾಽ ಮಹಾಂತ ಶಿವಾಚಾರ್ಯ ಮಹಾಸ್ವಾಮೀಜಿಯವರ 12ನೇ ವರ್ಷದ ಪುಣ್ಯಸ್ಮರಣೋತ್ಸವ

ಹಾವೇರಿ, 04: ದಿನಾಂಕ 04-02-2025ರ ಮಂಗಳವಾರದಂದು ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಲಿಂಗೈಕ್ಯ ಡಾಽ ಮಹಾಂತ ಶಿವಾಚಾರ್ಯ ಮಹಾಸ್ವಾಮೀಜಿಯವರ 12ನೇ ವರ್ಷದ ಪುಣ್ಯಸ್ಮರಣೋತ್ಸವವನ್ನು ಹರಿಹರದ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಜಗದ್ಗುರುಗಳವರ ಕರ್ತೃಗದ್ದುಗೆಗೆ  ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ ಹಾಗೂ ಸಮಾಜ ಬಾಂಧವರಿಂದ ಜಗದ್ಗುರು ಮಹಾಂತ ಶ್ರೀಗಳ ಪಂಚಲೋಹದ ಮೂರ್ತಿ ಮತ್ತು ಶ್ರೀಗಳ ಪಾದುಕೆಯ ಪಲ್ಲಕ್ಕಿ ಉತ್ಸವ ಪಲ್ಲಕ್ಕಿ ಸೇವೆ : ಶ್ರೀ ಪಿ.ವಿ.ರವಿಕುಮಾರ್ ಪೂಜಾರ್ ಮತ್ತು ದೊಡ್ಡಬಾತಿ ಗ್ರಾಮಸ್ಥರಿಂದ  ದಾಸೋಹ ಸೇವೆ : ಶ್ರೀ ಕೆ.ಸಿ. ಉಮಾಕಾಂತ್ ನಿ. ಶಿಕ್ಷಕರು, ಮತ್ತು ಮಕ್ಕಳು, ದಾವಣಗೆರೆ  ಶ್ರೀಗದ್ದುಗೆ ಅಲಂಕಾರ ಸೇವೆ : ಶ್ರೀ ಜಿ . ಷಣ್ಮುಖಪ್ಪ ಮೇಷ್ಟ್ರು, ಮತ್ತು ಮಕ್ಕಳು, ದಾವಣಗೆರೆ. ಸಮಾಳ ಮತ್ತು ನಂದಿಕೂಲು ಸೇವೆ : ಶ್ರೀ ಎನ್‌. ಶಿವಾನಂದಪ್ಪ ಮತ್ತು ಮಕ್ಕಳು, ಗೌರಿಹಳ್ಳಿ ಹಾಗೂ ಬೆಂಡಿಗೆರೆ ಗ್ರಾಮದಸಮಾಜ ಬಾಂಧವರಿಂದ ಮಾಡಲಾಯಿತು. 

 ಈ ಸಂದರ್ಭದಲ್ಲಿ ಶ್ರೀ ಪೀಠದ ಧರ್ಮದರ್ಶಿಗಳು ಮತ್ತು ತಾಲೂಕು ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರುಗಳು ಶ್ರೀ ಪೀಠದ ಸದ್ಭಕ್ತರು ಉಪಸ್ಥಿತರಿದ್ದರು.