ಲೋಕದರ್ಶನ ವರದಿ
ತಾಳಿಕೋಟೆ 01: ಮಗುವಿನ ಲೀವರ್ನಲ್ಲಿ ಕಾಣಸಿಕೊಂಡ ದೋಷದಿಂದ ಅಘಾತಗೊಂಡು ಹಣ ಸಂಗ್ರಹಕ್ಕಾಗಿ ಅಲೇದಾಡುತ್ತಿರುವ ಕುಟುಂಭಕ್ಕೆ ಮಾನವೀಯತೆಯ ನೆರವು ಒದಗಿಸಲು ತಾಲೂಕಾ ಕನರ್ಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬೀದಿ ಬೀದಿಯಲ್ಲಿ ಹಣ ಸಂಗ್ರಹಿಸಿ ಕಲ್ಲೂರ ಕುಟುಂಬಕ್ಕೆ 1 ಲಕ್ಷ ರೂ. ನೆರವು ಕಲ್ಪಿಸಿಕೊಟ್ಟಿದ್ದಾರೆ.
ಈ ಕುರಿತು ಪತ್ರಿಕೆಯಲ್ಲಿ ದಿ. 23 ರಂದು ಕರಳು ಕುಡಿ ಉಳಿಸಿಕೊಳ್ಳಲು ಪಾಲಕರ ಹರಸಾಹಸ ಎಂಬ ಶಿಷರ್ಿಕೆಯಡಿ ಶ್ರೀಮತಿ ರೇಣುಕಾ ಪರಮಾನಂದ ಕಲ್ಲೂರ ದಂಪತಿಯ ಕರಳು ಕುಡಿ ಸುದರ್ಶನನ ನೇರವಿನ ಮೊರೆಗಾಗಿ ಮಾನವೀಯತೆ ಮನಕುಲಕುವ ವರಧಿಯನ್ನು ಆಧರಿಸಿ ಪರಿಹಾರ ನಿಧಿ ಸಂಗ್ರಹದ ಡಬ್ಬಿಯೊಂದಿಗೆ ಕರವೇ ಪದಾಧಿಕಾರಿಗಳು ರಸ್ತೆಯ ಬಧಿಯಲ್ಲಿಯ ಪುಟ್ಪಾತ್ ವ್ಯಾಪಾರಸ್ಥರ ಬಳಿ ಹಾಗೂ ಅಂಗಡಿ ಮುಗ್ಗಟ್ಟುಗಳಿಗೆ ತೆರಳಿ ಕೈಲಾದ ಮಟ್ಟಿಗೆ ನೆರವಿನ ಹಸ್ತ ಚಾಚಿ ವಿನಂತಿಸಿದ್ದರು.
ಶುಕ್ರವಾರರಂದು ಉಪತಹಶಿಲ್ದಾರ ಚವ್ಹಾಣ, ಪೊಲೀಸ್ಠಾಣೆಯ ಎಎಸ್ಆಯ್ ಕೆ.ಬಿ.ರಡ್ಡಿ ಅವರ ಸಮ್ಮುಖದಲ್ಲಿ ಕರವೇ ಕಾರ್ಯಕರ್ತರು ಸಂಗ್ರಹಿಸಿದ 1 ಲಕ್ಷ ರೂ. ಹಣವನ್ನು ಲೀವರ್ ಸಮಸ್ಯೆಗೊಳಗಾದ ಸುದರ್ಶನ ಕಲ್ಲೂರ ಅವರ ತಾಯಿ ಶ್ರೀಮತಿ ರೇಣುಕಾ ಕಲ್ಲೂರ ಅವರಿಗೆ ಹಸ್ತಾಂತರಿಸಿದರು.
ಈ ಸಮಯದಲ್ಲಿ ಕರವೇ ತಾಲೂಕಾ ಅಧ್ಯಕ್ಷ ನಿಸಾರ ಬೇಪಾರಿ ಅವರು ಮಾತನಾಡಿ ಸುದರ್ಶನ ಕಲ್ಲೂರ ಬಾಲಕನಿಗೆ ಲೀವರ್ನಲ್ಲಿ ಕಾಣಿಸಿಕೊಂಡಿರುವ ದೋಷದಿಂದ ಲೀವರ್ ಬದಲಾವಣೆ ಅವಶ್ಯಕವಾಗಿರುವದರಿಂದ ತಾಯಿಯೇ ತನ್ನ ಜೀವವನ್ನು ಒತ್ತೆ ಇಟ್ಟು ಲೀವರ್ ನೀಡಲು ಮುಂದಾಗಿದ್ದರೂ ಈ ಬದಲಾವಣೆಗೆ ಸುಮಾರು 15 ರಿಂದ 20 ಲಕ್ಷ ರೂ. ವೆಚ್ಚ ತಗಲುತ್ತದೆ ಎಂಬ ವೈಧ್ಯರು ಹೇಳಿದ್ದರಿಂದ ಹಣ ಹೊಂದಿಸುವ ಸಲುವಾಗಿ ಪಾಲಕರು ದಾನಿಗಳ ಮನೆ ಭಾಗಿಲಿಗೆ ತಿರುಗಾಡುತ್ತಿದ್ದರೂ ಅದರ ಜೊತೆಗೆ ಕರವೇ ಸಂಘಟನೆಯಿಂದ ಕೈಲಾದ ಮಟ್ಟಿಗೆ ಸಹಾಯ ನೀಡಬೇಕೆಂಬ ಉದ್ದೇಶದೊಂದಿಗೆ ಸಂಘಟನೆಯ ಕಾರ್ಯಕರ್ತರೆಲ್ಲರೂ ಸೇರಿ ಬೀದಿ ಬೀದಿಯಲ್ಲಿ ಹಾಗೂ ಪುಟ್ಪಾಥ್ ವ್ಯಾಪಾರಸ್ತರ ಬಳಿ ತೆರಳಿ ಅವರ ಕೈಲಾದ ಸಹಾಯವನ್ನು ಅಪೇಕ್ಷೀಸಿದೆವು ಅದರಂತೆ ಈಗ ದಾನಿಗಳಿಂದ 1 ಲಕ್ಷ ರೂ. ಸಂಗ್ರಹ ಗೊಂಡಿದೆ ಈ ಒಂದು ಸಂಘಟನೆಯ ಕಾರ್ಯಕ್ಕೆ ಸಹಕರಿಸಿದ ಸಾರ್ವಜನಿಕರಿಗೆ ಮತ್ತು ವ್ಯಾಪಾರಸ್ಥರಿಗೆ ಆಭಾರಿಯಾಗಿದ್ದೇವೆಂದರು.
ಕರವೇ ಸಂಘಟನೆಯ ತಾಲೂಕಾ ಉಪಾಧ್ಯಕ್ಷ ಜೈಭೀಮ ಮುತ್ತಗಿ, ಮಹಿಳಾ ಘಟಕದ ಮುಖಂಡೆ ಕು.ಶ್ವೇತಾ ಯರಗಲ್ಲ ಮಾತನಾಡಿ ಬಡತನದಲ್ಲಿಯೇ ಬೆಂದು ಹೋಗಿದ್ದ ಕಲ್ಲೂರ ಕುಟುಂಭದ ಸುದರ್ಶನ ಬಾಲಕನಿಗೆ ಲೀವರ್ನಲ್ಲಿ ಕಾಣಿಸಿಕೊಂಡಿದ್ದ ದೋಷ ದೇವರ ಸತ್ವ ಪರಿಕ್ಷೆ ಎಂಬುದಾಗಿದೆ ಇಂತಹ ಬಡತನದಲ್ಲಿ ಬೆಂದು ಮಗನ ಬಧುಕಿಗಾಗಿ ಅಲೇದಾಡುತ್ತಿರುವ ಕುಟುಂಬದ ಕುರಿತು ಪತ್ರಿಕೆಯಲ್ಲಿ ಮನಕುಲಕುವಂತಹ ವರಧಿಯನ್ನು ಪ್ರಕಟಿಸಿ ಎಲ್ಲರ ಕಣ್ತೇರಿಸುವಂತಹ ಕಾರ್ಯ ಮಾಡಿದೆ ಮಾಧ್ಯಮಕ್ಕೂ ಹಾಗೂ ಸಹಕರಿಸಿದ ಎಲ್ಲ ವ್ಯಾಪಾರಸ್ಥರಿಗೆ ಕೃತಜ್ಞತೆ ಸಲ್ಲಿಸುವದಾಗಿ ತಿಳಿಸಿದರು.
ಉಪ ತಹಶೀಲ್ದಾರ ಚವ್ಹಾಣ ಅವರು ಮಾತನಾಡಿ ಮಗನನ್ನು ಬಧುಕಿಸಿಕೊಳ್ಳಲು ಅಲೇದಾಡುತ್ತಿರುವ ಕಲ್ಲೂರ ಕುಟುಂಭಕ್ಕೆ ನೇರವು ಒದಗಿಸುವ ಸಲುವಾಗಿ ಮಾನವೀಯತೆಯ ಆಧಾರದ ಮೇಲೆ ಕರವೇ ಕಾರ್ಯಕರ್ತರೆಲ್ಲರೂ ಬೀದಿ ಬೀದಿಯಲ್ಲಿ ದೇಣಿಗೆ ಸಂಗ್ರಹದ ಡಬ್ಬಿಯೊಂದಿಗೆ ಸಂಚರಿಸಿ ಹಣ ಸಂಗ್ರಹಿಸಲು ಮುಂದಾಗಿರುವದು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವಂತಹ ಕಾರ್ಯವಾಗಿದೆ ಎಂದರು.
ಈ ಸಮಯದಲ್ಲಿ ಕರವೇ ತಾಲೂಕ್ಷಾಧ್ಯಕ್ಷ ನಿಸಾರ ಬೇಪಾರಿ, ಉಪಾಧ್ಯಕ್ಷ ಪ್ರಭು ಪಾಟೀಲ, ಅಬುಬಕರ ಲಾಹೋರಿ, ನಬಿ ಲಾಹೋರಿ, ಮಂಜು ಬಡಿಗೇರ, ನಾಗರಾಜ ಪತ್ತಾರ, ಬಾಷಾ ಕಿತ್ತೂರ, ಬಾಷಾ ಹುಣಸಗಿ, ನಬಿ ಮೇತ್ರಿ, ಪ್ರಭು ಅಣ್ಣೀಗೇರಿ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ತಳವಾರ, ಟಿಪ್ಪು ಕಾಳಗಿ, ಮನೋಜ್ ಹಂಚಾಟೆ, ಗೀರಿಶ ಕನಕರಡ್ಡಿ, ಮಡಿವಾಳ ಕೊಂಡಗೂಳಿ, ರಾಜು ಮೂಕೀಹಾಳ, ಮೊದಲಾದವರು ಭಾಗವಹಿಸಿದ್ದರು.