. ಮನೆಬಾಗಲಿಗೆ ಮದ್ಯ ಸರ್ಕಾರದ ನಿರ್ಧಾರಕ್ಕೆ ಕೇರಳ ಹೈಕೋರ್ಟ್ ತಡೆಯಾಜ್ಞೆ

ತಿರುವನಂತಪುರ, ಏ 2, ವೈದ್ಯರ ಸಲಹಾ ಚೀಟಿ ಆಧರಿಸಿ ಮನೆಬಾಗಲಿಗೆ ಮದ್ಯವನ್ನು ತಲುಪಿಸುವ ಕೇರಳ ಸರ್ಕಾರದ  ನಿರ್ಧಾರಕ್ಕೆ  ಅಲ್ಲಿನ  ಹೈಕೋರ್ಟ್ ಗುರುವಾರ ತಡೆಯಾಜ್ಞೆ ವಿಧಿಸಿದೆ.ರಾಜ್ಯ ಸರ್ಕಾರದ  ಆದೇಶಕ್ಕೆ ಹೈಕೋರ್ಟ್ ಮೂರು ವಾರಗಳ  ತಡೆನೀಡಿದೆ.  ಮನೆಬಾಗಿಲಿಗೆ ಮದ್ಯ ತಲುಪಿಸುವ  ವಚ್ಚವಾಗಿ ಚೀಟಿ ಹೊಂದಿರುವ ವ್ಯಕ್ತಿಯಿಂದ  ೧೦೦ ರೂಪಾಯಿ ಸೇವಾ ಶುಲ್ಕ  ವಿಧಿಸಲು  ಸರ್ಕಾರ ನಿರ್ಧರಿಸಿತ್ತು. ವೈದ್ಯರ ಸಲಹಾ ಚೀಟಿ  ಹೊಂದಿರುವ ಪ್ರತಿವ್ಯಕ್ತಿಗೆ  ಮೂರು ಲೀಟರ್  ಭಾರತದಲ್ಲಿ ತಯಾರಿಸಿದ ವಿದೇಶಿ ಮದ್ಯ  ಪೂರೈಸಲು  ಅವಕಾಶ ಕಲ್ಪಿಸಲಾಗಿತ್ತು. ಆದರೆ, ಬೀಯರ್, ವೈನ್  ಪೂರೈಕೆಗೆ  ಅನುಮತಿ  ನಿರಾಕರಿಸಲಾಗಿತ್ತು.ಮನೆ ಬಾಗಲಿಗೆ  ಮದ್ಯ ತಲುಪಿಸುವ  ಸರ್ಕಾರದ  ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ವೈದ್ಯರು ಬುಧವಾರ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದ್ದರು  ಸರ್ಕಾರದ ನಿರ್ಧಾರದ ವಿರುದ್ದ  ವೈದ್ಯರು ಹಾಗೂ ಮದ್ಯ ನಿಷೇಧ  ಬೆಂಬಲಿತ ಕಾರ್ಯಕರ್ತರು  ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು.