ಗಂಗಾವತಿ : ಶಂಕರರ ತತ್ವ ಸಿದ್ಧಾಂತ ಸರ್ವಕಾಲಕ್ಕೂ ಸಮ್ಮತ

ಲೋಕದರ್ಶನ ವರದಿ

ಗಂಗಾವತಿ 12: ಅವಸಾನದ ಅಂಚಿನಲ್ಲಿದ್ದ ಹಿಂದೂ ಧರ್ಮವನ್ನು ಪುನರ್ ಸ್ಥಾಪಿಸುವುದರ ಮೂಲಕ ಅಧ್ವೈತ ಸಿದ್ಧಾಂತವನ್ನು ವಿಶ್ವಕ್ಕೆ ಪಸರಿಸಿದ ಕೀತರ್ಿ ಜಗದ್ಗುರು ಶ್ರೀಶಂಕರಾಚಾರ್ಯರಿಗೆ ಸಲ್ಲಲಿದ್ದು, ಅವರ ತತ್ವ ಸಿದ್ಧಾಂತ ಸರ್ವಕಾಲಕ್ಕೂ ಸಮ್ಮತವಾಗಿದೆ ಎಂದು ಶೃಂಗೇರಿ ಶಾರದಾ ಪೀಠದ ಗಂಗಾವತಿ ಶಾಖಾಮಠದ ಧರ್ಮದಶರ್ಿ ನಾರಾಯಣ ವೈದ್ಯ ಹೇಳಿದರು.

ಅವರು ಗುರುವಾರದಂದು ಶಾರದಾ ನಗರದ ಶಂಕರ ಮಠದಲ್ಲಿ ಆಯೋಜಿಸಿದ ಶ್ರೀಶಂಕರಾಚಾರ್ಯರ ಜಯಂತ್ಯೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬ್ರಹ್ಮಸತ್ಯ ಜಗನ್ ಮಿಥ್ಯ ಅಹಂಬ್ರಹ್ಮಾಸ್ಮಿ ಹಾಗೂ ಆತ್ಮ ಪರಮಾತ್ಮ ಕುರಿತು ಅವರ ಸಂದೇಶಗಳು ಮಾನವ ಜನಾಂಗಕ್ಕೆ ದಾರಿದೀಪವಾಗಿವೆ.ಜಯಂತ್ಯೋತ್ಸವ ಪ್ರಯುಕ್ತ ಎರಡೆ ಉಪನಯನ ಕಾರ್ಯ ಜರುಗಿದ್ದು, ಮುಂದಿನ ದಿನಗಳಲ್ಲಿ ವಟುಗಳು ಸಂಖ್ಯೆ ಹೆಚ್ಚಳಕ್ಕೆ ವಿಪ್ರ ಸಮಾಜ ಬಾಂಧವರು ಮುಂದಾಗಬೇಕೆಂದರು.

ವೇದಾಬಾಯಿ ಬಾಲಕೃಷ್ಣ ದೇಸಾಯಿ ಮಾತನಾಡಿ ಧರ್ಮದ ರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದ್ದು, ಧರ್ಮ ಜನರನ್ನು ಒಂದುಗೂಡಿಸುವ ಸಾಧನವಾಗಿದೆ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ದೊರೆಯಲಿದ್ದು, ಪಾಲಕರು ಮಕ್ಕಳಿಗೆ ಬಾಲ್ಯದಿಂದಲೇ ಗುಣಮಟ್ಟದ ಸಂಸ್ಕಾರ ಕಲ್ಪಿಸಲು ಮುಂದಾಗಬೇಕೆಂದು ತಿಳಿಸಿದರು. ಇದಕ್ಕೂ ಮುಂಚೆ ದೇವಸ್ಥಾನದ ಅರ್ಚಕ ಕುಮಾರ ಭಟ್ ಹನುಮೇಶರವರು ಪಂಚಾಮೃತ ಅಬಿಷೇಕ, ರುದ್ರಾಭಿಷೇಕ, ತೊಟ್ಟಿಲು ಸೇವೆ, ಪಾಲಕಿ ಉತ್ಸವ, ಅಷ್ಟಾವಧಾನ ಸೇವೆ ಮತ್ತಿತರರ ಧಾಮರ್ಿಕ ಪೂಜಾ ಕಾರ್ಯಕ್ರಮಗಳನ್ನು ನಡೆಸಿದರು.ರಾಮಶೇಷ ಅಷ್ಟೋತ್ತರ ಪಠಣವನ್ನು ನಡೆಸಿದರು. ವೇ. ಮಹೇಶಭಟ್ ಜೋಷಿ ಋತಿಜರುತಂಡ ಉಪನಯನವನ್ನು ನಡೆಸಿಕೊಟ್ಟರು. ಈ ಸಮಾರಂಭದಲ್ಲಿ ಶೇಷಗಿರಿ ಪದಕಿ, ಜೆ. ಸುಬ್ಬಾರಾವ್, ದತ್ತಾತ್ರೇಯ ತಾಹಸೀನ್, ಬಾಲಕೃಷ್ಣ ದೇಸಾಯಿ, ಶ್ರೀಪಾದ ಮುಧೋಳಕರ್, ಸುದರ್ಶನ ವೈದ್ಯ, ಶ್ರೀನಿವಾಸ ಕರಮುಡಿಕರ್ ಮತ್ತಿತರರು ಉಪಸ್ಥಿತರಿದ್ದರು.