ಲೋಕದರ್ಶನ ವರದಿ
ಬ್ಯಾಡಗಿ08: ಪಟ್ಟಣದ ನೆಹರು ನಗರದಲ್ಲಿರುವ ಏಳನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ದಾನಮ್ಮದೇವಿಯ ರಥೋತ್ಸವ ಕಾರ್ಯಕ್ರಮವು ನೆರವೇರಿತು.
ಸಾವಿರಾರು ಸಂಖ್ಯೆಯ ಭಕ್ತರ ನಡುವೆ ದಾನಮ್ಮದೇವಿ ರಥೋತ್ಸವವು ಸಾಂಗವಾಗಿ ನೆರವೇರಿತು. ಇದಕ್ಕಾಗಿ ಸುಂದರವಾದ ರಥವನ್ನು ನಿಮರ್ಿಸಲಾಗಿದ್ದು ದಾನಮ್ಮದೇವಿಯ ಉತ್ಸವ ಮೂತರ್ಿಯನ್ನು ಇಡಲಾಗಿತ್ತು. ಶೃಂಗಾರಗೊಂಡ ರಥವನ್ನು ವಿವಿಧ ರೀತಿಯ ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿತ್ತು. ಸಂಜೆ ಆರಂಭವಾದ ರಥೋತ್ಸವವು ದೇವಸ್ಥಾನದ ಸುತ್ತಲೂ 5 ಪ್ರದಕ್ಷಿಣೆಗಳನ್ನು ಹಾಕಿತಲ್ಲದೇ ಬಳಿಕ ದೇವಸ್ಥಾನದ ಆವರಣವನ್ನು ತಲುಪಿತು.
ಬೆಳ್ಳಿ ಪಲ್ಲಕ್ಕಿ: ರಥೋತ್ಸವದ ಮುಂಭಾಗದಲ್ಲಿಯೇ ದಾನಮ್ಮದೇವಿ ಮತ್ತೊಂದು ಮೂತರ್ಿಯನ್ನು ಕುಳ್ಳರಿಸಿ ಬೆಳ್ಳಿ ಪಲ್ಲಕಿಯು ಕೂಡ ರಥೋತ್ಸವದ ಜೊತೆಗೆ ಸಾಗಿತು, ಸಂಜೆ ನಡೆದ ಸುಂದರವಾದ ಜಾತ್ರಾ ಮಹೋತ್ಸವದ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಸಾವಿರಾರು ಸಂಖ್ಯೆಯ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು.
ಮಹಿಳೆಯರು ಎಳೆಯುವುದು ಇಲ್ಲಿನ ವಿಶೇಷ: ಬಹುತೇಕ ಜಾತ್ರಾ ಮಹೋತ್ಸವಗಳಲ್ಲಿ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ರಥವನ್ನು ಎಳೆಯುತ್ತಾರೆ, ಆದರೆ ಇಲ್ಲಿಮ ದಾನಮ್ಮದೇವಿಯ ರಥೋತ್ಸವನ್ನು ಮಹಿಳೆಯರೇ ಸೇರಿ ಎಳೆಯುವುದು ಇಲ್ಲಿನ ವಿಶೇಷವಾಗಿದೆ ದೇವಸ್ಥಾನದ ಆವರಣದಲ್ಲಿ ಸೇರಿದ್ದ ಸಾವಿರಾರು ಸಂಖ್ಯೆಯ ಮಹಿಳೆಯರು ಹಷರ್ೋದ್ಘಾರಗಳ ನಡುವೆ ಎಳೆದರು.
ಗುಡ್ನಾಪುರ ಮಾದರಿ: ಮಹಾರಾಷ್ಟ್ರದ ಗುಡ್ನಾಪುರದ ದಾನಮ್ಮದೇವಿ ರಥೋತ್ಸವಕ್ಕೂ ಪಟ್ಟಣದ ದಾನಮ್ಮದೇವಿಯ ರಥೋತ್ಸವಕ್ಕೂ ಒಂದಕ್ಕೊಂದು ಸಾಮೀಪ್ಯವಿದೆ, ಅಲ್ಲಿ ನಡೆಯುವ ಮಾದರಿಯಲ್ಲೇ ಎಲ್ಲಾ ಕಾರ್ಯಕ್ರಮಗಳನ್ನೂ ಇಲ್ಲಿಯೂ ನಡೆಸಿಕೊಂಡು ಬಂದಿದ್ದು ಪ್ರತಿ ವರ್ಷವೂ ಛಟ್ಟಿ ಅಮವಾಸ್ಯೆ ದಿನದಿಂದು ಸದರಿ ರಥೋತ್ಸವ ನೆರವೇರುತ್ತಾ ಬಂದಿದೆ.
ಜಾತ್ರಾ ಮಹೋತ್ಸವ ಸಂಪನ್ನ: ಸಕಲ ವಾದ್ಯ ವೈಭವಗಳೊಂದಿಗೆ ಅಲಂಕೃತಗೊಂಡ ದೇವಿಯ ರಥೋತ್ಸವ ಮುಕ್ತಾಯದ ಬಳಿಕ ಭಕ್ತರ ಹಷರ್ೋದ್ಘಾರಗಳ ನಡುವೆ ಕಳೆದ 11 ದಿನಗಳಿಂದ ನಡೆದುಕೊಂಡ ಬಂದಿದ್ದ ಜಾತ್ರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳು ಯಾವುದೇ ಅಡೆತಡೆಗಳಿಲ್ಲದೇ ಸಂಪನ್ನಗೊಂಡವು.