-ವಾಯ್.ವ್ಹಿ.ಕಂಬಾರ.
ರಾಮದುರ್ಗ
ವಿಮಲಮ್ಮ ಮಗಳಿಗೆ ಹೇಳ್ತಾ ಇದ್ದರು: "ಎವ್ವಾ, ನೀ ಯಾನ್ನರ್ೂ ಪ್ರೀತಿಸ್ಬೇಡ ನೀನಾತು ನಿನ್ನ ಅಭ್ಯಾಸ ಆತು ಮಾಡ್ಕೋತ ಇರು. ನೀ ಕಲತ ಮ್ಯಾಲ ನೀ ಎಂತಾವ ಅಂತಿ ನೋಡ್ ಅಂತಾವ್ನ ತಂದ ಮದುವಿ ಮಾಡ್ತೇವಿ ಅಲ್ಲಿವಗರ್ೂ ನೀ ಯಾನ್ನರ್ು ಪ್ರೀತ್ಸುವಂಗಿಲ್ಲಾ "ಎಂದು ಕಡಕ್ ಆಗಿ ಹೇಳಿದರು.
'ಹೂಂ', ನೀ ಹೇಳಿದ್ದ ನಾ ಮಾಡ್ಕೊತ್ತೇನಿ ನಾಳೆ ಏನಾರ ಆತಂದ್ರ ಅನುಭೋಸೋಕಿ ನಾನೋ....? ಇಲ್ಲಾ.,.ನೀನೋ......?".ಮಗಳು ಪ್ರಶ್ನೆ ಮಾಡಿದಳು ತಾಯಿಗೆ.
ವಿಮಲಮ್ಮನವರು ಮಗಳ ಈ ಮಾತಿಗೆ ಉತ್ತರವನ್ನು ಕೊಡಲಿಲ್ಲಾ "ಅದಕ ಅವ್ವಾ, ಪ್ರೀತಿಸಿ ಮದುವಿ ಮಾಡ್ಕೊಬೇಕು ಅಂದರ ಅವನ ಗುಣ ಅವ ಗುಣ ತಿಳೀತಾವು ಅಲ್ಲದ ಅವ ನನಗ ಬದುಕು ಕೊಡತ್ತಾನೋ........? ಇಲ್ಲೋ........? ಅನ್ನುದು ತಿಳಿತೈತಿ." ಎಂದು ಮಗಳು ತನ್ನ ವಿಚಾರ ಮುಂದುವರೆಸಿದಳು.
ವಿಮಲಮ್ಮನವರು ಮಗಳ ಮಾತು ಕೇಳಿ' ಆವಕ್ಕಾದರು'. ಅಲ್ಲದ ತನಗ ತಿಳೀದೇ ಇದ್ದದ್ದು ಮಗಳಿಗೆ ತಿಳಿದೈತಲ್ಲಾ....! ಅವಳ ಈ ವಿಚಾರ ಸರಿ ಹೋಗಬಹುದು ಎಂದು ತಾಯಿ ಮಗಳ ವಿಷಯದಲ್ಲಿ ಕೈ ಹಾಕಲಿಲ್ಲ ಮಗಳು, "ತನ್ನ ವಿಚಾರ ಸರಿ ಐತಿ ಇದು ನನ್ನ ಬದುಕು "ಎಂದು ಅವಳು ತಾನು ಪ್ರೀತಿಸಿದ ಉಲ್ಲಾಸನೊಂದಿಗೆ ಅಡ್ಡಾಡತೊಡಗಿದಳು. ಇಬ್ಬರೂ ಚಿಕ್ಕ ಚಿಕ್ಕ ಪ್ರವಾಸ ಮಾಡತೊಡಗಿದಳು. ಗೊಡಚಿನಮಲ್ಕಿ, ಗೋಕಾಕ ಪಾಲ್ಸ್ ಮತ್ತು ಭೂತ ಬಂಗ್ಲೆ ಅವರ ಪ್ರವಾಸದ ಸ್ಥಳಗಳಾದವು.
ಒಂದು ದಿನ ಉಲ್ಲಾಸ ತನ್ನ ನಿಧರ್ಾರವನ್ನು ಹೇಳಿದ: "ರತ್ನಾ, ಬರುವ ಫೆಬ್ರುವರಿಯಲ್ಲಿ ನಾವು ಮದುವೆಯಾಗೋಣ." ಅದಕ್ಕೆ ರತ್ನಾ 'ಹೂಂ' ಗುಟ್ಟಿದಳು. ತಮ್ಮ ಮದುವೆಯ ವಿಷಯವನ್ನು ಅವಳು ತನ್ನ ತಾಯಿಯ ಮುಂದೆ ತಿಳಿಸಿದಳು. ತಾಯಿ ಹಿಗ್ಗಿ ಹೀರೇಕಾಯಿಯಾದಳು. ತಾನು ಯಾವ ಜನ್ಮದಲ್ಲಿ ಪುಣ್ಯಮಾಡಿ ಬಂದೆನೋ ತನ್ನ ಮಗಳಿಗೆ ಇಂತ ವರ ಸಿಕ್ಕ. ನಾನೇನೂ ಯ್ಯಾವ ದೇವರಿಗೂ ಒಪ್ಪತ್ತು ಮಾಡಿಲ್ಲ, ವೃತನೂ ಮಾಡಿಲ್ಲ ಆದರೂ ದೇವರು ಕಣ್ಣು ತೆರೆದನಲ್ಲಾ ಎಂದು ಸಂತಸಪಟ್ಟಳು. ಅವಳಿಗೆ ಮುಗಿಲು ಮೂರೇ ಗೇನಾಗಿತ್ತು.
ಫೆಬ್ರುವರಿಯ ಒಂದು ಶುಭ ಮುಹೋರ್ತದಲ್ಲಿ ರತ್ನಾಳ ಮದುವೆ ಮುಗಿದು ಹೋಯಿತು. ಉಲ್ಲಾಸ ಅತ್ತೆಯ ಮನೆಗೆ ಬಂದು ಅವಳ ಜೊತೆ ಸಂತಸದಿಂದ ಮಾತನಾಡಿ ರತ್ನಳನ್ನು ತಾನು ಕೆಲಸ ಮಾಡುವ ಸ್ಥಳಕ್ಕೆ ಕರೆದುಕೊಂಡು ಹೋದನು.
ವಿಮಲಮ್ಮನವರು ಸಂತಸದಿಂದ ಮಗಳನ್ನು ಬೀಳ್ಕೊಟ್ಟರು. ರತ್ನಾ ಮತ್ತು ಉಲ್ಲಾಸ ಬಹಳ ಸಂತೋಷದಲ್ಲಿದ್ದರು. ಉಲ್ಲಾಸ ರತ್ನಳನ್ನು ಬಹಳ ಪ್ರೀತಿಸುತಲ್ಲಿದ್ದ. ಅವಳು ಸ್ವಲ್ಪು ಕೆಮ್ಮುವ ಹಾಗಿಲ್ಲ. ಹಾಗೆ ಅಂಗೈಯಲ್ಲಿಟ್ಟು ನೋಡಿಕೊಳ್ಳುತಲ್ಲಿದ್ದ. ರತ್ನ ಕಣ್ಣು ಮುಚ್ಚಿ ಬಾಯ್ತೆರೆಯುತ್ತಲ್ಲಿದ್ದಳು. ತನ್ನ ತುತ್ತು ತುಪ್ಪದಲ್ಲೇ ಬಿದ್ದದ್ದು ಎಂದು ಆಗಾಗ ಅಂದುಕ್ಕೊಳ್ಳುತ್ತಲ್ಲಿದ್ದಳು.
ಒಂದು ದಿನ ವಿಮಲಮ್ಮನವರಿಗೆ ಒಂದು ಫೋನ್ ಕಾಲ್ ಬಂದಿತು. "ಅವ್ವಾ, ನಾನು ರತ್ನಾ ಮಾತನಾಡುವವಳು ಬರುವ ಸೋಮವಾರವೇ ನಾನು ತವರಿಗೆ ಬರುತ್ತೇನೆ. ನನಗೀಗ ಮೂರು ತಿಂಗಳು." ಂದು ಹೇಳಿ ಫೋನ್ ಕೆಳಗಿಟ್ಟಳು.
ವಿಮಲಮ್ಮನವರಿಗೆ ಸಂತೋಷವೇ ಸಂತೋಷ. ತಾನು ಇನ್ನು ಅಜ್ಜಿ ಆಗುತ್ತೇನೆ ತನಗೆ ಒಬ್ಬ ಮೊಮ್ಮಗ ಹುಟ್ಟುತ್ತಾನೆ. ತಾನೂ ಎಲ್ಲರಂತೆ ಮೊಮ್ಮಗನನ್ನು ಕರೆದುಕೊಂಡು ಪಾಠ, ಪ್ರವಚನ, ಲಗ್ನ -ಮೋರ್ತ ಅಂತಾ ಹೋಗಬಹುದು ಎಂದೆಲ್ಲಾ ಯೋಚನೆ ಮಾಡುವಳು.
ರತ್ನಾ ತವರಿಗೆ ಬಂದದ್ದು ಆಯಿತು. ಮಗನನ್ನು ಪಡೆದದ್ದು ಆಯಿತು. ಆದರೆ ಉಲ್ಲಾಸನ ಆಗಮನವೇ ಇಲ್ಲ. ಒಂದು ದಿನ ಮಧ್ಯಾಹ್ನ ರತ್ನನ ಫೋನಿಗೆ ಕಾಲೊಂದು ಬಂದಿತು. ಅದು ಮತ್ತಾರದೂ ಆಗಿರದೇ ಉಲ್ಲಾಸನದೇ ಆಗಿತ್ತು. ಆತ ಹೇಳುತಲಿದ್ದ: "ರತ್ನ, ನನ್ನನ್ನು ಕ್ಷಮಿಸಿ ಬಿಡು ಈಗ ನಾನು ನನ್ನ ತಂದೆ-ತಾಯಿ, ಅಕ್ಕ- ತಂಗಿ, ಅಣ್ಣ-ತಮ್ಮಂದಿರ ಬಾಹು ಬಂಧನ ದಲ್ಲಿದ್ದೇನೆ ಹಾಗೂ ನಮ್ಮದೇ ಕಾಸ್ಟಿನ ಹುಡುಗಿಯನ್ನು.........ಇದೇ......."ಅವನು ಇನ್ನೂ ಏನೇನೋ ಹೇಳುತ್ತಲಿದ್ದ ರತ್ನಾ ಕೈಯಲ್ಲಿಯ ಫೋನನ್ನು ಬೀಸಾಡಿ ಒಗೆದು ಬಿಟ್ಟಳು. ವಿಮಲಮ್ಮ ಇದನ್ನೆಲ್ಲಾ ಎವೆಯಿಕ್ಕದೇ ನೋಡುತ್ತಿದ್ದರು.