‘ನಮ್ಮ ಸಂವಿಧಾನದಿಂದಲೇ ಮಹಿಳೆಯರಿಗೆ ಅಧಿಕಾರ’
ಧಾರವಾಡ 26 : ಭಾರತವು ಸ್ವೀಕರಿಸಿರುವ ಶ್ರೇಷ್ಠ ಸಂವಿಧಾನದಿಂದಲೇ ರಾಷ್ಟ್ರದ ಮಹಿಳೆಯರಿಗೆ ಅಧಿಕಾರ ಪ್ರಾಪ್ತವಾಗಿದೆ ಎಂದು ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ತವನಪ್ಪ ಅಷ್ಟಗಿ ಹೇಳಿದರು.
ಅವರು ತಾಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ಹಮ್ಮಿಕೊಂಡಿದ್ದ 76ನೆಯ ಗಣರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ ಮಾತನಾಡುತ್ತಿದ್ದರು. ಭಾರತದ ಲಿಖಿತ ಸಂವಿಧಾನವು ಕೊಡಮಾಡಿದ ಅಧಿಕಾರದ ಅವಕಾಶಗಳ ನೆಲೆಯಲ್ಲಿ ಪ್ರಸ್ತುತ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಹುದ್ದೆಯಲ್ಲಿದ್ದು, ರಾಜ್ಯವ್ಯಾಪಿ ಅನೇಕ ಗ್ರಾಮ ಪಂಚಾಯತಿಗಳಲ್ಲಿ ಮಹಿಳೆಯರೇ ಅಧ್ಯಕ್ಷರಾಗಿದ್ದಾರೆ ಎಂದೂ ಅವರು ಹೇಳಿದರು.
ಪ್ರಶಸ್ತಿ ಪ್ರದಾನ : ಇದೇ ಸಂದರ್ಭದಲ್ಲಿ ಹಾರೋಬೆಳವಡಿ ಸರಕಾರಿ ಪ್ರಾ.ಶಾ. ಶಿಕ್ಷಕಿ ರತ್ನಾ ಬಣಕಾರ ಅವರಿಗೆ ಕರವೇ ‘ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ’ ಪ್ರದಾನ ಮಾಡಿತು. ಕಿತ್ತೂರ ರಾಣಿ ಚೆನ್ನಮ್ಮ ಸೌಹಾರ್ದ ಸಹಕಾರಿ ಸಂಸ್ಥೆ ಕೇಂದ್ರ ಕಚೇರಿ ನಿರ್ದೇಶಕ ರಾಮಣ್ಣ ಜಕ್ಕಣ್ಣವರ, ಹಾರೋಬೆಳವಡಿ ಗ್ರಾ. ಪಂ. ಅಧ್ಯಕ್ಷೆ ಕಾಳವ್ವ ಬಡಿಗೇರ, ಪಿಡಿಓ ಎನ್. ಎಫ್. ಮಾಳನವರ, ಎಸ್‌ಡಿಎಂಸಿ ಅಧ್ಯಕ್ಷ ಶಿವಾನಂದ ಕನಾಜಿ, ಸರಕಾರಿ ಪ್ರಾ.ಶಾ. ಮುಖ್ಯಾಧ್ಯಾಪಕಿ ಸುರೇಖಾ ದೇಸಾಯಿ, ವಿವಿಧ ಕ್ಷೇತ್ರಗಳ ನಂದಾ ದೊಡ್ಡಮನಿ, ಕಲಾವತಿ ಸರದೇಸಾಯಿ, ವಿಜಯಕಲಾ ಬಡಿಗೇರ ಅವರನ್ನು ಸನ್ಮಾನಿಸಲಾಯಿತು.
ಗ್ರಾ.ಪಂ. ಸದಸ್ಯರುಗಳಾದ ವಿರೇಶ ಕನಾಜಿ, ಲೀಲಾವತಿ ಹೊರಗಿನಮಠ, ಈರಮ್ಮ ಉದಮೀಶಿ, ರೇಣುಕಾ ಅಮಟೂರ, ಉಪನ್ಯಾಸಕ ಉಲ್ಲಾಸ ದೊಡ್ಡಮನಿ, ರಾಯಪ್ಪ ಸೊಗಲದ, ಮೌನೇಶ್ವರ ಕಳ್ಳಿಮನಿ, ಶಂಕರ ತಳವಾರ, ಹಾರೋಬೆಳವಡಿಯ ಶಿಕ್ಷಕ-ಶಿಕ್ಷಕಿಯರು, ಎಸ್‌ಡಿಎಂಸಿ ಪದಾಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸಂಜಿವಿನಿ ಒಕ್ಕೂಟದ ಸದಸ್ಯರು, ಗ್ರಾಮದ ಯುವ ಸಂಘಟನೆಗಳ ಪದಾಧಿಕಾರಿಗಳು, ಕರವೇ ಕಾರ್ಯಕರ್ತರು ರಾಷ್ಟ್ರವಂದನೆಯಲ್ಲಿ ಪಾಲ್ಗೊಂಡಿದ್ದರು.
ಶಿಕ್ಷಕ ಕೆ. ಜಿ. ಪಾಟೀಲ ಸ್ವಾಗತಿಸಿದರು. ಉಲ್ಲಾಸ ದೊಡ್ಡಮನಿ ನಿರೂಪಿಸಿದರು. ರಾಯಪ್ಪ ಸೊಗಲದ ಸ್ವಾಗತಿಸಿ ವಂದಿಸಿದರು.